– ಮಾವನ ಮದ್ವೆಗೆ ಹೋದಾಗ ಕಿಡ್ನ್ಯಾಪ್
ಜೈಪುರ: ದಟ್ಟ ಅರಣ್ಯದಲ್ಲಿ ಯುವತಿಯನ್ನ 14 ದಿನ ಬಂಧನದಲ್ಲಿರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನ ಬಾರನ್ ಜಿಲ್ಲೆಯಲ್ಲಿ ನಡೆದಿದೆ.
20 ವರ್ಷದ ಯುವತಿ ಮಾವನ ಮದುವೆಗೆ ಹೋದಾಗ ಆಕೆಯ ಅಪಹರಣ ನಡೆದಿತ್ತು. ಅಪಹರಣದ ಬಳಿಕ ಯುವತಿಯನ್ನ ಕಾಡಿನಲ್ಲಿರಿಸಿದ್ದ ನೀಚ ಸಂತ್ರಸ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. 14 ದಿನದ ಬಳಿಕ ಉಪಾಯವಾಗಿ ಅರಣ್ಯದಿಂದ ಹೊರ ಬಂದ ಯುವತಿ ಸ್ಥಳೀಯರೊಬ್ಬರ ಮೊಬೈಲ್ ಪಡೆದು ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಸದ್ಯ ಯುವತಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸೆಕ್ಸ್ ಸಿನ್ಮಾ ನೋಡಿ ಗೆಳೆಯನ 60 ವರ್ಷದ ತಾಯಿಯ ಮೇಲೆ ರೇಪ್
ನವೆಂಬರ್ 9ರಂದು ನನ್ನನ್ನು ಅಡ್ಡಗಟ್ಟಿದ್ದ ಓರ್ವ ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡನು. ನಂತರ ಅರಣ್ಯ ಪ್ರದೇಶದಲ್ಲಿ ಇರಿಸಿ ಅತ್ಯಾಚಾರ ಎಸಗಿದನು. ನವೆಂಬರ್ 22ರಂದು ತಂದೆಗೆ ಫೋನ್ ಮಾಡಿದಾಗ ಅವರು ನನ್ನನ್ನು ರಕ್ಷಿಸಿದರು ಎಂದು ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾಳೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅತ್ಯಾಚಾರಿಗಳ ಪುರುಷತ್ವ ಹರಣ – ಪಾಕಿಸ್ತಾನದಲ್ಲಿ ಕಠಿಣ ಕಾನೂನು ಜಾರಿ