– 2 ತಿಂಗಳು 5 ಕೆಜಿ ಉಚಿತ ಪಡಿತರ ಘೋಷಣೆ
ನವದೆಹಲಿ: ದೇಶದಲ್ಲಿ ಕೊರೊನಾ ಮಹಾಸ್ಫೋಟಕ್ಕೆ ಬ್ರೇಕ್ ಹಾಕಲು ಸೋಂಕು ತಜ್ಞರಿಂದ ಹಿಡಿದು ಸುಪ್ರೀಂಕೋರ್ಟ್‍ವರೆಗೂ ಲಾಕ್‍ಡೌನ್ ಒಂದೇ ಮಾರ್ಗ ಎಂದು ಹೇಳ್ತಿದ್ದಾರೆ.
ಲಾಕ್‍ಡೌನ್ ವಿಧಿಸಿದ್ರೂ, ವಿಧಿಸದಿದ್ರೂ ಆರ್ಥಿಕ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಇಂದಿನ ಮೋದಿ ಸಂಪುಟ ಸಭೆಯಲ್ಲಿ ಲಾಕ್‍ಡೌನ್ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಸುದ್ದಿ ಹರಡಿತ್ತು. ಆದರೆ ಮೋದಿ ಸರ್ಕಾರ ಇಡೀ ದೇಶದಲ್ಲಿ ಕಂಪ್ಲೀಟ್ ಲಾಕ್‍ಡೌನ್‍ಗೆ ಮನಸ್ಸು ಮಾಡಿಲ್ಲ. ಕಾದು ನೊಡುವ ತಂತ್ರಕ್ಕೆ ಶರಣಾಗಿದೆ.
Advertisement
Advertisement
ಇಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಯನ್ನೇ ನಡೆಸಿಲ್ಲ. ಸದ್ಯದ ಮಟ್ಟಿಗೆ ರಾಜ್ಯಗಳಿಗೆ ಲಾಕ್‍ಡೌನ್ ನಿರ್ಣಯಾಧಿಕಾರವನ್ನು ಮೋದಿ ಸರ್ಕಾರ ನೀಡಿದೆ. ಕೊರೊನಾ ಸಂಕಷ್ಟದ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಹೆಚ್ಚುವರಿಯಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಬಿಪಿಎಲ್ ಪಡಿತರದಾರರಿಗೆ ತಲಾ 5 ಕೆಜಿ ಅಕ್ಕಿ ಉಚಿತವಾಗಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿತು. ಇದರಿಂದ 80 ಕೋಟಿ ಭಾರತೀಯರಿಗೆ ಅನುಕೂಲವಾಗಲಿದೆ.
Advertisement
ಸ್ಥಳೀಯವಾಗಿ ಜಾರಿ ಆಗ್ತಿರುವ ಲಾಕ್‍ಡೌನ್ ಪರಿಸ್ಥಿತಿ, ಮಳೆ ಇನ್ನಿತರೆ ಅಂಶಗಳನ್ನು ಪರಿಗಣಿಸಿ ಎರಡು ತಿಂಗಳು ಉಚಿತ ಆಹಾರ ಧಾನ್ಯ ನೀಡಲು ಕೇಂದ್ರ ತೀರ್ಮಾನಿಸಿದೆ.