ಚಳಿಗಾಲದಲ್ಲಿ ಕೊರೊನಾ ಹಬ್ಬುವ ಬಗ್ಗೆ ಎಚ್ಚರಿಕೆ: ಸಚಿವ ಸುಧಾಕರ್

Public TV
3 Min Read
Sudhakar

– ಗಣೇಶ, ಷಣ್ಮುಖ ಮೂರು ಲೋಕ ಸುತ್ತಿದ ಕಥೆ ಹೇಳಿದ ಸಚಿವ

ಬೆಂಗಳೂರು: ಮುಂದಿನ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಅತಿಯಾದ ಚಳಿ ಇರುವ ತಿಂಗಳಾಗಿದ್ದು, ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹಾಗೂ ಕೋವಿಡ್ ಹೆಚ್ಚುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

 cold weather

ಆರೋಗ್ಯ ಇಲಾಖೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಬೆಂಗಳೂರಿನಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್ ಅವರು, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಅತಿಯಾದ ಚಳಿ ಇರುವ ಕಾರಣ ಸೋಂಕು ಹೆಚ್ಚಾಗುವ ಕುರಿತು ಮುನ್ನಚ್ಚೆರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ಆದಷ್ಟು ಹೆಚ್ಚು ಟೆಸ್ಟ್ ಮಾಡಿಸಬೇಕಾದ ಅವಶ್ಯಕತೆಯಿದೆ. ಕೇವಲ ಕೋವಿಡ್ ಮಾತ್ರವಲ್ಲದೇ ಇತರೇ ಸಾಂಕ್ರಾಮಿಕ ರೋಗಗಳು ಉಲ್ಬಣ ಆಗದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ಮಾಡಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ – ಇಂದು 5,018 ಹೊಸ ಪ್ರಕರಣ

corona virus 1

ಕೇರಳದಲ್ಲಿ ಓಣಂ ಆಚರಣೆ ನಂತರ ಕೇರಳದಲ್ಲಿ ಕೊರೊನಾ ನಿಯಂತ್ರಣ ತಪ್ಪಿದೆ. ಆದ್ದರಿಂದ ನಾಡಹಬ್ಬ ದಸರಾದ ವಿಚಾರದಲ್ಲಿ ನಾವು ಎಚ್ಚರಿಕೆ ವಹಿಸಬೇಕು. ಆದಷ್ಟು ಸರಳವಾಗಿ ನಾಡಹಬ್ಬ ದಸರಾ ಆಚರಿಸಬೇಕಿದೆ. ರಾಜ್ಯದಲ್ಲಿ ಪ್ರತಿದಿನ 80 ಸಾವಿರ ಆರ್ ಟಿಪಿಎಸ್ ಪರೀಕ್ಷೆ ಮಾಡುವ ಸಾಮರ್ಥ್ಯ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿದೆ.

ಅಕ್ಟೋಬರ್ 17 ರಿಂದ ಇಲ್ಲಿಗೆ ಶೇ.73 ರಷ್ಟು ಟೆಸ್ಟ್ ಹೆಚ್ಚಿಗೆ ಮಾಡಿದ್ದೇವೆ. ರಾಜ್ಯದಲ್ಲಿ 1.37% ಹಾಗೂ ಬೆಂಗಳೂರಿನಲ್ಲಿ 1.14% ರಷ್ಟು ಸಾವಿನ ಪ್ರಮಾಣವಿದೆ. ಈಗ ಸೋಂಕಿತರ ಹಾಗೂ ಸಾವಿನ ಪ್ರಮಾಣ ಕಡಿಮೆ ಆಗುತ್ತಿದೆ. ಇದುವರೆಗೂ ರಾಜ್ಯದಲ್ಲಿ 7.70 ಲಕ್ಷ ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟ್ ಮಾಡಲಾಗುತ್ತಿದ್ದು, ರ‍್ಯಾಪಿಡ್ ಮತ್ತು ಆ್ಯಂಟಿಜೆನ್ ಟೆಸ್ಟ್ ಕೂಡ ಹೆಚ್ಚಾಗಿದೆ. 17ರಲ್ಲಿ ಅಕ್ಟೋಬರ್ 22.90 ಲಕ್ಷ ಟೆಸ್ಟ್ ಆಗಿದ್ದು, ಶೇ.73 ಪ್ರಮಾಣ ಹೆಚ್ಚಾಗಿದೆ. ದೆಹಲಿ ಶೇ.58 ರಷ್ಟು ಟೆಸ್ಟ್ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಲ್ಲಿ ಕಳೆದ 15 ದಿನದಲ್ಲಿ ಟೆಸ್ಟ್ ಪ್ರಮಾಣ ಜಾಸ್ತಿಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಗಣೇಶ ಹಾಗೂ ಷಣ್ಮುಖ ಮೂರು ಲೋಕ ಸುತ್ತಿದ ಕತೆಯನ್ನು ಹೇಳಿದ ಸಚಿವರು, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸ್ ಮಾಡಿಕೊಳ್ಳುವುದು ಕೋವಿಡ್ ದೂರವಿಡಲು ಬಹಳ ಸರಳ ಮತ್ತು ಸುಲಭ. ಗಣೇಶ ಶಿವ, ಪಾರ್ವತಿಯನ್ನು ಸುತ್ತಿದಂತೆ ಎಂದು ತಿಳಿಸಿದರು. ಇದೇ ವೇಳೆ ಟೆಸ್ಟ್ ಮಾಡಿಕೊಳ್ಳುವ ವೇಳೆ ತಮ್ಮ ವಿಳಾಸ, ಮೊಬೈಲ್ ಸಂಖ್ಯೆಯನ್ನು ತಪ್ಪು ತಪ್ಪಾಗಿ ನೀಡುತ್ತಿದ್ದಾರೆ. ಜನರು ಜವಾಬ್ದಾರಿಯಿಂದ ವರ್ತಿಸುವುದು ಸೂಕ್ತ. ಮುಂದಿನ ಮೂರು ತಿಂಗಳಿನಲ್ಲಿ ನಿಮ್ಮನ್ನ ನೀವು ರಕ್ಷಣೆ ಮಾಡಿಕೊಳ್ಳಬೇಕು ಬಹಳ ಮುಖ್ಯ ಸಲಹೆ ನೀಡಿದರು. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.

corona 6

Share This Article
Leave a Comment

Leave a Reply

Your email address will not be published. Required fields are marked *