ಬೆಂಗಳೂರು: ಕೋವಿಡ್-19 ಎರಡನೇ ಅಲೆ ಮತ್ತು ಲಾಕ್‍ಡೌನ್‍ನಿಂದಾಗಿ ಅನೇಕ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹ ಶಿಕ್ಷಕರಿಗೆ ನೆರವಾಗಲು ಸುದೀಪ್ ಮುಂದೆ ಬಂದಿದ್ದಾರೆ.
ಕಿಚ್ಚ ಸುದೀಪ್ ತಮ್ಮ ಚಾರಿಟೇಬಲ್ ಸೊಸೈಟಿ ಮೂಲಕ ಸಹಾಯ ಮಾಡುತ್ತಿದ್ದಾರೆ. ಕಿಚ್ಚನ ಕೈತುತ್ತು ಕಾರ್ಯಕ್ರಮದಡಿಯಲ್ಲಿ ಅಗತ್ಯವಿರುವ ಮನೆ ಮನೆಗೆ ತೆರಳಿ ಕಿಚ್ಚ ಸುದೀಪ್ ತಂಡ ಆಹಾರ ನೀಡುವ ಕೆಲಸದಲ್ಲಿ ನಿರತವಾಗಿದೆ. ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಿಗೂ ಕಿಚ್ಚ ಸುದೀಪ್ ತಂಡ ಆಹಾರ ನೀಡಿದ್ದರು. ಮಂಗಳಮುಖಿಯರಿಗೂ ಸುದೀಪ್ ತಂಡ ದಿನಸಿ ಕಿಟ್ ಹಾಗೂ ಆಹಾರವನ್ನು ಒದಗಿಸಿದ್ದರು.
Advertisement
ನೀವು ರೂಪಿಸಿದ ಈ ವ್ಯಕ್ತಿತ್ವ.. ನೀವು ಕಲಿಸಿದ ವಿದ್ಯೆ, ನೀವು ಕಲಿಸಿದ ಮಾತುಗಳು.. ಎಲ್ಲವನ್ನು ಗೌರವ ಮತ್ತು ಪ್ರೀತಿಯಿಂದ ನಿಮಗೆ ಹಿಂದಿರುಗಿಸುವ ಸಮಯ.
– @KicchaSudeep
“ಗುರುಗಳಿಗೆ ಕಿಚ್ಚನ ನಮನ”
???? 6360334455
ಸದಾ ನಿಮ್ಮೊಂದಿಗೆ, #KSCS#ಮೊದಲು_ಮಾನವನಾಗು@iampriya06 @Kitty_R7#KichchaSudeepaCharitableSociety pic.twitter.com/wsMVQqla71
— ಮೊದಲು ಮಾನವನಾಗು (KSCS) (@KSCS__Official) May 25, 2021
Advertisement
ಸಂಕಷ್ಟದ ಸಮಯದಲ್ಲಿ ಅನೇಕರಿಗೆ ಸಹಾಯ ಮಾಡುತ್ತ, ಮಾನವೀಯ ಕೆಲಸಗಳನ್ನು ಮಾಡುತ್ತಿರುವ ಕಿಚ್ಚ ಸುದೀಪ್ ಇದೀಗ ಗುರುಗಳಿಗೆ ನಮನ ಸಲ್ಲಿಸಲು ಮುಂದಾಗಿದ್ದಾರೆ. ಗುರುಗಳಿಗೆ ಕಿಚ್ಚನ ನಮನ ಕಾರ್ಯಕ್ರಮದಡಿಯಲ್ಲಿ ತಮ್ಮ ಚಾರಿಟೇಬಲ್ ಸೊಸೈಟಿ ಮುಖಾಂತರ ಶಿಕ್ಷಕರಿಗೆ ಗೌರವಧನ ನೀಡಲು ಸುದೀಪ್ ನಿರ್ಧರಿಸಿದ್ದಾರೆ.
Advertisement
Advertisement
ಕೋವಿಡ್-19 ಎರಡನೇ ಅಲೆ ಮತ್ತು ಲಾಕ್‍ಡೌನ್‍ನಿಂದಾಗಿ ಅನೇಕ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹ ಶಿಕ್ಷಕರಿಗೆ ನೆರವಾಗಲು ಸುದೀಪ್ ಮನಸ್ಸು ಮಾಡಿದ್ದಾರೆ. ಗುರುಗಳಿಗೆ ಕಿಚ್ಚನ ನಮನ ಕಾರ್ಯಕ್ರಮದ ಮೊದಲ ಹಂತವಾಗಿ ಕಷ್ಟದಲ್ಲಿರುವ 50 ಜನ ಶಿಕ್ಷಕರಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ತಲಾ ಎರಡು ಸಾವಿರ ರೂಪಾಯಿ ಗೌರವಧನ ನೀಡಲಿದೆ. ಕಿಚ್ಚ ಸುದೀಪ್ ಮತ್ತು ಅವರ ತಂಡದ ಈ ಕಾರ್ಯಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.