– ಮುಂಬೈಗಾಗಿ 150ನೇ ಪಂದ್ಯ ಗೆಲ್ಲಿಸಿಕೊಟ್ಟ ರೋಹಿತ್
ಅಬುಧಾಬಿ: ಇಂದು ನಡೆದ ಸಂಡೇ ಧಮಾಕದ ಎರಡನೇ ಪಂದ್ಯದಲ್ಲಿ ಚೇಸಿಂಗ್‍ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ತಂಡ ಸುಲಭವಾಗಿ ಜಯವನ್ನು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಅರ್ಧಶತಕದಿಂದ ನಿಗದಿತ 20 ಓವರಿನಲ್ಲಿ 162 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ ಇನ್ನಿಂಗ್ಸ್ ನ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಸೂರ್ಯಕುಮಾರ್ ಯಾದವ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕದ ನೆರವಿನಿಂದ ಇನ್ನೂ ಎರಡು ಬಾಲ್ ಉಳಿಸಿ 5 ವಿಕೆಟ್‍ಗಳ ಜಯವನ್ನು ಸಾಧಿಸಿತು.
Advertisement
Advertisement
ರೋಹಿತ್ 150ನೇ ಪಂದ್ಯ
2011ರ ಐಪಿಎಲ್‍ನಲ್ಲಿ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದ್ದರು. ಅಂದಿನಿಂದ ನಾಯಕನಾಗಿ ಉತ್ತಮವಾಗಿ ಆಡಿಕೊಂಡು ಬಂದಿರುವ ರೋಹಿತ್ ಶರ್ಮಾ ಮುಂಬೈ ತಂಡ ನಾಲ್ಕು ಬಾರಿ ಚಾಂಪಿಯನ್ ಆಗುವಂತೆ ಮಾಡಿದರು. 2013, 2015, 2017 ಮತ್ತು 2019ರ ಐಪಿಎಲ್‍ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಇವತ್ತಿನ ಪಂದ್ಯದ ಮೂಲಕ ಮುಂಬೈ ತಂಡಕ್ಕಾಗಿ 150ನೇ ಪಂದ್ಯವನ್ನು ಆಡಿದ್ದಾರೆ.
Advertisement
Here it is! @mipaltan win by 5 wickets and register their 5th win in #Dream11IPL 2020.
Scorecard – https://t.co/0fS0687cpP #MIvDC pic.twitter.com/pbOYlnILOP
— IndianPremierLeague (@IPL) October 11, 2020
Advertisement
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸ್ಪರ್ಧಾತ್ಮಕ ಟಾರ್ಗೆಟ್ ಅನ್ನು ಬೆನ್ನಟ್ಟಲು ಬಂದ ಮುಂಬೈ ಇಂಡಿಯನ್ಸ್‍ಗೆ ಆಕ್ಸರ್ ಪಟೇಲ್ ಅವರು ಆರಂಭದಲ್ಲೇ ಶಾಕ್ ನೀಡಿದರು. 4ನೇ ಓವರಿನ ಕೊನೆ ಬಾಲಿನಲ್ಲಿ ದೊಡ್ಡ ಹೊಡತಕ್ಕೆ ಕೈಹಾಕಿದ ಮುಂಬೈ ನಾಯಕ ರೊಹೀತ್ ಶರ್ಮಾ ಅವರು ಐದು ರನ್ ಗಳಿಸಿ ಔಟ್ ಆದರು. ನಂತರ ಡಿ ಕಾಕ್ ಅವರು ಅಬ್ಬರ ಬ್ಯಾಟಿಂಗ್ ಮಾಡಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯಕ್ಕೆ ಮುಂಬೈ ತಂಡ ಒಂದು ವಿಕೆಟ್ ಕಳೆದುಕೊಂಡು 44 ರನ್ ಗಳಸಿತು.
Two quick wickets in the bag for the @DelhiCapitals.
Suryakumar and Hardik depart.
Live – https://t.co/0fS0687cpP #Dream11IPL pic.twitter.com/DOHiKcl4D4
— IndianPremierLeague (@IPL) October 11, 2020
ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಕ್ವಿಂಟನ್ ಡಿ ಕಾಕ್ ಅವರು 33 ಎಸೆತದಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದರೆ 9ನೇ ಓವರಿನ ಐದನೇ ಬಾಲಿನಲ್ಲಿ 36 ಬಾಲಿಗೆ 53 ರನ್ ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಅವರು ರವಿಚಂದ್ರನ್ ಅಶ್ವಿನ್ ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಸೇರಿಕೊಂಡು ತಂಡವನ್ನು 100ರ ಗಡಿ ದಾಟಿಸಿದರು.
High up in the SKY and that has cleared the fence, a maximum to bring up the FIFTY for @surya_14kumar.
Live – https://t.co/0fS0687cpP #Dream11IPL pic.twitter.com/UQ9YCn3Gsf
— IndianPremierLeague (@IPL) October 11, 2020
ಅಬ್ಬರ ಆಟವಾಡಿದ ಸೂರ್ಯಕುಮಾರ್ ಯಾದವ್ ಅವರು, ಕೇವಲ 30 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಸಿಕ್ಸರ್ ಹೊಡೆಯುವ ಮೂಲಕ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ನಂತರದ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಯಾದವ್ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಅವರು ಸೊನ್ನೆ ಸುತ್ತಿ ಮಾರ್ಕಸ್ ಸ್ಟೊಯಿನಿಸ್ ಅವರ ಬೌಲಿಂಗ್‍ನಲ್ಲಿ ಕೀಪರ್ ಕ್ಯಾಚ್ ಕೊಟ್ಟು ವಾಪಸ್ ಆದರು.
At the end of the powerplay, #MumbaiIndians are 44/1.
Live – https://t.co/0fS0687cpP #Dream11IPL pic.twitter.com/syJQWCxhZC
— IndianPremierLeague (@IPL) October 11, 2020
15 ಬಾಲಿಗೆ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಸಮೇತ 28 ರನ್ ಸಿಡಿಸಿ ಆಡುತ್ತಿದ್ದ ಇಶಾನ್ ಕಿಶನ್ ಅವರು ಕಗಿಸೊ ರಬಡಾ ಅವರ ಬೌಲಿಂಗ್‍ನಲ್ಲಿ ಔಟ್ ಆಗಿ ನಿರ್ಗಮಿಸಿದರು. ನಂತರ ಜೊತೆಯಾದ ಕೀರನ್ ಪೊಲಾರ್ಡ್ ಮತ್ತು ಕ್ರುನಾಲ್ ಪಾಂಡ್ಯ ಮುಂಬೈಯನ್ನು ಜಯದ ದಡವನ್ನು ಸೇರಿಸಿದರು.