ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ರವೀಂದ್ರ ಜಡೇಜಾ ಅವರಿಗೆ ನೀಡಿದ್ದು ಯಾಕೆ ಎಂಬುದನ್ನು ಧೋನಿ ಬಹಿರಂಗ ಪಡಿಸಿದ್ದಾರೆ.
ಕೊನೆಯ ಓವರ್ ಸ್ಪಿನ್ನರ್ ಜಡೇಜಾ ಅವರಿಗೆ ನೀಡಿದ್ದರಿಂದ ಚೆನ್ನೈಗೆ ಸೋಲಾಗಿದೆ. ಧೋನಿ ನಿರ್ಧಾರವೇ ಚೆನ್ನೈಗೆ ಮುಳುವಾಯಿತು ಎಂಬ ಟೀಕೆ ಸಿಎಸ್‌ಕೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಈಗ ಧೋನಿ ನಾನು ಯಾಕೆ ಈ ನಿರ್ಧಾರಕ್ಕೆ ಬಂದೆ ಎಂಬುದನ್ನು ತಿಳಿಸಿದ್ದಾರೆ.
Advertisement
Advertisement
ಬ್ರಾವೋ ಫಿಟ್ ಇರಲಿಲ್ಲ. ಗಾಯಗೊಂಡು ಮೈದಾನ ತೊರೆದ ನಂತರ ಮತ್ತೆ ಬರಲಿಲ್ಲ. ನನ್ನ ಬಳಿ ಕರ್ರನ್ ಮತ್ತು ಜಡೇಜಾ ಆಯ್ಕೆ ಮಾತ್ರ ಇತ್ತು. ಹೀಗಾಗಿ ಕೊನೆಯ ಓವರ್ ಅನ್ನು ಜಡೇಜಾ ಅವರಿಗೆ ನೀಡಿದೆ ಎಂದು ಹೇಳಿದರು. ಪಂದ್ಯದ ನಂತರ ಕೋಚ್ ಸ್ಟಿಫನ್ ಫ್ಲೇಮಿಂಗ್ ಸಹ ಈ ಮಾತನ್ನೇ ಆಡಿದರು.180 ರನ್ ಗಳ ಗುರಿಯನ್ನು ಪಡೆದ ಡೆಲ್ಲಿ ಕೊನೆಯ 12 ಎಸೆತಗಳಲ್ಲಿ 21 ರನ್ ಬೇಕಿತ್ತು. 19ನೇ ಓವರ್ ಎಸೆದ ಕರ್ರನ್ 4 ರನ್ ನೀಡಿ 1 ವಿಕೆಟ್ ಪಡೆದರು. ಕೊನೆಯ 6 ಎಸೆತದಲ್ಲಿ 17 ರನ್ ಬೇಕಿತ್ತು.
Advertisement
ಕೊನೆಯ ಓವರ್ ಎಸೆದ ಜಡೇಜಾ ಮೊದಲ ಎಸೆತವನ್ನು ವೈಡ್ ಹಾಕಿದರು. ನಂತರದ ಎಸೆತದಲ್ಲಿ ಒಂದು ರನ್ ಬಂತು. ಸ್ಟ್ರೈಕ್‌ಗೆ ಅಕ್ಷರ್ ಪಟೇಲ್ ಬಂದರು. ನಂತರ 2 ಎಸೆತಗಳನ್ನು ಅಕ್ಷರ್ ಪಟೇಲ್ ಸಿಕ್ಸರ್‌ಗೆ ಅಟ್ಟಿದರು. 4ನೇ ಎಸೆತದಲ್ಲಿ 2 ರನ್ ಬಂತು. ಐದನೇಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಡೆಲ್ಲಿ ತಂಡ 5 ವಿಕೆಟ್‌ಗಳ ಜಯವನ್ನು ಪಡೆದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು.
Advertisement
Dwayne Bravo got injured and he could not bowl the last over. He is our death overs bowler: Stephen Fleming, Head Coach, Chennai Super Kings. #Dream11IPL #DCvCSK pic.twitter.com/FP2oILuvTV
— IndianPremierLeague (@IPL) October 17, 2020
29 ಎಸೆತಗಳಲ್ಲಿ 50 ರನ್ ಹೊಡೆದ ಶಿಖರ್ ಧವನ್ ಅಜೇಯ 101 ರನ್(58 ಎಸೆತ, 14 ಬೌಂಡರಿ, 1ಸಿಕ್ಸರ್) ಚಚ್ಚಿದರು. ಸ್ಫೋಟಕ ಬ್ಯಾಟಿಂಗ್ ಮಾಡಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಅಕ್ಷರ್ ಪಟೇಲ್ 21 ರನ್(5 ಎಸೆತ, 3 ಸಿಕ್ಸರ್) ಹೊಡೆದರು.
ಚೆನ್ನೈ ಪರ 6 ಮಂದಿ ಬೌಲಿಂಗ್ ಮಾಡಿದ್ದರು. ದೀಪಕ್ ಚಹರ್, ಸ್ಯಾಮ್ ಕರ್ರನ್, ಶಾರ್ದೂಲ್ ಠಾಕೂರ್, ಜಡೇಜಾ, ಕರ್ಣ್ ಶರ್ಮಾ, ಬ್ರಾವೋ ಬೌಲಿಂಗ್ ಮಾಡಿದ್ದರು. ಬ್ರಾವೋ 3 ಓವರ್ ಬೌಲ್ ಮಾಡಿ 23 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಜಡೇಜಾ 1.5 ಓವರ್ ಬೌಲ್ ಮಾಡಿ 35 ರನ್ ನೀಡಿದ್ದರು.
With 14 points, @DelhiCapitals are back on top in the points table after Match 34 of #Dream11IPL. pic.twitter.com/7HWXecn8sr
— IndianPremierLeague (@IPL) October 17, 2020