ಸೌಂಥಾಂಪ್ಟನ್: ಭಾರತ ತಂಡದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಜಯಿಸಿದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡದ ಆಟಗಾರರು ಹೊಸ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಈ ನಿರ್ಧಾರದಿಂದ ಬಿಸಿಸಿಐ ಸಂತೋಷಗೊಂಡಿದೆ.
ಭಾರತದಲ್ಲಿ ಕೊರೊನಾದಿಂದಾಗಿ ಮುಂದೂಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್‍ನ ಮುಂದಿನ ಪಂದ್ಯಗಳು ದುಬೈನಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಡೆಯಲಿದೆ. ಈ ಪಂದ್ಯಗಳಲ್ಲಿ ಮೊದಲು ನ್ಯೂಜಿಲೆಂಡ್ ಆಟಗಾರರು ಭಾಗವಹಿಸುವುದು ಅನುಮಾನವಾಗಿತ್ತು. ಆದರೆ ಇದೀಗ ನ್ಯೂಜಿಲೆಂಡ್ ಆಟಗಾರರು ಮುಂದಿನ ಭಾಗದ ಐಪಿಎಲ್ ಪಂದ್ಯಾಟಗಳಿಗೆ ಲಭ್ಯವಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಈ ನಿರ್ಧಾರದಿಂದಾಗಿ ಸಹಜವಾಗಿಯೆ ಬಿಸಿಸಿಐ ಸಂತೋಷಗೊಂಡಿದೆ. ಇದನ್ನೂ ಓದಿ: ಕೊನೆಗೂ ಕನಸು ನನಸು: ಐಸಿಸಿ ಟೆಸ್ಟ್ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್
ದುಬೈನಲ್ಲಿ ನಡೆಯಲಿರುವ 2ನೇ ಭಾಗದ ಐಪಿಎಲ್‍ಗೆ ವಿದೇಶಿ ಆಟಗಾರರು ಆಡುವ ಬಗ್ಗೆ ಹಲವು ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಈಗಾಗಲೇ ಬಿಸಿಸಿಐ ಐಪಿಎಲ್‍ಗಾಗಿ ಬರದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ವಿದೇಶಿ ಅಟಗಾರರ ಪೈಕಿ ಆಸ್ಟ್ರೇಲಿಯಾ, ಇಂಗ್ಲೆಂಡ್‍ನ ಆಟಗಾರರು ರಾಷ್ಟ್ರೀಯ ತಂಡದೊಂದಿಗೆ ಕ್ರಿಕೆಟ್ ಸರಣಿ ಆಡುತ್ತಿರುವುದರಿಂದ ಐಪಿಎಲ್‍ನಲ್ಲಿ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್ – ಟಾಪ್ ಬಾಸ್‍ಗೆ ಸಿಕ್ತು ಇಸಿಬಿ ಪೂರ್ಣ ಬೆಂಬಲ
ಆದರೆ ಇದೀಗ ನ್ಯೂಜಿಲೆಂಡ್ ಆಟಗಾರರು ಐಪಿಎಲ್‍ನಲ್ಲಿ ಕಾಣಿಸಿಕೊಂಡರೆ ಸ್ವಲ್ಪ ಮಟ್ಟಿಗೆ ಐಪಿಎಲ್‍ನ ಮೆರುಗು ಹೆಚ್ಚಲಿದೆ. ಕೀವಿಸ್ ಆಟಗಾರರಾದ ಕೇನ್ ವಿಲಿಯಮ್ಸನ್, ಕೈಲ್ ಜೇಮಿಸನ್, ಟ್ರೆಂಟ್ ಬೌಲ್ಟ್,ಜೇಮ್ಸ್ ನೀಶಾಮ್, ಮಿಚೆಲ್ ಸ್ಯಾಂಟ್ನರ್, ಲೂಕಿ ಫಗ್ರ್ಯುಸನ್ ಸೇರಿದಂತೆ ಕೆಲ ಆಟಗಾರರು ಐಪಿಎಲ್‍ನಲ್ಲಿ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ.