– ನಕಲಿ ಫೇಸ್‍ಬುಕ್ ಖಾತೆಯಿಂದ ರಿಕ್ಷೆಸ್ಟ್
ಅಹಮದಾಬಾದ್: ಫೇಸ್‍ಬುಕ್ ಮೂಲಕ ಮಹಿಳೆಯೊಬ್ಬಳು ಉದ್ಯಮಿಯನ್ನು ಪರಿಚಯಿಸಿಕೊಂಡು ಬೆದರಿಕೆಯೊಡ್ಡಿ 2.54 ಲಕ್ಷ ರೂ. ದೋಚಿರುವ ಘಟನೆ ಅಹಮದಾಬಾದ್‍ನ ಶೆಲಾದಲ್ಲಿ ನಡೆದಿದೆ.
ಪೂಜಾ ಪ್ರಜಾಪತಿ ಹೆಸರಿನ ಪ್ರೊಫೈಲ್‍ನಿಂದ ಫೇಸ್‍ಬುಕ್‍ನಲ್ಲಿ ಬಂದಿರುವ ಫ್ರೆಂಡ್ ರಿಕ್ವೆಸ್ಟ್ ಅನ್ನು ಉದ್ಯಮಿ ಕಲ್ಪೇಶ್ ಸ್ವೀಕರಿಸಿದ್ದರು. ಸ್ವಲ್ಪ ಸಮಯದವರೆಗೆ ಚಾಟ್ ಮಾಡಿದ ನಂತರ ಪೂಜಾ, ಉದ್ಯಮಿಯನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾಳೆ. ಹಾಗೆಯೇ ಇಬ್ಬರೂ ಅಕ್ಟೋಬರ್ 19ರಂದು ಅವರ ವಿರಾಮಗಂ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಆಗ ಪೂಜಾ, ತನಗೆ ಸ್ವಲ್ಪ ನೀರು ಕೊಡುವಂತೆ ಕೇಳಿಕೊಂಡಿದ್ದಾಳೆ. ಅಂತೆಯೇ ನೀರು ತರಲು ಕಲ್ಪೇಶ್ ಅಡುಗೆ ಮನೆಗೆ ಹೋಗಿದ್ದಾನೆ. ಈ ವೇಳೆ ಪೂಜಾ ತನ್ನ ಫೋನ್‍ನಲ್ಲಿ ವೀಡಿಯೊ-ರೆಕಾಡಿರ್ಂಗ್ ಅನ್ನು ಆನ್ ಮಾಡಿದ್ದಳು. ಇತ್ತ ಅದೇ ಸಮಯದಲ್ಲಿ ನಾಲ್ಕು ಜನ ಪೂಜಾ ಕಡೆಯವರು ಮನೆಯೊಳಗೆ ನುಗ್ಗಿ ಕಲ್ಪೇಶ್‍ನನ್ನು ಹೊಡೆದಿದ್ದಾರೆ.
ಮನೆಯೊಳಗೆ ನುಗ್ಗಿದ ನಾಲ್ವರು ಅತ್ಯಾಚಾರ ಪ್ರಕರಣದಲ್ಲಿ ಕಲ್ಪೇಶ್‍ನ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ವಿರಮ್‍ಗಮ್-ಸಚ್ನಾ ರಸ್ತೆಯಲ್ಲಿರುವ ಕಲ್ಪೇಶ್ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದರು. ನಂತರ ಅಲ್ಲಿಂದ ಕಲ್ಪೇಶ್‍ನನ್ನು ಮತ್ತೊಂದು ಕಾರಿನಲ್ಲಿ ಕರೆದೊಯ್ದು ನಾಲ್ವರು 20 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದಾರೆ. ಹಣವನ್ನು ನೀಡದಿದ್ದರೆ ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಕಲ್ಪೇಶ್ ಸುಮಾರು 2.45 ಲಕ್ಷ ರೂ. ನಗದು ಮತ್ತು ಒಟ್ಟು 3.5 ಲಕ್ಷ ರೂ.ಗಳ ಮೂರು ಚೆಕ್‍ಗಳನ್ನು ಕೊಟ್ಟಿದ್ದಾರೆ. ಕಲ್ಪೇಶ್‍ನನ್ನು ಅವನ ಕಾರಿನ ಬಳಿ ಇಳಿಸಿ ನಾಲ್ವರು ಪರಾರಿಯಾಗಿದ್ದಾರೆ.
ಹನಿಟ್ರ್ಯಾಪ್ ಪ್ರಕರಣದಲ್ಲಿರುವ ಪೂಜಾ ಹಾಗೂ ಈಕೆಯೊಂದಿಗೆ ಭಾಗಿಯಾಗಿದ್ದ ಆರು ಜನರ ವಿರುದ್ಧ ವಿರಾಮಗಂ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಅಹಮದಾಬಾದ್ ಗ್ರಾಮೀಣ ಎಸ್‍ಒಜಿ ಸುರೇಂದ್ರನಗರ ನಿವಾಸಿ ಇರ್ಫಾನ್ ಮಲಾನಿಯನ್ನು ಬಂಧಿಸಲಾಗಿದೆ. ಪೊಲೀಸರು ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಉದ್ಯಮಿ ಕಲ್ಪೇಶ್ ವಿರಮ್‍ಗ್ಯಾಮ್‍ನಲ್ಲಿ ವ್ಯವಹಾರವನ್ನು ಹೊಂದಿದ್ದಾನೆ. ಇಬ್ಬರು ಪುತ್ರರು ಸೇರಿದಂತೆ ತನ್ನ ಕುಟುಂಬದೊಂದಿಗೆ ಶೇಲಾದ ಆಪಲ್‍ವುಡ್ಸ್ ಟೌನ್‍ಶಿಪ್‍ನಲ್ಲಿ ವಾಸವಾಗಿದ್ದಾರೆ.