ನವದೆಹಲಿ: ಪೆಗಾಸಸ್ ಸ್ಪೈವೇರ್ ಸಾಫ್ಟ್ ವೇರ್ ಬಳಸಿ ಯಾರ ಮೇಲೂ ಗೂಢಾಚಾರಿಕೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದೆ.
ಅರ್ಜಿದಾರರ ಎಲ್ಲಾ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ್ದು, ಪೆಗಾಸಸ್ ಬಳಸಿ ಯಾರನ್ನೂ ಟ್ರ್ಯಾಪ್ ಮಾಡಿಲ್ಲ. ಕೇವಲ ಊಹೆಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಲಾಗಿದೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ
ಈ ವಿಚಾರವಾಗಿ ಪರಿಣಿತರ ಸಮಿತಿಯೊಂದನ್ನು ಕೇಂದ್ರ ರಚನೆ ಮಾಡಲಿದೆ. ಆ ಸಮಿತಿ ಎಲ್ಲಾ ಆಯಾಮಗಳಲ್ಲಿ ಅಧ್ಯಯನ ನಡೆಸಲಿದೆ. ತನಿಖೆಯ ನಂತರ ಈ ಬಗ್ಗೆ ಮಾಹಿತಿ ನೀಡಲಿದೆ. ಪೆಗಾಸಸ್ ಬಗ್ಗೆ ಸುಳ್ಳು ವರದಿ ಮಾಡಿದವರ ಬಣ್ಣವನ್ನು ಈ ಸಮಿತಿ ಬಯಲು ಮಾಡಲಿದೆ ಎಂದು ಸುಪ್ರೀಂ ಕೋರ್ಟ್ ಮುಂದೆ ಕೇಂದ್ರ ಸರ್ಕಾರದ ತನ್ನ ವಾದವನ್ನು ಮುಂದಿರಿಸಿದೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಪತನಕ್ಕೆ ಪೆಗಾಸಸ್ ಕಾರಣ: ಪರಮೇಶ್ವರ್
ಕೇಂದ್ರ ಸರ್ಕಾರ ಪೆಗಾಸಸ್ ಸ್ಪೈವೇರ್ ಬಳಸಿ ಫೋನ್ ಟ್ರ್ಯಾಪ್ ಮಾಡಿದೆ ಎಂದು ಆರೋಪಿಸಿ ಎಡಿಟರ್ಸ್ ಗ್ರಿಡ್ ಜೊತೆ ಹಿರಿಯ ಪತ್ರಕರ್ತರಾದ ಎನ್. ರಾಮ್ ಮತ್ತು ಶಶಿ ಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ಮು.ನ್ಯಾ ಎನ್ ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿದೆ.