ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

Public TV
1 Min Read
ARJUN SARJA 1

ಬೆಂಗಳೂರು: ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಮಗನನ್ನು 20 ವರ್ಷದ ಬಳಿಕ ನಾನೇ ಬಹುಶಃ ಲಾಂಚ್ ಮಾಡ್ತೀನಿ ಎಂದು ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.

junior chiru dhruva sarja

ಮೇಘನಾ ರಾಜ್ ಅವರಿಗೆ ಗಂಡು ಮಗು ಜನನವಾದ ಬಳಿಕ ಅರ್ಜುನ್ ಸರ್ಜಾ ಅವರು ಇಂದು ಆಸ್ಪತ್ರೆಗೆ ತೆರಳಿ ಚಿರು ಪುತ್ರನನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 20 ವರ್ಷದ ನಂತರ ಚಿರು ಮಗನನ್ನು ನಾನೇ ಬಹುಶಃ ಲಾಂಚ್ ಮಾಡ್ತೀನಿ. ಸೀಮಂತದ ಸಮಯದಲ್ಲಿ ಹಾರ್ಟ್ಲಿ ವೆಲ್ಕಮ್ ಜೂನಿಯರ್ ಚಿರು ಅಂತ ಎಲ್ಲರೂ ಹಾಡಿದ್ವಿ. ನಮಗೂ ಗಂಡು ಮಗು ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೇಘನಾ ರಾಜ್ ಡೆಲಿವರಿ- ಜೂನಿಯರ್ ಸರ್ಜಾ ಆಗಮನ

MEGHANA RAJ SARJA

ಚಿರು ಅಗಲಿಕೆ ಪ್ರತಿಯೊಬ್ಬರಿಗೂ ಜೀರ್ಣಿಸಿಕೊಳ್ಳಲು ಆಗದಷ್ಟು ನೋವಾಗಿತ್ತು. ಈಗ ಎಲ್ಲರ ಮುಖದಲ್ಲಿ ಕಾಂತಿ ಬಂದಿದೆ. ಸಣ್ಣ ನಗು ಕಾಣಿಸಿಕೊಂಡಿದೆ. ಚಿರು ಈ ಸಮಯದಲ್ಲಿ ಇರಬೇಕಾಗಿತ್ತು ಈ ಸಂಭ್ರಮ ನೋಡಬೇಕಿತ್ತು ಎಂದು ಗದ್ಗದಿತರಾದರು. 36 ವರ್ಷದ ಹಿಂದೆ ಶೂಟಿಂಗ್ ನಿಲ್ಲಿಸಿ ಚಿರು ನೋಡಲು ಬೆಂಗಳೂರಿಗೆ ಬಂದಿದ್ದೆ. ಈಗ ಅವನ ಮಗನನ್ನ ನೋಡಲು ಬಂದಿದ್ದೇನೆ ಎಂದು ಅರ್ಜುನ್ ಸರ್ಜಾ ಖುಷಿ ಹಂಚಿಕೊಂಡರು. ಇದನ್ನೂ ಓದಿ: ನಮ್ಮ ನೋವು ದೂರ ಮಾಡಲು ಮಗು ರೂಪದಲ್ಲಿ ಚಿರು ಬಂದಿದ್ದಾನೆ – ಅರ್ಜುನ್ ಸರ್ಜಾ

ARJUN SARJA 1 1

ಈ ಹಿಂದೆ ಅಂದರೆ ಗುರುವಾರ ಮೇಘನಾ ಅವರು ಮಗುವಿಗೆ ಜನ್ಮ ನೀಡಿದಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅರ್ಜುನ್ ಸರ್ಜಾ, 36 ವರ್ಷಗಳ ಹಿಂದೆ ಚಿರು ಹುಟ್ಟಿದಾಗ ಚೆನ್ನೈಯಿಂದ ಅವನ್ನು ನೋಡಲು ಓಡಿ ಬಂದಿದ್ದೆ. ಈಗ ಅವನ ಮಗುವನ್ನು ನೋಡಲು ಬರುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ಹೇಳಲಾಗದಷ್ಟು ಸಂತೋಷವಾಗಿದೆ. ನಾಲ್ಕು ತಿಂಗಳ ನಂತರ ನಮ್ಮ ಕುಟುಂಬದಲ್ಲಿ ಸಂತೋಷ ಸಂಭ್ರಮ ಮನೆಮಾಡಿದೆ. ಚಿರು ವಾಪಸ್ ಬಂದಿದ್ದಾನೆ ಎಂಬ ತೃಪ್ತಿ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಹುಟ್ಟಿದಾಗ ಕುಣಿದಾಡಿದ್ದೆ, ಆದ್ರೆ ಇಂದು ಈ ರೀತಿ ಸಾಲುಗಳನ್ನು ಬರೀತೀನಿ ಅಂದ್ಕೊಂಡಿರ್ಲಿಲ್ಲ: ಅರ್ಜುನ್ ಸರ್ಜಾ

Share This Article
Leave a Comment

Leave a Reply

Your email address will not be published. Required fields are marked *