-ದುಪ್ಪಟ್ಟದಿಂದ ನೇಣು ಹಾಕೊಂಡ ಬಾಲಕಿ
ಲಕ್ನೋ: ಪೋಷಕರು ಜೊತೆಯಲ್ಲಿ ಕರೆದುಕೊಂಡ ಹೋಗದಕ್ಕೆ 9 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಬನ್ನಾದೇವಿಯ ಕ್ಷೇತ್ರದ ನಲ್ಕೂಪ್ ಕಾಲೋನಿಯಲ್ಲಿ ನಡೆದಿದೆ.
ಶನಿವಾರ ಸುಭಾಷ್ ಪತ್ನಿ ಜ್ಯೋತಿ ಜೊತೆ ಮನೆ ನೋಡಲು ಹೋಗುತ್ತಿದ್ದರು. ಈ ವೇಳೆ ದಂಪತಿಯ ಮಗಳು ತಾನೋ ಬರೋದಾಗಿ ಹಠ ಹಿಡಿದ್ದಾಳೆ. ಆದ್ರೆ ಪೋಷಕರು ಮನೆಯಲ್ಲಿ ಸೋದರ ಲಲಿತ್ ಜೊತೆ ಕುಳಿತು ಟಿವಿ ನೋಡು ಅಂತಾ ತಿಳಿಸಿ ಹೋಗಿದ್ದಾರೆ. ಸುಭಾಷ್ ಮತ್ತು ಜ್ಯೋತಿ ಮನೆಯಿಂದ ಹೊರ ಹೋಗುತ್ತಿದ್ದಂತೆ ಲಲಿತ್ ಸಹ ಗೆಳೆಯರು ಬಳಿ ಹೋಗಿದ್ದಾನೆ. ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿ ಬಾಗಿಲು ಹಾಕಿಕೊಂಡು ದುಪ್ಪಟ್ಟದಿಂದ ನೇಣು ಹಾಕಿಕೊಂಡಿದ್ದಾಳೆ.
ಆಡಲು ಹೋಗಿದ್ದ ಲಲಿತ್ ಕೆಲ ಸಮಯದ ಬಳಿಕ ಹಿಂದಿರುಗಿ, ಬಾಗಿಲು ತಟ್ಟಿದ್ದಾನೆ. ಬಾಗಿಲು ತೆಗೆಯದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದಾಗ ಸೋದರಿ ಶವ ನೇತಾಡೋದನ್ನು ನೋಡಿ ಕಿರುಚಿದ್ದಾನೆ. ಸ್ಥಳೀಯರು ಆಗಮಿಸಿ ಕೇಳಿದಾಗ ಸೋದರಿ ಸಾವಿನ ಬಗ್ಗೆ ತಿಳಿಸಿದ್ದಾನೆ. ನೆರೆಹೊರೆಯವರು ಸುಭಾಷ್ ಮತ್ತು ಜ್ಯೋತಿಗೆ ಫೋನ್ ಮಾಡಿ ಮಗಳ ಆತ್ಮಹತ್ಯೆಯ ಮಾಹಿತಿ ನೀಡಿದ್ದಾರೆ.
ಮನೆಗೆ ಬಂದ ದಂಪತಿ ಪೊಲೀಸರಿಗೆ ವಿಷಯ ತಿಳಿಸಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಬಾಗಿಲು ತೆಗೆದಿದ್ದಾರೆ. ಪೊಲೀಸರು ಕುಟುಂಬಸ್ಥರು ಮತ್ತು ನೆರೆಹೊರೆಯವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ವಶಕ್ಕೆ ನೀಡಿದ್ದಾರೆ.