ಮಂಡ್ಯ: ದಯವಿಟ್ಟು ನಮ್ಮನ್ನ ಮನೆಗೆ ಕಳುಹಿಸಿಕೊಟ್ಟು ಬಿಡಿ, ನಾವು ಮನೆಯಲ್ಲೇ ಚೆನ್ನಾಗಿ ಇರುತ್ತೇವೆ ಎಂದು ಕೋವಿಡ್ ಕೇರ್ ಸೆಂಟರ್‍ನಲ್ಲಿ ಇರುವ ಕೊರೊನಾ ಸೋಂಕಿತರು ಗೋಳಾಟ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲು ಗ್ರಾಮದಲ್ಲಿ ಜರುಗಿದೆ. ಇದನ್ನೂ ಓದಿ: 200 ಕುಟುಂಬಗಳಿಗೆ ತಲಾ 3000 ನೀಡಿದ ಅಮೆರಿಕದಲ್ಲಿ ನೆಲೆಸಿರೋ ಕನ್ನಡಿಗ
Advertisement
ಬದರಿಕೊಪ್ಪಲು ಗ್ರಾಮದಲ್ಲಿರುವ ಕೋವಿಡ್ ಸೆಂಟರ್‌ನಲ್ಲಿ ಸೋಂಕಿರತರಿಗೆ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ. ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಕುಡಿಯುವ ನೀರು ಮುಗಿದು ಎರಡು ದಿನವಾದರು ನೀರು ಕೊಟ್ಟಿಲ್ಲ. ಎಲ್ಲಾ ಸವಲತ್ತು ಕೊಡುತ್ತೇವೆ ಎಂದು ನರಕದಲ್ಲಿ ತಂದು ಹಾಕಿದ್ದಾರೆ ಎಂದು ಕೋವಿಡ್ ಸೋಂಕಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಆಯ್ತು, ಈಗ ಮಂಡ್ಯದಲ್ಲಿ ಶುರುವಾಗಿದೆ ಅಂಬುಲೆನ್ಸ್ ಪಾಲಿಟಿಕ್ಸ್
Advertisement
Advertisement
ನನ್ನ ಮಗುವಿಗೆ ಮೂರು ದಿನದಿಂದ ಕೆಮ್ಮು ಇದೆ. ಔಷಧಿ ಕೇಳಿದ್ರೆ ಕೊಡುತ್ತಿಲ್ಲ. ಕೊಡುವ ಊಟ ತಣ್ಣಗೆ ಇರುತ್ತೆ, ಊಟವನ್ನು ಮಾಡಲು ಆಗುವುದಿಲ್ಲ. ದಯವಿಟ್ಟು ನಮ್ಮನ್ನ ಬಿಟ್ಟು ಬಿಡಿ ನಾವು ಮನೆಗೆ ಹೋಗಿ ಔಷಧಿ ಹಾಗೂ ಒಳ್ಳೆಯ ಊಟ ಮಾಡಿಕೊಂಡು ಗುಣಮುಖರಾಗುತ್ತೇವೆ ಎಂದು ಮಹಿಳೆಯೊಬ್ಬರು ಅಳಲು ತೊಡಿಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮುಗಿ ಬಿದ್ದ ಜನ
Advertisement