ಲಕ್ನೋ: ಕೊರೊನಾ ವಿರುದ್ಧ ನೀವು ಗೆಲ್ಲಬೇಕಾದರೆ ಗೋಮೂತ್ರ ಸೇವಿಸಿ ಎಂದು ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ತಿಳಿಸಿದ್ದಾರೆ. ಅಲ್ಲದೆ ತಾವು ಗೋಮೂತ್ರ ಸೇವಿಸುವ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
- Advertisement 2-
ಬಿಜೆಪಿ ಶಾಸಕ ಗೋಮೂತ್ರ ಸೇವಿಸುವ ವೀಡಿಯೋ ಸದ್ಯ ವೈರಲ್ ಆಗಿದೆ, ಎಲ್ಲರೂ ಗೋಮೂತ್ರ ಸೇವಿಸಿ ಎಂದು ಸುರೇಂದ್ರ ಸಿಂಗ್ ಮನವಿ ಮಾಡಿದ್ದಾರೆ. ಗೋಮೂತ್ರ ಬಳಸಿ ಕೊರೊನಾ ಹರಡುವುದನ್ನು ತಡೆಗಟ್ಟಬಹುದಾಗಿದೆ. ಅಲ್ಲದೆ ಜನರಿಗಾಗಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವುದರ ಮಧ್ಯೆಯೂ ನನ್ನ ಉತ್ತಮ ಆರೋಗ್ಯದ ಗುಟ್ಟು ಗೋಮೂತ್ರ ಎಂದು ಸಿಂಗ್ ಹೇಳಿದ್ದಾರೆ.
- Advertisement 3-
ಅಲ್ಲದೆ ಗೋಮೂತ್ರವನ್ನು ಯಾವ ಪ್ರಮಾಣದಲ್ಲಿ, ಹೇಗೆ ಸೇವಿಸಬೇಕು ಎಮಬುದರ ಕುರಿತು ಸಹ ಮಾಹಿತಿ ನೀಡಿರುವ ಅವರು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಬೇಕು. ಒಂದು ಗ್ಲಾಸ್ ನೀರಿನಲ್ಲಿ ಎರಡ್ಮೂರು ಕ್ಯಾಪ್‍ನಷ್ಟು ಗೋಮೂತ್ರ ಬೆರೆಸಿ ಸೇವಿಸಬೇಕು. ಇನ್ನೊಂದು ಮುನ್ನೆಚ್ಚರಿಕೆ ನೀಡಿರುವ ಅವರು, ಗೋಮೂತ್ರ ಸೇವಿಸಿದ ಬಳಿಕ ಅರ್ಧ ಗಂಟೆ ಏನೂ ಸೇವಿಸಬಾರದು ಎಂದಿದ್ದಾರೆ.
- Advertisement 4-
ನಾನು ವಿಜ್ಞಾನವನ್ನು ನಂಬುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಗೋಮೂತ್ರವನ್ನು ಸಂಪೂರ್ಣವಾಗಿ ನಂಬುತ್ತೇನೆ. ಕೊರೊನಾ ಮಹಾಮಾರಿಗೆ ಮಾತ್ರವಲ್ಲ, ಹೃದಯ ಸಂಬಂಧಿ ರೋಗ ಸೇರಿದಂತೆ ಹಲವು ಖಾಯಿಲೆಗಳಿಗೆ ಗೋಮೂತ್ರವೇ ಮದ್ದು. ಇದೇ ವೇಳೆ ಪತಂಜಲಿ ಗೋಮೂತ್ರ ಉತ್ತಮ, ಅಲ್ಲದೆ ನಿಯಮಿತವಾಗಿ ಬೇಯಿಸಿದ ಅರಿಶಿಣ ಪುಡಿ ಬಳಸುವುದರಿಂದ ಸಹ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.