Connect with us

Bengaluru City

ಮೇಘನಾ ರಾಜ್ ಡೆಲಿವರಿ- ಜೂನಿಯರ್ ಸರ್ಜಾ ಆಗಮನ

Published

on

– ನಿಶ್ಚಿತಾರ್ಥದ ದಿನವೇ ಗಂಡು ಮಗುವಿಗೆ ಜನನ

ಬೆಂಗಳೂರು: ಚಿರಂಜೀವಿ ಸಂರ್ಜಾ ಪತ್ನಿ, ನಟಿ ಮೇಘನಾ ರಾಜ್ ಅವರಿಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿಸಿದ್ದಾರೆ. ಇದರಿಂದಾಗಿ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿಶ್ಚಿತಾರ್ಥದ ದಿನವೇ ಮಗುವಿಗೆ ಜನ್ಮ ನೀಡಿರುವುದು ಇನ್ನೂ ವಿಶೇಷವಾಗಿದೆ.

ಜೂನಿಯರ್ ಚಿರು ಕುರಿತು ಅಕ್ಟೋಬರ್ 16ರಂದು ಧ್ರುವ ಸರ್ಜಾ ವಿಡಿಯೋ ಮಾಡುವ ವೆಲ್ ಕಮ್ ಹೇಳಿದ್ದರು. ಅವರ ನಿರೀಕ್ಷೆಯಂತೆ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮೂಲಕ ಜೂನಿಯರ್ ಚಿರು ಆಗಮಿಸಿದಂತಾಗಿದೆ. ಇನ್ನೂ ವಿಶೇಷ ಎಂಬಂತೆ ಚಿರು, ಮೆಘನಾ ನಿಶ್ಚಿತಾರ್ಥದ ದಿನವೇ ಮರಿ ಚಿರು ಆಗಮನ ಸರ್ಜಾ ಕುಟುಂಬಸ್ಥರಲ್ಲಿ ತುಂಬಾ ಸಂತಸವನ್ನುಂಟು ಮಾಡಿದೆ. ಕುಟುಂಬ ಎಲ್ಲ ಸದಸ್ಯರು ಸಂಭ್ರಮಿಸುತ್ತಿದ್ದಾರೆ.

ಚಿರಂಜೀವಿ ಸರ್ಜಾ ಜೂನ್ 7 ರಂದು ಹೃದಯಾಘಾತವಾಗಿ ವಿಧಿವಶರಾಗಿದ್ದಾರೆ. ಅವರು ಸಾವನ್ನಪ್ಪಿದ ದಿನವೇ ಮೇಘನಾ ರಾಜ್ ಸರ್ಜಾ ಗರ್ಭಿಣಿಯಾಗಿರುವ ಕುರಿತ ಸುದ್ದಿ ಹೊರ ಬಿದ್ದಿತ್ತು. ಅದಾದ ಬಳಿಕ ಅವರು ಮನೆಯಲ್ಲೇ ಕಾಲ ಕಳೆಯುವ ಮೂಲಕ ಕಾಳಜಿ ವಹಿಸಿದ್ದರು. ಈ ವೇಳೆ ಸ್ಯಾಂಡಲ್‍ವುಡ್‍ನ ಹಲವು ನಟ, ನಟಿಯರು ಗಣ್ಯರು ಹಾಗೂ ಸ್ನೇಹಿತರು ಮೇಘನಾ ಅವರನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದರು. ಇದೀಗ ಮೇಘನಾ ಅವರಿಗೆ ಮಗು ಹುಟ್ಟಿರುವುದರಿಂದ ಇಡೀ ಸ್ಯಾಂಡಲ್‍ವುಡ್‍ನಲ್ಲೇ ಸಂತಸ ಮನೆ ಮಾಡಿದೆ.

ಈ ಹಿಂದೆ ನಟ ಧ್ರುವ ಸರ್ಜಾ ವಿಡಿಯೋ ಮೂಲಕ ಈ ಬಗ್ಗೆ ಸುಳಿವು ನೀಡಿದ್ದರು. ಜೂನಿಯರ್ ಚಿರು ಆಗಮನದ ಕುರಿತು ತಿಳಿಸಿ, ಸ್ವಾಗತಕ್ಕಾಗಿ ವಿಡಿಯೋವನ್ನು ಸಹ ಮಾಡಿದ್ದರು. ವಿಡಿಯೋದಲ್ಲಿ ಸರ್ಜಾ ಕುಟುಂಬದ ವಿವಿಧ ಹಿರಿಯರು ಹಾಗೂ ಗಣ್ಯರನ್ನು ಸಹ ತೋರಿಸಲಾಗಿತ್ತು. ಹ್ಯಾಪಿ ವೆಲ್ ಕಮ್ ಚಿರು ಎಂದು ಅರ್ಜುನ್ ಸರ್ಜಾ ಸಹ ಸ್ವಾಗತಿಸಿದ್ದರು. ಈ ವೀಡಿಯೋ ಕುರಿತು ಸಾಕಷ್ಟು ಚರ್ಚೆ ಸಹ ನಡೆದಿತ್ತು.

ಅಕ್ಟೋಬರ್ 17 ಚಿರು ಹುಟ್ಟುಬ್ಬದ ದಿನವಾಗಿದ್ದು, ಇದೇ ದಿನ ಮೇಘನಾ ಜೂನಿಯರ್ ಚಿರುಗೆ ಜನ್ಮ ನೀಡಲಿದ್ದಾರಾ ಎಂಬ ಸುದ್ದಿ ಧ್ರುವ ಹಂಚಿಕೊಂಡ ವಿಡಿಯೋ ಬಳಿಕ ಹರಿದಾಡಿತ್ತು. ವಿಡಿಯೋ ಪೋಸ್ಟ್ ಮಾಡಿ ಸಾಲುಗಳನ್ನು ಬರೆದಿದ್ದ ಧ್ರುವ, ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದರು. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು. ಈ ಪೋಸ್ಟ್ ನ್ನು ಸರ್ಜಾ ಕುಟುಂಬದ ಬಹುತೇಕರಿಗೆ ಟ್ಯಾಗ್ ಮಾಡಲಾಗಿತ್ತು. ಕೊನೆಗೆ ಜೈ ಹನುಮಾನ್ ಎಂದಿದ್ದರು.

ಅಕ್ಟೋಬರ್ 4ರಂದು ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು.

Click to comment

Leave a Reply

Your email address will not be published. Required fields are marked *