– ಶವದ ಪಕ್ಕ ಕುಳಿತು ಮೊಬೈಲ್ ಗೇಮ್ ಆಡ್ತಿದ್ದ ಪತಿ
ಜೈಪುರ: ರಾಜಸ್ಥಾನದ ಜೋಧಪುರ ನಗರದ ಮಹಾಮಂದಿರ ಠಾಣಾ ವ್ಯಾಪ್ತಿಯ ಬಿಜೆಎಸ್ ಕಾಲೋನಿಯಲ್ಲಿ ಪತಿಯೇ ಪತ್ನಿಯನ್ನ ಕೊಂದಿದ್ದಾನೆ. ಕೊಲೆಯ ಬಳಿಕ ಮಗಳ ಶವ ನೋಡಲು ಬನ್ನಿ ಎಂದು ಮಾವನಿಗೆ ಕರೆ ಮಾಡಿ ತಿಳಿಸಿದ್ದಾನೆ. ಭಾನುವಾರ ರಾತ್ರಿ ಕೊಲೆನಡೆದಿದ್ದು, ಪೊಲೀಸರು ಬರೋವರೆಗೂ ಶವದ ಪಕ್ಕದಲ್ಲಿಯೇ ಕುಳಿತು ಮೊಬೈಲ್ ಗೇಮ್ ಆಡುತ್ತಿದ್ದನು.
Advertisement
ಶಿವ ಕಂವರಾ ಪತಿ ವಿಕ್ರಂ ಸಿಂಗ್ ನಿಂದ ಕೊಲೆಯಾದ ಮಹಿಳೆ. ಕತ್ತರಿಯಿಂದ ದಾಳಿ ನಡೆಸಿ ಪತ್ನಿಯನ್ನ ಕೊಲೆಗೈದಿರೋದಾಗಿ ವಿಕ್ರಂ ಸಿಂಗ್ ಒಪ್ಪಿಕೊಂಡಿದ್ದಾನೆ. ಪತ್ನಿಯನ್ನ ಕೊಲೆ ಮಾಡಿದ ಗಳಿಗೆಯಲ್ಲಿ ತನಗೆ ಏನಾಯ್ತು ಎಂದು ಗೊತ್ತಿಲ್ಲ. ಎಲ್ಲವೂ ಅಸ್ಪಷ್ಟ, ಆದ್ರೆ ಪತ್ನಿಯನ್ನ ಕೊಲೆ ಮಾಡಿದ್ದು ನಾನೇ ಎಂದು ಸಹ ವಿಚಾರಣೆ ವೇಳೆ ವಿಕ್ರಂ ಸಿಂಗ್ ಹೇಳಿದ್ದಾನೆ. ಇದನ್ನೂ ಓದಿ: ಸೆಕ್ಸ್ ಬೇಡ ಎಂದ ಪತ್ನಿಯನ್ನೇ ಕೊಂದ ಪತಿಯ ಆರೋಪ ಸಾಬೀತು
Advertisement
Advertisement
ಮೊಬೈಲ್ ಗೇಮ್ ಆಡ್ತಿದ್ದ: ರಾತ್ರಿ ಕೊಲೆ ಮಾಡಿದ್ದರೂ ವಿಕ್ರಂ ಸಿಂಗ್ ಪತ್ನಿಯ ಶವದ ಪಕ್ಕವೇ ಕುಳಿತು ಮೊಬೈಲ್ ಗೇಮ್ ಆಡುತ್ತಿದ್ದನು. ಆತ ಓಡಿ ಹೋಗುವ ಪ್ರಯತ್ನವೂ ಸಹ ಮಾಡಿಲ್ಲ. ಮನೆಯಲ್ಲಿದ್ದ ಮಕ್ಕಳಿಗೂ ಆತ ಏನು ಮಾಡಿಲ್ಲ. ಆರೋಪಿ ಮೇಲ್ನೀಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಓರ್ವ ಮಗಳು ಮತ್ತು ಮಗನಿದ್ದಾನೆ. ಇದನ್ನೂ ಓದಿ: ಸೆಕ್ಸ್‌ಗೆ ಒಪ್ಪದ ಪತ್ನಿ- ಖಿನ್ನತೆಯಿಂದ ಪತಿ ಸೂಸೈಡ್
Advertisement
ನಿರುದ್ಯೋಗಿಯಾಗಿದ್ದ ಆರೋಪಿ: ವಿಕ್ರಂ ಸಿಂಗ್ ಮೂಲತಃ ಫಲೇದಿಯ ನಿವಾಸಿಯಾಗಿದ್ದು, ಬಿಜೆಎಸ್ ಕಾಲೋನಿಯಲ್ಲಿರುವ ಮನೆಯಲ್ಲಿ ಬಹಳ ದಿನಗಳಿಂದ ವಿಕ್ರಂಸಿಂಗ್ ಕುಟುಂಬ ಸಮೇತನಾಗಿ ವಾಸವಾಗಿದ್ದನು. ವಿಕ್ರಂ ಸಿಂಗ್ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದನು. ಪತ್ನಿ ಮೊದಲಿಗೆ ಮನೆಯಲ್ಲಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಸಹಕಾರಿ ಸ್ಟೋರ್ ನಲ್ಲಿ ಪತ್ನಿ ಕೆಲಸಕ್ಕೆ ಸೇರಿಕೊಂಡಿದ್ದರು. ಸಹಕಾರಿ ಸ್ಟೋರ್ ನಲ್ಲಿ ಪತ್ನಿ ಕೆಲಸ ಮಾಡೋದು ವಿಕ್ರಂಗೆ ಇಷ್ಟವಿರಲಿಲ್ಲ. ಇದನ್ನೂ ಓದಿ: ಸುಂದರ ಪತ್ನಿಯಿದ್ರೂ ಮತ್ತೊಬ್ಬಾಕೆಯ ಬಾಹುಗಳಲ್ಲಿ ಸೆರೆಯಾದವನಿಂದ ಮಡದಿಯ ಕೊಲೆ?
2008ರಲ್ಲಿ ವಿಕ್ರಂ ಮತ್ತು ಶಿವ ಮದುವೆ ನಡೆದಿತ್ತು. ತುಂಬಾ ದಿನಗಳಿಂದ ನಿರುದ್ಯೋಗಿಯಾಗಿದ್ದ ವಿಕ್ರಂ ಪತ್ನಿ ಜೊತೆ ಸದಾ ಜಗಳ ಮಾಡುತ್ತಿದ್ದನು. ಹಣಕ್ಕಾಗಿ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದನು. ಕೊಲೆಯ ಬಳಿಕ ಮಾವ ಮತ್ತು ಪೊಲೀಸರಿಗೆ ಆತನೇ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ ಎಂದು ಡಿಸಿಪಿ ಧರ್ಮೇಂದ್ರ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಪತಿಯಿಂದಲೇ ಪತ್ನಿ ಕೊಲೆ- 4 ದಿನದಿಂದ ಮೃತದೇಹ ಮುಂದಿಟ್ಟುಕೊಂಡು ಸಂಬಂಧಿಕರಿಂದ ಪ್ರತಿಭಟನೆ
ಭಾನುವಾರ ಮಲಗಿದ್ದ ನನಗೆ ದಿಢೀರ್ ಎಚ್ಚರವಾಯ್ತು. ಕೂಡಲೇ ಕತ್ತರಿಯಿಂದ ಪತ್ನಿಯನ್ನ ಕೊಲೆ ಮಾಡಿದೆ. ಆ ಕ್ಷಣ ಏನಾಯ್ತು ಎಂಬುದು ನನ್ನ ಅರಿವಿಗೆ ಬರಲಿಲ್ಲ ಎಂದು ವಿಕ್ರಂ ಸಿಂಗ್ ಹೇಳಿದ್ದಾನೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ರವಾನಿಸಲಾಗಿದೆ. ಆರೋಪಿ ವಿಕ್ರಂ ಸಿಂಗ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಪತ್ನಿ ಕೊಲೆ ಆರೋಪದಲ್ಲಿ ಪತಿಗೆ ಜೈಲು ಶಿಕ್ಷೆ – 7 ವರ್ಷಗಳ ನಂತ್ರ ಹೆಂಡ್ತಿ ಪತ್ತೆ