ಉಡುಪಿ: ಇದೇ ರೀತಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಾ ಹೋದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ವಿಫಲ ಆಗಬಾರದು ಅನ್ನೋದು ನಮ್ಮ ಬಯಕೆ. ಲಾಕ್‍ಡೌನ್ ಯಶಸ್ವಿಗೊಳಿಸಲು ಎಲ್ಲರೂ ಜೊತೆಯಾಗಿ ಕೆಲಸ ಮಾಡ್ತಿದ್ದೇವೆ. ಎಲ್ಲಾ ಶಾಸಕರು ಮಂತ್ರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಕರಣಗಳ ಸಂಖ್ಯೆ ಮುಂದುವರಿದರೆ ವ್ಯವಸ್ಥೆಯನ್ನು ಕಠಿಣ ಗಳಿಸಬೇಕಾಗುತ್ತದೆ. ಹಾಗೆ ಆಗದಿರಲಿ ಅನ್ನೋದು ನಮ್ಮ ಆಶಯ ಎಂದರು.
ಕೊರೊನಾ ನಿಯಂತ್ರಣಕ್ಕೆ ಸಿಎಂ ಕಠಿಣ ಕ್ರಮ ಕೈಗೊಂಡಿದ್ದಾರೆ. ಎಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಲಾಕ್ ಡೌನ್ ಪಾಲನೆ ಕುರಿತು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಸಮಯ ನಿಗದಿ, ಅಧಿಕಾರಿಗಳ ಬಳಕೆ, ಪಾಸಿಟಿವ್ ರೋಗಿಗಳ ಆಸ್ಪತ್ರೆ ಸೇರ್ಪಡೆ ಗೆ ಸೂಚನೆ ನೀಡಿದ್ದಾರೆ. ಜನತೆ ಮನೆಯೊಳಗೆ ಇದ್ದುಕೊಂಡೇ ಕಫ್ರ್ಯೂ ಪಾಲಿಸಿ ಎಂದು ಮನವಿ ಮಾಡಿಕೊಂಡರು.
ಅಗತ್ಯ ವಸ್ತು ಖರೀದಿಗೆ 10 ಗಂಟೆಯವರೆಗೆ ಮಾತ್ರ ಸಮಯವಕಾಶ ಇದೆ. ಜನ ಹತ್ತು ಗಂಟೆಯ ನಂತರ ಓಡಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಧಾಕರ್ ಹೇಳಿಕೆ ನೀಡಿದ್ದಾರೆ. ಹತ್ತು ಗಂಟೆಯ ನಂತರ ಓಡಾಟ ಸರಿಯಲ್ಲ. ತಜ್ಞರು ಈ ಬಗ್ಗೆ ಸರಕಾರಕ್ಕೆ ಸಲಹೆ ನೀಡಿದ್ದಾರೆ . ಸಮಯ ಸೀಮಿತಗೊಳಿಸುವ ಬಗ್ಗೆ ಸಿಎಂ ಮತ್ತು ಆರೋಗ್ಯ ಮಂತ್ರಿ ಜೊತೆ ಮಾತನಾಡುವೆ ಎಂದು ತಿಳಿಸಿದರು.
ಪಾಸಿಟಿವ್ ಬಂದ ವ್ಯಕ್ತಿಗೆ ಅಗತ್ಯವಿದ್ದರೆ ಆಸ್ಪತ್ರೆಗೆ ಕಳುಹಿಸುತ್ತೇವೆ. ಮನೆಯಲ್ಲಿ ವ್ಯವಸ್ಥೆ ಇಲ್ಲದ ವ್ಯಕ್ತಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ. ಲಾಕ್ ಡೌನ್ ಕಟ್ಟುನಿಟ್ಟಿನ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ತೇವೆ. ಜನರ ಓಡಾಟ ಹೆಚ್ಚಾದರೆ ಕೊರೋನ ನಿಯಂತ್ರಣ ಸಾಧ್ಯವಿಲ್ಲ. 10 ಗಂಟೆಯ ಒಳಗಾಗಿ ಜನರು ಮನೆ ಸೇರಬೇಕು. ಮನೆಯೊಳಗಿದ್ದುಕೊಂಡೇ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಸಚಿವರು ನುಡಿದರು.