-FIRನಲ್ಲಿ ಕತ್ತೆ ಹೆಸ್ರು ದಾಖಲು
-ಕತ್ತೆ ಸೇರಿದಂತೆ 8 ಜನರು ಅರೆಸ್ಟ್
ಇಸ್ಲಾಮಾಬಾದ್: ಜೂಜಾಟ ಪ್ರಕರಣದಲ್ಲಿ ಪೊಲೀಸರು ಕತ್ತೆಯನ್ನು ಬಂಧಿಸಿರುವ ವಿಚಿತ್ರ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಇಲಾಖೆಯಲ್ಲಿ ನಡೆದಿದೆ.
ರಹೀಮ್ ಯಾರ್ ಖಾನ್ ಇಲಾಖೆಯಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಎಂಟು ಜನರು ಮತ್ತು ಕತ್ತೆಯೊಂದನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ಕುರಿತು ಎಫ್ಐಆರ್ ಸಹ ದಾಖಲಾಗಿದ್ದು, ಎಂಟು ಜನರ ಮಾಹಿತಿ ಜೊತೆ ಕತ್ತೆಯ ಹೆಸರನ್ನು ಸಹ ದಾಖಲಿಸಿದ್ದಾರೆ. ಬಂಧನ ಮಾಡಿರುವ ಕತ್ತೆಯನ್ನು ಪೊಲೀಸ್ ಠಾಣೆಯ ಆವರಣದಲ್ಲಿ ಕಟ್ಟಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ದಾಳಿ ವೇಳೆ ಎಂಟು ಜನರನ್ನು ಬಂಧಿಸಿ ನಗದು ಹಣ ಮತ್ತು ಒಂದು ಕತ್ತೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರು ಕತ್ತೆಯನ್ನು ಒತ್ತೆಯಿಟ್ಟು ಜೂಜು ಆಡುತ್ತಿದ್ದರು ಎಂದು ತಿಳಿಸಿದ್ದಾರೆ.
ಕತ್ತೆಯ ಬಂಧನ ಸುದ್ದಿ ಹರಿದಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಭಿನ್ನವಾಗಿ ಟ್ರೋಲ್ ಮಾಡಲಾರಂಭಿಸಿದ್ದಾರೆ.