Connect with us

Corona

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ – ಇಂದು 5,018 ಹೊಸ ಪ್ರಕರಣ

Published

on

– 8,005 ಡಿಸ್ಚಾರ್ಜ್, 64 ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ನಿಧಾನವಾಗಿ ಇಳಿಕೆಯಾಗುತ್ತಿದ್ದು, ಇಂದು 5,018 ಮಂದಿಗೆ ಸೋಂಕು ತಗುಲಿದೆ. ಇಂದು ಕೊರೊನಾಗೆ ರಾಜ್ಯದಲ್ಲಿ 64 ಸೋಂಕಿತರು ಸಾವನ್ನಪ್ಪಿದ್ದಾರೆ.

ಕೊರೊನಾ ಒಟ್ಟು ಸೋಂಕಿತರ ಸಂಖ್ಯೆ 7,70,604ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ 1,06,214 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ ಇದುವರೆಗೂ ಕರ್ನಾಟಕದಲ್ಲಿ 10,542 ಜನರು ಪ್ರಾಣ ಕಳೆದುಕೊಂಡಿದ್ದು, 932 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 8,005 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 6.38% ರಷ್ಟಿದ್ದು, ಮರಣ ಪ್ರಮಾಣ 1.27% ಇದೆ. ಇಂದು 78,581 ಮಂದಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ರಾಜಧಾನಿಯಲ್ಲಿಂದು 2,481 ಪ್ರಕರಣಗಳು ವರದಿಯಾಗಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 64,536 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 94, ಬಳ್ಳಾರಿ 186, ಬೆಳಗಾವಿ 79, ಬೆಂಗಳೂರು ಗ್ರಾಮಾಂತರ 173, ಬೆಂಗಳೂರು ನಗರ 06, ಬೀದರ್ 6, ಚಾಮರಾಜನಗರ 54, ಚಿಕ್ಕಬಳ್ಳಾಪುರ 193, ಚಿಕ್ಕಮಗಳೂರು 69, ಚಿತ್ರದುರ್ಗ 106, ದಕ್ಷಿಣ ಕನ್ನಡ 107, ದಾವಣಗೆರೆ 104, ಧಾರವಾಡ 84, ಗದಗ 19, ಹಾಸನ 105, ಹಾವೇರಿ 69, ಕಲಬುರಗಿ 75, ಕೊಡಗು 32, ಕೋಲಾರ 41, ಕೊಪ್ಪಳ 106, ಮಂಡ್ಯ 130, ಮೈಸೂರು 151, ರಾಯಚೂರು 38, ರಾಮನಗರ 11, ಶಿವಮೊಗ್ಗ 64, ತುಮಕೂರು 253, ಉಡುಪಿ 101, ಉತ್ತರ ಕನ್ನಡ 28, ವಿಜಯಪುರ 44 ಮತ್ತು ಯಾದಗಿರಿಯಲ್ಲಿ 15 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *