-ಆಸ್ಪತ್ರೆ ವಿರುದ್ಧ ಪೋಷಕರ ದೂರು
-ಮಗು ಬದಲಾವಣೆಯ ಶಂಕೆ
ಅಹಮದಾಬಾದ್: ನಗರದ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ನವಜಾತ ಶಿಶು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿ ದಂಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಸ್ಪತ್ರೆಯ ನರ್ಸ್ ಗಂಡು ಮಗು ಆಗಿದೆ ಅಂತ ಹೇಳಿದ್ರು. ನಂತರ ಹೆಣ್ಣು ಮಗು ನೀಡಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.
Advertisement
ಈ ಕುರಿತು ಮಾಹಿತಿ ನೀಡಿರುವ ಸೋಲಾ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಜೆ.ವಿ.ರಾಥೋಡ, ದಂಪತಿ ಮಗ ಬದಲಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ. ಗುರುವಾರ ಮಹಿಳೆಗೆ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಯಾಗಿದೆ. ದಂಪತಿ ತಮ್ಮ ಮಗುವನ್ನ ಬದಲಾಯಿಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಹೇಳಿಕೆ ಇನ್ನೂ ದಾಖಲಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಡ್ ಪೀನಾ ಸೋನಿಯವರನ್ನ ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮಹಿಳೆಯನ್ನು ಕೋವಿಡ್ ಐಸೋಲೇಶನ್ ವಾರ್ಡಿನಲ್ಲಿ ಇರಿಸಲಾಗಿತ್ತು. ಹಾಗೆ ಮಹಿಳೆ ಮಗುವಿಗೆ ಜನ್ಮ ನೀಡಿದ ದಿನದಂದು ಬೇರೆ ಯಾವ ಹೆರಿಗೆ ಆಗಿಲ್ಲ. ಮಗು ಬದಲಾವಣೆಗೊಂಡಿರುವ ಸಾಧ್ಯತೆಗಳು ಅತಿ ಕಡಿಮೆ ಎಂದು ವರದಿಯಾಗಿದೆ.
Advertisement
ಮಗು ಹುಟ್ಟಿದ ಬಳಿಕ ನರ್ಸ್ ಹೆಣ್ಣು ಬದಲಾಗಿ ಗಂಡು ಹೇಳಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಪೋಷಕರು ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದು, ಕೂಡಲೇ ಸಮಸ್ಯೆ ಇತ್ಯರ್ಥಗೊಳಿಸಲಾಗುವುದು ಎಂದು ರಾಥೋಡ್ ಭರವಸೆ ನೀಡಿದ್ದಾರೆ.