ಮೈಸೂರು: ಅರಮನೆ ವೀಕ್ಷಿಸಲು ನಿಧಾನವಾಗಿ ಪ್ರವಾಸಿಗರ ಸಂಖ್ಯೆ ಏರುತ್ತಿದೆ. ಕಳೆದ ಒಂದು ವಾರದಲ್ಲಿ ಪ್ರವಾಸಿಗರ ಸಂಖ್ಯೆ ತುಂಬಾ ಕಡಿಮೆ ಇತ್ತು. ಇಂದು ಇದರ ಸಂಖ್ಯೆ ಹೆಚ್ಚಾಗಿದೆ.
Advertisement
ಕೊರೊನಾ ಮೊದಲ ಅಲೆ ನಂತರದಲ್ಲಿ ಪ್ರವಾಸಿ ತಾಣಗಳ ವೀಕ್ಷಣೆಗೆ ಜನ ಬರುವುದು ಬಹಳ ವಿರಳವಾಗಿತ್ತು. ಆದರೆ ಎರಡನೇ ಅಲೆಯ ನಂತರ ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿದ ಮೇಲೆ ಒಂದೇ ವಾರಕ್ಕೆ ಜನ ಏರಿಕೆ ಕಾಣುತ್ತಿರುವುದು ಮೈಸೂರಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣುವ ಶುಭ ಲಕ್ಷಣವಾಗಿದೆ.
Advertisement
Advertisement
ಜೂಗೆ ಬರ್ತಿಲ್ಲ ಪ್ರವಾಸಿಗರು
ಮೈಸೂರು ಮೃಗಾಲಯ ವೀಕ್ಷಣೆಗೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರು ಆಗಮಿಸಿಲ್ಲ. ಭಾನುವಾರದಂದು ಮೃಗಾಲಯ ವೀಕ್ಷಣೆಗೆ ಅತಿ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದರು. ಆದರೆ ಇಂದು ಸಹ ಅಂತಹ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಜೂ ವೀಕ್ಷಣೆಗೆ ಬಂದಿಲ್ಲ.
Advertisement
ಕಳೆದ ಸೋಮವಾರದಿಂದ ಮೃಗಾಲಯ ವೀಕ್ಷಣೆಗೆ ಅವಕಾಶವಿದೆ. ಅವತ್ತಿನಿಂದ ನಿಧಾನವಾಗಿ ಪ್ರವಾಸಿಗರ ಸಂಖ್ಯೆ ಏರುತ್ತಿದೆ. ಆದರೆ ಭಾನುವಾರವೂ ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. ಬಹುತೇಕ ಇಡೀ ದಿನಕ್ಕೆ ಜೂ ವೀಕ್ಷಿಸುವವರ ಸಂಖ್ಯೆ 2 ಸಾವಿರ ಗಡಿ ದಾಟುವುದು ಕಷ್ಟ. ಮಾಮೂಲಿಯ ದಿನಗಳಲ್ಲಿ ಭಾನುವಾರದಂದು ಕನಿಷ್ಟ 15 ಸಾವಿರ ಜನ ಜೂ ವೀಕ್ಷಣೆಗೆ ಬರುತ್ತಿದ್ದರು. ಆದರೆ ಇದೀಗ ತೀರಾ ಇಳಿಕೆ ಕಂಡಿದೆ.