ತೆಲುಗು ನಾನಿ ಸಿನಿಮಾಗೆ ರಶ್ಮಿಕಾ ಬದಲಿಗೆ ಸಾಯಿ ಪಲ್ಲವಿ ಆಯ್ಕೆ?

Public TV
2 Min Read
Sai Pallavi rashmika mandanna

ಹೈದರಾಬಾದ್: ದಕ್ಷಿಣ ಭಾರತ ಖ್ಯಾತ ನಟಿ ಹಾಗೂ ಸೆನ್ಸೇಶನ್ ಕ್ವೀನ್ ಸಾಯಿ ಪಲ್ಲವಿ ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿರುವ ನಟಿ ಇದೀಗ ತೆಲುಗಿನ ಚಿತ್ರವೊಂದರಲ್ಲಿ ನಟಿಸಲು ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

rashmika mandanna 2

ಈಗಾಗಲೇ ನಾಗಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದು, ಇದೇ ಗ್ಯಾಪ್‍ನಲ್ಲಿ ತೆಲುಗು ನಟ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ನಾನಿ ಜೊತೆ ಸಾಯಿ ಪಲ್ಲವಿ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

saipallavi.senthamarai 11377887 847948908621263 663146438 n

ನಟಿ ಸಾಯಿ ಪಲ್ಲವಿ ಈಗಾಗಲೇ ನಾನಿ ಜೊತೆ ಎಂಸಿಎ ಸಿನಿಮಾದಲ್ಲಿ ನಟಿಸಿದ್ದು, ಇದೀಗ ಶ್ಯಾಮ್ ಸಿಂಗ ರಾಯ್ ಸಿನಿಮಾ ಮೂಲಕ ಎರಡನೇ ಬಾರಿ ನಾನಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಟ್ಯಾಕ್ಸಿವಾಲಾ ಸಿನಿಮಾ ಖ್ಯಾತಿಯ ನಿರ್ದೇಶಕ ರಾಹುಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲಾ ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ಇದೀಗ ನಾನಿ ಜೊತೆ ಶ್ಯಾಮ್ ಸಿಂಗ ರಾಯ್ ಸಿನಿಮಾ ಮಾಡುತ್ತಿದ್ದಾರೆ.

rashmika mandanna 1

ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಕೊನೆಯಲ್ಲಿ ಕ್ರಿಸ್‍ಮಸ್‍ಗೆ ಚಿತ್ರ ತೆರೆಗೆ ಬರಬೇಕಿತ್ತು ಆದರೆ ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸಿನಿಮಾ ತೆರೆ ಕಾಣುವುದು ಇನ್ನೂ ತಡವಾಗಬಹುದು ಎಂದು ಅಂದಾಜಿಸಲಾಗಿದೆ.

saipallavi.senthamarai 56764782 1306620102796201 7184501768901480623 n

ಸಾಯಿ ಪಲ್ಲವಿ ಅಷ್ಟು ಸುಲಭವಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಚಿತ್ರದಲ್ಲಿ ತಮ್ಮದು ಪ್ರಮುಖ ಪಾತ್ರವಿದ್ದರೆ, ಇಲ್ಲವೇ ವಿಶೇಷ ಸಿನಿಮಾ ಆಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತಾರೆ. ಅಳೆದು ತೂಗಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಸಾಯಿ ಪಲ್ಲವಿ ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ರಾಣಾ ದಗ್ಗುಬಾಟಿ ಜೊತೆ ವಿರಾಟಪರ್ವಂ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಮತ್ತೆ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಆದರೆ ಈ ಕುರಿತು ಸಿನಿಮಾ ತಂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *