ಬೆಳಗ್ಗೆ ಏನು ತಿಂಡಿ ಮಾಡುವುದು ಎಂದು ಯೋಚಿಸುತ್ತಿರುವವರು ಕೊಂಚ ವಿಭಿನ್ನವಾಗಿ ಇಂದು ಹೊಸ ಅಡುಗೆ ವಿಧಾನವನ್ನು ಮನೆಯಲ್ಲಿ ಮಾಡಿ ನೋಡಿ. ಖಾಲಿ ದೋಸೆ ತಿಂದು ಬೇಸರ ಬಂದಿದೆ ಎಂದಾದರೆ ಇಂದು ಸಿಹಿ ದೋಸೆಯನ್ನು ಬೆಳಗ್ಗಿನ ಉಪಹಾರಕ್ಕೆ ಮಾಡಿ. ಇಲ್ಲಿದೆ ಸರಳವಾಗಿ ಸಿಹಿ ದೋಸೆ ಮಾಡುವ ವಿಧಾನ.
Advertisement
ಬೇಕಾಗುವ ಸಾಮಗ್ರಿಗಳು:
Advertisement
* ಅಕ್ಕಿ – 2 ಕಪ್
* ಬೆಲ್ಲ- 1 ಅಚ್ಚು
* ಕೊಬ್ಬರಿ ಪುಡಿ- 1 ಕಪ್
* ಏಲಕ್ಕಿ ಪುಡಿ – ಚಿಟಿಕೆಯಷ್ಟು
* ತುಪ್ಪು- 3 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ರಾತ್ರಿಯೇ ನೀರಿನಲ್ಲಿ ನೆನೆ ಹಾಕಿಟ್ಟಿರಬೇಕು.
* ಬೆಲ್ಲವನ್ನು ಚಿಕ್ಕ ಚಿಕ್ಕದಾಗಿ ಪುಡಿ ಮಾಡಿಕೊಳ್ಳಬೇಕು.
* ನಂತರ ನಿನ್ನೆ ರಾತ್ರಿ ನೆನೆಹಾಕಿಟ್ಟ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ಪುಡಿ ಮಾಡಿಕೊಂಡ ಬೆಲ್ಲ, ಕೊಬ್ಬರಿ, ಏಲಕ್ಕಿ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ನಂತರ ಉಪ್ಪು ಹಾಗೂ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ನೆನೆಯಲು ಬಿಡಬೇಕು.
* ನಂತರ ಕಾವಲಿಯನ್ನು ಒಲೆಯ ಮೇಲಿಟ್ಟು, ಕಾವಲಿ ಕಾದ ನಂತರ ತೆಳುವಾಗಿ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಸುಟ್ಟರೆ ರುಚಿಕರವಾದ ಸಿಹಿ ದೋಸೆ ಸವಿಯಲು ಸಿದ್ಧವಾಗುತ್ತದೆ.