Connect with us

200 ಕುಟುಂಬಗಳಿಗೆ ತಲಾ 3000 ನೀಡಿದ ಅಮೆರಿಕದಲ್ಲಿ ನೆಲೆಸಿರೋ ಕನ್ನಡಿಗ

200 ಕುಟುಂಬಗಳಿಗೆ ತಲಾ 3000 ನೀಡಿದ ಅಮೆರಿಕದಲ್ಲಿ ನೆಲೆಸಿರೋ ಕನ್ನಡಿಗ

ಮಂಡ್ಯ: ನನ್ನೂರಿನ ಜನ ಲಾಕ್‍ಡೌನ್ ಇರುವುದರಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ 200 ಕುಟುಂಬಗಳಿಗೆ ತಲಾ 3 ಸಾವಿರ ರೂಪಾಯಿಯನ್ನು ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆನಮನಹಳ್ಳಿ ಗ್ರಾಮದ ಚಿಕ್ಕಸ್ವಾಮಿ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಇದೀಗ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಹಲವು ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ವಿಷಯ ತಿಳಿದ ಪುಟ್ಟಸ್ವಾಮಿ ಅವರು ತನ್ನೂರಿನ ಜನರಿಗೆ ಸಹಾಯ ಮಾಡಿದ್ದಾರೆ.

ಚಿಕ್ಕಸ್ವಾಮಿ ಅವರು ಬೆಮನಹಳ್ಳಿ ಗ್ರಾಮದ 200 ಕುಟುಂಬಗಳಿಗೆ ತಲಾ ಮೂರು ಸಾವಿರ ರೂಪಾಯಿ ನೀಡಿದ್ದಾರೆ. ಚಿಕ್ಕಸ್ವಾಮಿ ಅವರು ಸದ್ಯ ಅಮೇರಿಕದಲ್ಲಿ ಇದ್ದು, ತಮ್ಮ ಸಂಬಂಧಿಕರ ಮೂಲಕ ಹಣ ನೀಡಿದ್ದಾರೆ. ಚಿಕ್ಕಸ್ವಾಮಿ ಅವರ ಈ ಕಾರ್ಯಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಬರಬಾರದೆಂದು ಮಂಡ್ಯದಲ್ಲಿ ಕುರಿ, ಕೋಳಿ ಬಲಿ

ಕೊರೊನಾ ನಗರ ಪ್ರದೇಶಗಳಿಗಿಂದ ಹೆಚ್ಚಾಗಿ ಗ್ರಾಮಿಣ ಭಾಗದ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಕೊರೊನಾ ಲಾಕ್‍ಡೌನ್ ನಿಂದ ಬೇರೆ ಆದಾಯ ಇಲ್ಲದಂತಾಗಿದೆ. ಬೆಳೆಗೆ ಸರಿಯಾದ ಬೆಲೆ, ಮಾರುಕಟ್ಟೆ ಸಿಗದೆ ಕಷ್ಟ ಪಡುವಂತಾಗಿದೆ. ಈ ಎಲ್ಲಾ ಕಷ್ಟಗಳನ್ನು ಅರ್ಥ ಮಾಡಿಕೊಂಡು ಅಮೆರಿಕಾದಲ್ಲಿರುವ ಕನ್ನಡಿಗ ತನ್ನ ಹಳ್ಳಿಗರಿಗೆ ಸಹಾಯವನ್ನು ನೀಡಿದ್ದಾರೆ.

Advertisement
Advertisement