ಪಲಾವ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಅಮ್ಮ ಮಾಡಿದ ಪಲಾವ್ ಎಂದರೆ ಮಕ್ಕಳು ನಾಲಿಗೆ ಚಪ್ಪರಿಸಿ ತಿನ್ನುತ್ತಾರೆ. ಆದರೆ ಪಲಾವ್‍ನಲ್ಲಿ ಇರುವ ತರಕಾರಿಗಳನ್ನೊ ಎತ್ತಿ ತಟ್ಟೆಯ ಅಂಚಿನಲ್ಲಿ ಇಟ್ಟಿರಿತ್ತಾರೆ. ಹೀಗಾಗಿ ನಿಮ್ಮ ಮಕ್ಕಳಿಗಾಗಿ ನೀವು ಮನೆಯಲ್ಲಿ ಒಣಹಣ್ಣುಗಳನ್ನು ಬಳಸಿ ಒಂದು ರುಚಿಯಾದ ಪಲಾವ್ ಮಾಡಿದರೆ ಮಕ್ಕಳು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಆರೋಗ್ಯಕ್ಕೂ ಒಳ್ಳೆಯದು ಮತ್ತು ನಾಲಿಗೆಗೂ ರುಚಿಯನ್ನು ನೀಡುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ – 3 ಕಪ್
* ಕೇಸರಿ- ಸ್ವಲ್ಪ
* ಪಲಾವ್ ಪೌಡರ್- 4 ಟೀ ಸ್ಪೂನ್
* ಲವಂಗ- 2
* ಚಕ್ಕೆ-1
* ಏಲಕ್ಕಿ- 2
* ಒಂದ್ರಾಕ್ಷಿ – ಅರ್ಧ ಕಪ್
* ಬಾದಾಮಿ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ತುಪ್ಪ- ಅರ್ಧ ಕಪ್
* ದ್ರಾಕ್ಷಿ- ಅರ್ಧ ಕಪ್
* ಗೋಡಂಬಿ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಕುಕ್ಕರ್ ಪಾತ್ರೆಯಲ್ಲಿ ಮೂರು ಟೇಬಲ್ ಚಮಚ ತುಪ್ಪವನ್ನು ಸೇರಿಸಿ. ತುಪ್ಪ ಬಿಸಿಯಾದ ಬಳಿಕ ಎಲ್ಲಾ ಒಣ ಹಣ್ಣುಗಳನ್ನು ಸೇರಿಸಿ, ಎರಡು ನಿಮಿಷಗಳ ಕಾಲ ಹುರಿಯಿರಿ.
Advertisement
* ನಂತರ ಅದೇ ಪಾತ್ರೆಗೆ ಗರಮ್ ಮಸಾಲ, ಪಲಾವ್ ಪೌಡರ್ ಸೇರಿಸಿ ಹುರಿಯಿರಿ.
*ಬಳಿಕ ತೊಳೆದು ನೆನೆಸಿಕೊಂಡ ಅಕ್ಕಿಯನ್ನು ಸೇರಿಸಿ. ಕೇಸರಿ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.ಅಕ್ಕಿಯ ಪ್ರಮಾಣಕ್ಕೆ ಎರಡರಷ್ಟು ನೀರನ್ನು ಸೇರಿಸಿ ಬೇಯಲು ಇಡಿ.
* ಅಕ್ಕಿ ಚೆನ್ನಾಗಿ ಬೆರತು ಕುದಿಯುವ ಹಾಗೆ ಬೇಯಿಸಿ ಮೂರು ವಿಶಿಲ್ ಹಾಕಿಸಿದರೆ ರುಚಿಯಾದ ಡ್ರೈ ಫ್ರೂಟ್ಸ್ ಪಲಾವ್ ಸವಿಯಲು ಸಿದ್ಧವಾಗುತ್ತದೆ.