ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಿಂದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಬಿಸಿಸಿಐ ಕೈಬಿಟ್ಟಿದೆ.
Advertisement
ಜಸ್ಪ್ರೀತ್ ಬುಮ್ರಾ ವೈಯಕ್ತಿಕ ಕಾರಣದಿಂದಾಗಿ ತಂಡದಿಂದ ಹೊರಗುಳಿಯಲು ಅವಕಾಶ ಕೊಡುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದರು. ಆ ಮನವಿಯನ್ನು ಪುರಸ್ಕರಿಸಿರುವ ಬಿಸಿಸಿಐ ನಾಲ್ಕನೇ ಟೆಸ್ಟ್ ಪಂದ್ಯದಿಂದ ಬುಮ್ರಾ ಅವರಿಗೆ ತಂಡದಿಂದ ಬೇರ್ಪಡಲು ಅವಕಾಶ ಮಾಡಿಕೊಟ್ಟಿದೆ.
Advertisement
NEWS – Jasprit Bumrah released from India’s squad
Jasprit Bumrah made a request to BCCI to be released from India’s squad ahead of the fourth Test owing to personal reasons.
More details – https://t.co/w2wlfodmq8 #INDvENG pic.twitter.com/mREocEuCGa
— BCCI (@BCCI) February 27, 2021
Advertisement
ಭಾರತ ತಂಡದಿಂದ ನಾಲ್ಕನೇ ಟೆಸ್ಟ್ ಗೆ ಬುಮ್ರಾ ಅವರನ್ನು ಕೈಬಿಡುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಯಂತೆ ಭಾರತದ ವೇಗಿಯನ್ನು ನಾಲ್ಕನೇ ಟೆಸ್ಟ್ ನಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
Advertisement
ಬುಮ್ರಾರ ಬದಲು ತಂಡಕ್ಕೆ ಯಾವುದೇ ಹೊಸ ಆಟಗಾರನ್ನು ಕರೆಸಿಕೊಂಡಿಲ್ಲ. ಮೂರನೇ ಟೆಸ್ಟ್ ನಲ್ಲಿ ಆಡಿದ ಆಟಗಾರರನ್ನು ಮುಂದುವರಿಸಲಾಗಿದೆ. ಬುಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದರು. ಎರಡನೇ ಟೆಸ್ಟ್ ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೂರನೇ ಟೆಸ್ಟ್ ನಲ್ಲಿ ಬುಮ್ರಾ ಅವರಿಗೆ 6 ಓವರ್ ಎಸೆಯಲು ಮಾತ್ರ ಅವಕಾಶ ಸಿಕ್ಕಿತ್ತು. ಮೊಟೆರಾ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗುತ್ತಿದ್ದರಿಂದ ಬುಮ್ರಾ ಅವರಿಗೆ ಹೆಚ್ಚಿನ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ.
ಮೂರನೇ ಟೆಸ್ಟ್ ಪಂದ್ಯವನ್ನು 10 ವಿಕೆಟ್‍ಗಳಿಂದ ಗೆದ್ದುಕೊಂಡಿರುವ ಭಾರತ 2-1 ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ. ನಾಲ್ಕನೇ ಟೆಸ್ಟ್ ಮೊಟೆರಾ ಕ್ರೀಡಾಂಗಣದಲ್ಲಿ ಮಾರ್ಚ್ 4 ರಿಂದ ಪ್ರರಂಭಗೊಳ್ಳಲಿದೆ.