ಡಿಸ್ಕಸ್ ಥ್ರೋನಲ್ಲಿ ಕಮಲ್‍ಪ್ರೀತ್ ಅಚ್ಚರಿ- ಫೈನಲ್‍ಗೆ ಲಗ್ಗೆ

Public TV
1 Min Read
kamalpreet kaur

ಟೋಕಿಯೋ: ಒಲಿಂಪಿಕ್ಸ್ 9ನೇ ದಿನಕ್ಕೆ ಕಾಲಿಟ್ಟಿದ್ದು, ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್‍ಪ್ರೀತ್ ಕೌರ್ ಅದ್ಭುತ ಪ್ರದರ್ಶನ ನೀಡಿದ್ದು, ಫೈನಲ್ ಪ್ರವೇಶಿಸಿದ್ದಾರೆ. ಭಾರತಕ್ಕೆ ಪದಕ ತಂದುಕೊಡುವಲ್ಲಿ ಕಮಲ್‍ಪ್ರೀತ್ ಒಂದು ಹೆಜ್ಜೆ ಮಾತ್ರ ದೂರದಲ್ಲಿದ್ದಾರೆ. ಮೂರನೇ ಪ್ರಯತ್ನದಲ್ಲಿ ಕಮಲ್‍ಪ್ರೀತ್ 64 ಮೀಟರ್ ಥ್ರೋ ಮಾಡಿದ್ದಾರೆ.

ಡಿಸ್ಕಸ್ ಥ್ರೋನ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಇತಿಹಾಸ ಬರೆದಿರುವ ಕಮಲ್‍ಪ್ರೀತ್ ಆಗಸ್ಟ್ 2ರಂದು ಫೈನಲ್ ಆಡಲಿದ್ದಾರೆ. ಕಮಲ್‍ಪ್ರೀತ್ ಅವರಿಗೆ ಪದಕ ಗೆಲ್ಲುವ ಎಲ್ಲ ಅವಕಾಶಗಳಿವೆ. ಒಂದು ವೇಳೆ ಗೆದ್ರೆ ಡಿಸ್ಕಸ್ ಥ್ರೋನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಸ್ಥಾನಕ್ಕೆ ಪಾತ್ರವಾಗಲಿದ್ದಾರೆ.

kamalpreet kaur 1

ಕಮಲ್‍ಪ್ರೀತ್ ಪಂಜಾಬ್ ರಾಜ್ಯದ ಮುತ್ಸರ್ ಜಿಲ್ಲೆಯ ನಿವಾಸಿಯಾಗಿದ್ದಾರೆ. ಪಟಿಯಾಲಾದಲ್ಲಿ ಆಯೋಜಿಸಲಾಗಿದ್ದ 24ನೇ ಫಡರೇಶನ್ ಕಪ್ ಸೀನಿಯರ್ ಅಥ್ಲಿಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಪ್ರಯತ್ನದಲ್ಲಿಯೇ 65.06 ಥ್ರೋ ಮಾಡಿ ಟೀಕಿಯೋ ಟಿಕೆಟ್ ಪಡೆದಿದ್ದರು. 2012ರಲ್ಲಿ ಕೃಷ್ಣಾಪುನಿಯಾ ಅವರ 64.76 ಮೀಟರ್ ದಾಖಲೆಯನ್ನು ಕಮಲ್ ಪ್ರೀತ್ ಬ್ರೇಕ್ ಮಾಡಿದ್ದರು.

ಇನ್ನೂ ಆರ್ಚರಿ ಮತ್ತು ಬಾಕ್ಸಿಂಗ್ ನಲ್ಲಿ ಭಾರತ ನಿರಾಸೆ ಕಂಡಿದೆ. ಅರ್ಚರಿಯಲ್ಲಿ ಅತನುದಾಸ್ ಮತ್ತು ಬಾಕ್ಸರ್ ಅಮಿತ್ ಪಂಘಲ್ ಪಂದ್ಯದಿಂದ ಹೊರ ಬಂದಿದ್ದಾರೆ. ಇಬ್ಬರು ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಸೋಲು ಕಂಡರು. ಇದನ್ನೂ ಓದಿ: ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

Share This Article