ರಾಯ್ಪುರ: 9 ತಿಂಗಳು ಗರ್ಭಿಣಿಯಾಗಿದ್ರೂ ರಜೆ ಪಡೆಯದೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ನರ್ಸ್ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಾರೆ. ಛತ್ತೀಸಗಢ ರಾಜ್ಯದ ಕಬೀರಧಾಮ್ ಜಿಲ್ಲೆಯ ಲಿಮೋ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.
Advertisement
ಪ್ರಭಾ ಮೃತ ನರ್ಸ್. ಮೃತ ಪ್ರಭಾ ಲಿರೋಮಿ ಜಿಲ್ಲೆಯ ಮುಗೇಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅದೇ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ನರ್ಸ್ ಪ್ರಭಾ ಕೊರೊನಾ ಕಾಲದಲ್ಲಿ ರಜೆ ಸಹ ಪಡೆದಿರಲಿಲ್ಲ. 9 ತಿಂಗಳು ಗರ್ಭಿಣಿಯಾಗಿದ್ರೂ ಕೋವಿಡ್ ವಾರ್ಡಿನಲ್ಲಿಯೇ ಸೇವೆ ಸಲ್ಲಿಸುತ್ತಿದ್ದರು.
Advertisement
Advertisement
ಏಪ್ರಿಲ್ 30ರಂದು ಹೆರಿಗೆ ನೋವು ಕಾಣಿಸಿಕೊಂಡಾಗ ಕವಾರ್ಧ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸಲಾಗಿತ್ತು. ಈ ವೇಳೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಪ್ರಭಾಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಹೆರಿಗೆ ಬಳಿಕ ಕೊರೊನಾ ಚಿಕಿತ್ಸೆಗೆ ಒಳಗಾಗಿದ್ದರು.
Advertisement
ಪಲ್ಸ್ ರೇಟ್ ಕಡಿಮೆಯಾದ ಹಿನ್ನೆಲೆ ವೈದ್ಯರು ರಾಯ್ಪುರ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೇ 21 ರಂದು ಪ್ರಭಾ ಸಾವನ್ನಪ್ಪಿದ್ದರು. ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಾಗ ರಜೆ ಪಡೆಯುವಂತೆ ಹೇಳಿದ್ರೂ ಸೇವೆ ಸಲ್ಲಿಸಿದಳು ಎಂದು ಪ್ರಭಾ ಪತಿ ಕಣ್ಣೀರು ಹಾಕ್ತಾರೆ.