ಲಂಡನ್: ಕೊರೊನಾ ಹೊಸ ರೂಪಾಂತರ ಆತಂಕದ ಹಿನ್ನೆಲೆ ಬ್ರಿಟನ್ ಮತ್ತೆ ಲಾಕ್‍ಡೌನ್ ಆಗಿದೆ. ಪ್ರಧಾನ ಮಂತ್ರಿ ಬೋರಿಸ್ ಜಾನ್‍ಸನ್ ಸೋಮವಾರ ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ.
Advertisement
ಇಂಗ್ಲೆಂಡ್ ನಲ್ಲಿಯ ಸುಮಾರು 56 ಮಿಲಿಯನ್ ಜನರು ಲಾಕ್‍ಡೌನ್‍ಗೆ ಒಳಪಡಲಿದ್ದಾರೆ. ಫೆಬ್ರವರಿ ಮಧ್ಯದವರೆಗೂ ಲಾಕ್‍ಡೌನ್ ಜಾರಿಯಲ್ಲಿರಲಿದ್ದು, ಬುಧವಾರದಿಂದ ಎಲ್ಲ ಶಾಲೆಗಳು ಬಂದ್ ಆಗಲಿವೆ. ಇಂಗ್ಲೆಂಡ್ ನಲ್ಲಿ ಕೊರೊನಾ ಮರಣ ದರ ಅತ್ಯಧಿಕವಾಗಿದ್ದು, ಮುಕ್ಕಾಲು ಭಾಗದಷ್ಟು ಜನ ಸೋಂಕಿಗೆ ಒಳಗಾಗಿದ್ದಾರೆ. ಆದ್ದರಿಂದ ಮೊದಲ ಲಾಕ್‍ಡೌನ್ ಗಿಂತ ಕಠಿಣ ನಿಯಮಗಳ ಜಾರಿಯಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ ಎಂದು ಬೋರಿಸ್ ತಿಳಿಸಿದ್ದಾರೆ.
Advertisement
Advertisement
ಸದ್ಯ 27 ಸಾವಿರ ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಕಾಣಿಸಿಕೊಂಡು ಕೊರೊನಾ ತೀವ್ರತೆ ಶೇ.40 ರಷ್ಟು ಹೆಚ್ಚಿದೆ. ಮಂಗಳವಾರ 24 ಗಂಟೆಯಲ್ಲಿ 80 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದೆ. ಸ್ಕಾಟ್‍ಲ್ಯಾಂಡ್ ಲಾಕ್‍ಡೌನ್ ಘೋಷಿಸಿದ ಬಳಿಕ ಈಗ ಇಂಗ್ಲೆಂಡ್ ಸಹ ಲಾಕ್ ಆಗಿದೆ.