– ಸ್ಥಳಕ್ಕೆ ಕೃಷಿ ವಿಜ್ಞಾನಿಗಳು ಭೇಟಿ ಪರಿಶೀಲನೆ
ಕೋಲಾರ: ಜಿಲ್ಲೆಗೂ ಮಿಡತೆಗಳು ವಕ್ಕರಿಸಿವೆಯಾ ಎಂಬ ಅನುಮಾನ ಇದೀಗ ಕಾಡುತ್ತಿದ್ದು, ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಕೋಲಾರ ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಗ್ರಾಮಗಳ ಬಳಿ ಮಿಡತೆಗಳ ಗುಂಪು ಕಾಣಿಸಿಕೊಳ್ಳುವ ಮೂಲಕ ರೈತರನ್ನು ಆತಂಕಕ್ಕೀಡು ಮಾಡಿವೆ. ಗ್ರಾಮದ ತೋಟಗಳು, ರಸ್ತೆ ಬದಿಯ ಗಿಡಗಳು ಸೇರಿದಂತೆ ವಿದ್ಯುತ್ ಕಂಬಗಳ ಮೇಲೆ ಗುಂಪು ಗುಂಪಾಗಿ ಮಿಡತೆಗಳು ಕಾಣಿಸಿಕೊಂಡಿವೆ.
Advertisement
Advertisement
ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ರಸ್ತೆ ಬದಿಯ ಗಿಡಗಳ ಮೇಲೆ ಗುಂಪಾಗಿದ್ದ ಮಿಡತೆಗಳನ್ನು ಸ್ಥಳೀಯರು ಸುಟ್ಟಿದ್ದಾರೆ. ಈಗಾಗಲೇ ದೇಶದ ಹಲವೆಡೆ ಕಾಣಿಸಿಕೊಂಡಿರುವ ಆಫ್ರಿಕನ್ ಮಿಡತೆಗಳನ್ನು ಹೋಲುತ್ತಿವೆ. ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.