ರಾಯಚೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಕೆಲ ಬಂಕ್ ಮಾಲೀಕರು ಕಳ್ಳಾಟವಾಡಲು ಪ್ರಾರಂಭಿಸಿದ್ದಾರೆ. ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನೀರು ಮಿಶ್ರಿತ ಡೀಸೆಲ್ ಹಾಕಿದ್ದರಿಂದ ಎರಡು ಕಾರುಗಳ ಇಂಜಿನ್ ಸೀಜ್ ಆಗಿದ್ದು, ಕಾರು ಚಾಲಕರು ಪೆಟ್ರೋಲ್ ಬಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಪಟ್ಟಣದ ಎಸ್‍ಆರ್ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್ ನಲ್ಲಿ ನೀರು ಮಿಶ್ರಿತ ಡೀಸೆಲ್ ಕಂಡು ಬಂದಿದೆ. ಎರಡು ಕಾರುಗಳಿಗೆ ಹಾಕಿಸಿದ್ದ ಡಿಸೇಲ್ ನಲ್ಲಿ ನೀರು ಪತ್ತೆಯಾಗಿದೆ. ಮುದಗಲ್ ನಿಂದ ರಾಯಚೂರಿಗೆ ಹೋಗುವಾಗ ಎರಡು ಕಾರುಗಳ ಇಂಜಿನ್ ಮಾರ್ಗಮಧ್ಯೆ ಸೀಜ್ ಆಗಿವೆ. ಎರಡು ಕಾರುಗಳ ಇಂಜಿನ್ ಸೀಜ್ ಆಗಿದ್ದರಿಂದ ಅನುಮಾನಗೊಂಡು ಪರೀಕ್ಷಿಸಿದಾಗ ಡಿಸೇಲ್‍ನಲ್ಲಿ ನೀರು ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಇಂದಿನಿಂದ ಮಂತ್ರಾಲಯ ಭಕ್ತರ ದರ್ಶನಕ್ಕೆ ಅವಕಾಶ
Advertisement
Advertisement
ಪೆಟ್ರೋಲ್, ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ಗ್ರಾಹಕರಿಗೆ ವಂಚನೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎರಡು ಕಾರಗಳ ಇಂಜಿನ್ ಸೀಜ್ ಆಗಿದೆ ಎಂದು ವಾಹನಗಳ ಚಾಲಕರು ಪ್ರತಿಭಟನೆ ನಡೆಸಿ, ಇಂಜಿನ್ ಸೀಜ್ ಆದ ಕಾರುಗಳನ್ನು ಸರಿಪಡಿಸಿಕೊಡುವಂತೆ ಒತ್ತಾಯಿಸಿದ್ದಾರೆ.
Advertisement