ಅಬುಧಾಬಿ: ಐಪಿಎಎಲ್ 2020 ಆವೃತ್ತಿಯ ಮೊದಲ ಪಂದ್ಯದಲ್ಲೇ ತಮ್ಮ ಬೌಲಿಂಗ್‍ನೊಂದಿಗೆ ಎದುರಾಳಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಆರ್ ಅಶ್ವಿನ್ ಭುಜಕ್ಕೆ ಗಾಯವಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಎದುರಿನ ಆಟದ ವೇಳೆ ಎಡ ಭುಜಕ್ಕೆ ಗಾಯವಾಗಿದೆ.
Advertisement
2020ರ ಐಪಿಎಲ್ ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ಡೆಬ್ಯು ಪಂದ್ಯದ ಇನ್ನಿಂಗ್ಸ್ ನ 6ನೇ ಓವರ್ ಬೌಲ್ ಮಾಡಿದ ಅಶ್ವಿನ್, ಮೊದಲ ಎಸೆತದಲ್ಲೇ ಕರುಣ್ ನಾಯರ್ ವಿಕೆಟ್ ಪಡೆದರು. ಅಲ್ಲದೇ ಇದೇ ಓವರ್ ನಲ್ಲಿ ನಿಕೋಲಸ್ ಪೂರನ್ ಅವರನ್ನು ಶೂನ್ಯಕ್ಕೆ ಬೋಲ್ಡ್ ಮಾಡುವ ಮೂಲಕ ಮಿಂಚಿಸಿದ್ದರು. ಈ ಓವರ್ ನಲ್ಲಿ ಅಶ್ವಿನ್ 2 ರನ್ ಮಾತ್ರ ನೀಡಿದ್ದರು. ಈವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಅಶ್ವಿನ್ ಭಾರೀ ಹೊಡೆತವನ್ನೇ ನೀಡಿ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು.
Advertisement
ಆದರೆ ಪವರ್ ಪ್ಲೇ ವೇಳೆ ಬೌಲಿಂಗ್ ಮಾಡುತ್ತಿದ್ದಾಗ ಓವರ್ ನ ಅಂತಿಮ ಎಸೆತದಲ್ಲಿ ಸಿಂಗಲ್ ರನ್ ತಡೆಯಲು ಯತ್ನಿಸಿ ಡೈವ್ ಮಾಡಿದ್ದರು, ಈ ವೇಳೆ ಅವರ ಎಡಭುಜಕ್ಕೆ ಗಾಯವಾಗಿದೆ. ಕೂಡಲೇ ಅವರು ಮೈದಾನದಿಂದ ತೆರಳಿದ್ದರು.
Advertisement
Advertisement
ಆ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಅಶ್ವಿನ್, ಎಡಗೈಗೆ ಪಟ್ಟಿ ಹಾಕಿಕೊಂಡು, ಭುಜದ ಮೇಲೆ ಐಸ್ ಪ್ಯಾಕ್ ಹಾಕಲಾಗಿತ್ತು. ಸೂಪರ್ ಓವರ್ ನಲ್ಲಿ ರೋಚಕ ಗೆಲುವು ಪಡೆದ ಡೆಲ್ಲಿ ತಂಡದ ನಾಯಕಿಗೆ ಅಶ್ವಿನ್ ಅವರ ಗಾಯದ ಭೀತಿ ಎದುರಾಗಿತ್ತು. ಪಂದ್ಯದ ಬಳಿಕ ಅಶ್ವಿನ್ ಗಾಯಗೊಂಡ ಕುರಿತು ಪ್ರತಿಕ್ರಿಯೆ ನೀಡಿದ ಡೆಲ್ಲಿ ತಂಡದ ನಾಯಕ ಅಯ್ಯರ್, ಅನುಭವಿ ಆಟಗಾರ ಅಶ್ವಿನ್ ಮುಂದಿನ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಆ ಓವರ್ ಆಟದ ದಿಕ್ಕನ್ನೇ ಬದಲಿಸಿತ್ತು ಎಂದು ಹೇಳಿದ್ದರು.
ಇತ್ತ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಫೋಟಕವಾಗಿ ಆಡಿದ್ದರೂ ವಿಜಯ ಲಕ್ಷ್ಮಿ ಪಂಜಾಬ್ ತಂಡದ ಕೈ ಹಿಡಿಯಲಿಲ್ಲ. ಸೂಪರ್ ಓವರಿನಲ್ಲಿ ಡೆಲ್ಲಿ ತಂಡ ಪಂಜಾಬ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಇದನ್ನೂ ಓದಿ: ಕನ್ನಡಿಗ ಅಗರ್ವಾಲ್ ಸ್ಫೋಟಕ ಆಟ – ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ಜಯ