ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು ಕೊರೊನಾ ಸ್ಫೋಟವಾಗಿದ್ದು. ಒಂದೇ ದಿನ 32 ಮಂದಿಗೆ ಕೊರೊನಾ ಸೋಂಕು ಬಂದಿದೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ 13, ಗೌರಿಬಿದನೂರು ತಾಲೂಕಿನಲ್ಲಿ 14 ಮತ್ತು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 04 ಸೇರಿದಂತೆ ಗುಡಿಬಂಡೆ ತಾಲೂಕಿನ ವ್ಯಾಪ್ತಿಯಲ್ಲಿ ಒಂದು ಪ್ರಕರಣ ವರದಿಯಾಗಿದೆ.
Advertisement
ಈ ಬಗ್ಗೆ ಮಾತನಾಡಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಪ್ರಕರಣ 300 ಆಗಿದೆ. ಅದರಲ್ಲಿ 200 ಮಂದಿ ಗುಣಮುಖರಾಗಿದ್ದು, 10 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಬ್ಬರಿಗೆ ಕೊರೊನಾ ದೃಢವಾದರೂ ಅಪಘಾತದಿಂದ ಮೃತರಾಗಿದ್ದಾರೆ. ಹೀಗಾಗಿ ಅದು ನಾನ್ ಕೋವಿಡ್ ಪ್ರಕರಣ ಆಗಿದೆ. ಸದ್ಯ 89 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.
Advertisement
Advertisement
ಇಂದು ಒಂದೇ ದಿನ 32 ಪ್ರಕರಣಗಳ ವರದಿಯಾಗಿದೆ. ಆದರೂ ಜನ ಆತಂಕಪಡುವ ಆಗತ್ಯವಿಲ್ಲ. ಗೌರಿಬಿದನೂರು ಹಾಗೂ ಚಿಂತಾಮಣಿಯ ಎರಡು ಕುಟುಂಬಗಳಲ್ಲಿ ಅತಿ ಹೆಚ್ಚಿನ ಸೋಂಕಿತರು ಕಂಡುಬಂದಿದ್ದಾರೆ. ಹೊಸ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿಲ್ಲ. ಹೀಗಾಗಿ ಜನ ಆತಂಕಪಡಬೇಡಿ. ಆದರೆ ಎಚ್ಚರಿಕೆ ವಹಿಸಿ. ಮಾಸ್ಕ್ ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾಗೆ ಕಡಿವಾಣ ಹಾಕಲು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.