ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶೋ 8ರ ವಿನ್ನರ್ ಆಗಿ ಮಂಜು ಪಾವಗಡ ಅವರು ಹೊರಹೊಮ್ಮಿದ್ದಾರೆ. ಇದೀಗ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಮಾತನಾಡುತ್ತಾ ಕರ್ನಾಟಕದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿನ್ನರ್ ಅಂತ ಘೋಷಣೆಯಾಗುತ್ತಿದ್ದಂತೆಯೇ ತುಂಬಾನೇ ಖುಷಿಯಾದೆ. ಟಾಪ್ 5 ಅಂತ ಬಂದಾಗಲೇ ನಾನು ಗೆದ್ದಿದ್ದೀನಿ ಅನ್ನೋ ಖುಷಿ ಇತ್ತು. ಏನೂ ಇಲ್ಲದೆ ಅಂತಹ ದೊಡ್ಡ ಸ್ಟೇಜ್ ಗೆ ಹೋಗಿ ಟಾಪ್ 5 ಬರೋದು ದೊಡ್ಡ ಮಾತು ಎಂದರು.
ನನಗೆ ತುಂಬಾನೇ ಖುಷಿಯಾಗಿರುವುದು ಅಂದರೆ, 45 ಲಕ್ಷ ವೋಟ್ ಬಂದಿರುವುದು. ಇದು ತಮಾಷೆ ಮಾತೇ ಇಲ್ಲ. ಕರ್ನಾಟಕದ ಎಲ್ಲಾ ಜನತೆಗೆ ತುಂಬಾ ಧನ್ಯವಾದಗಳೂ. ಯಾಕಂದ್ರೆ ಈ ಪುಟ್ಟ ಕಲಾವಿದನನ್ನು ಪ್ರತಿ ವಾರನೂ ಇಷ್ಟಪಟ್ಟು ವೋಟ್ ಮಾಡಿ ಫಿನಾಲೆ ತಲುಪಿಸಿ ವಿನ್ನರ್ ಮಾಡಿದ್ದೀರಿ. ಅದಕ್ಕೆ ನಾನು ಯಾವತ್ತೂ ಚಿರಋಣಿ. ನಾನು ಇರುವವರೆಗೂ ಎಲ್ಲರನ್ನೂ ಮನರಂಜಿಸುತ್ತಾ ನಗಿಸುತ್ತಾ ಇರುತ್ತೇನೆ ಎಂದು ಮಂಜು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು
ನಾನೊಬ್ಬ ರಂಗಭೂಮಿ ಕಲಾವಿದನಾಗಿದ್ದೆ. ಅಲ್ಲಿಂದ ನಾನು ಜನರನ್ನು ಮನರಂಜಿಸುವತ್ತ ಬಂದೆ. ನಾನು ಕೂಡ ಒಬ್ಬ ಬಿಗ್ ಬಾಸ್ ಶೋ ಅಭಿಮಾನಿ. ಅಂತಹ ಶೋಗೆ ನಾನೇ ಸೆಲೆಕ್ಟ್ ಆದಾಗ ತುಂಬಾ ಖುಷಿಯಾಗಿದ್ದೆ. ಈ ಶೋ 72 ದಿನ ನಡೆದ ಬಳಿಕ ಕೋವಿಡ್ ಅಲೆಯಿಂದ ಕೆಲ ದಿನಗಳ ಕಾಲ ನಿಂತು ಹೋಯಿತು. ಈ ವೇಳೆ ನನಗೆ ತುಂಬಾ ಬೇಜಾರಾಗಿತ್ತು. ಸಾವಿರಾರು ಕನಸು ಕಟ್ಟಿಕೊಂಡು ಬಂದ್ವಿ. ನಮಗೆ ಹಿಂಗೇ ಆಗ್ಬೇಕಾ ಅನ್ನೋ ನೋವು ನನ್ನನ್ನು ಕಾಡಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಟಾಸ್ಕ್ ಮಾಸ್ಟರ್, ಪರ್ಫೆಕ್ಷನಿಸ್ಟ್ ಅರವಿಂದ್‍ಗೆ ಎರಡನೇ ಸ್ಥಾನ
ಬಿಗ್ ಬಾಸ್ ಇತಿಹಾಸದಲ್ಲಿಯೇ 2ನೇ ಇನ್ನಿಂಗ್ಸ್ ಅನ್ನೊದು ಇರಲೇ ಇಲ್ಲ. 11 ಮಂದಿ ಸ್ಪರ್ಧಿಗಳು 43 ದಿನ ಹೊರಗಡೆ ಇದ್ದು, ಮತ್ತೆ ಒಳಗಡೆ ಹೋಗಿ 48 ದಿನ ಆಡೋದು ಅಸಾಧಾರಣ ಮಾತು. ಇಂತಹ ಸ್ಪೆಷಲ್ ಎಪಿಸೋಡ್ ನಲ್ಲಿ ನಾನು ಗೆದ್ದಿರೋದು ಸಿಕ್ಕಾಪಟ್ಟೆ ಖುಷಿಯಾಗಿದೆ. ಅದಕ್ಕೆ ಕಾರಣ ವೀಕ್ಷಕರು ಕೊಟ್ಟಂತಹ ಪ್ರೀತಿ, ವಿಶ್ವಾಸ. ಇದನ್ನು ನಾನು ಸಾಯುವವರೆಗೂ ಉಳಿಸಿಕೊಳ್ಳುತ್ತೇನೆ ಎಂದು ಮಂಜು ಭರವಸೆ ನಿಡಿದರು. ಇದನ್ನೂ ಓದಿ: ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ