ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಅಭಿಮಾನಿಯೋರ್ವ ಪಿಚ್ ಬಳಿ ಓಡಿ ಬರುತ್ತಿದ್ದಂತೆ ಕೊಹ್ಲಿ ಅಭಿಮಾನಿಯಿಂದ ಅಂತರ ಕಾಯ್ದುಕೊಂಡು ಹತ್ತಿರ ಬರದಂತೆ ಕೇಳಿಕೊಂಡಿದ್ದಾರೆ.
Advertisement
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ನ ಮೊದಲ ದಿನದಾಟದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಂತೆ ಅಭಿಮಾನಿಯೋರ್ವ ಪ್ರೇಕ್ಷಕರ ಗ್ಯಾಲರಿಯಿಂದ ಎದ್ದು ಓಡಿಕೊಂಡು ಪಿಚ್ ಬಳಿ ಬರುತ್ತಾನೆ. ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಎಚ್ಚೆತ್ತುಕೊಂಡು ಅಭಿಮಾನಿಯನ್ನು ಅಂತರ ಕಾಪಾಡುವಂತೆ ಕೇಳಿಕೊಂಡು ಹಿಂದೆ ಸರಿದು ಮರಳಿ ತೆರಳುವಂತೆ ಸೂಚಿಸುತ್ತಾರೆ. ಅಭಿಮಾನಿಯು ಕೊಹ್ಲಿಯ ಸೂಚನೆಯಂತೆ ಹಿಂದೆ ಸರಿಯುತ್ತಾನೆ ಇದನ್ನು ಕಂಡ ಪ್ರೇಕ್ಷಕರೆಲ್ಲರೂ ಹರ್ಷೋದ್ಗಾರ ಹಾಕಿ ಸಂಭ್ರಮಿಸಿದರು.
Advertisement
Fan breaches security to meet Virat Kohli#INDvsENG pic.twitter.com/qCF7QQn2hj
— Rohith (@Rohith_Crico) February 24, 2021
Advertisement
ಕೋವಿಡ್-19 ನಿಂದಾಗಿ ಬಯೋ ಬಬಲ್‍ನಲ್ಲಿರುವ ಕ್ರಿಕೆಟ್‍ಗರು ಯಾರನ್ನು ಕೂಡ ಭೇಟಿಯಾಗಲು ಅವಕಾಶ ಇಲ್ಲ. ಹಾಗಾಗಿ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಪಂದ್ಯವು ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತ ಮುಂದುವರಿಯುತ್ತಿದೆ. ಕ್ರೀಡಾಂಗಣಕ್ಕೆ ಕೇವಲ ಶೇ.50 ಮಾತ್ರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.
Advertisement
That's Stumps on Day 1 of the third @Paytm #INDvENG #PinkBallTest! @ImRo45 5⃣7⃣*@imVkohli 2⃣7⃣@ajinkyarahane88 1⃣*#TeamIndia 99/3 & trail England by 13 runs.
Scorecard ???? https://t.co/9HjQB6TZyX pic.twitter.com/P4ziSw1mzz
— BCCI (@BCCI) February 24, 2021
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್‍ನ ಮೊದಲ ದಿನದಾಟದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 13 ರನ್‍ಗಳ ಹಿನ್ನಡೆ ಪಡೆದಿದ್ದರು, ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ. ಇನ್ನೂ ನಾಲ್ಕು ದಿನ ಬಾಕಿಯಿದ್ದು ಬಾರಿ ಕೂತುಹಲ ಕೆರಳಿಸಿದೆ.