ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅತ್ತೆ ಸಿಟ್ಟನ್ನು ಕೊತ್ತಿ ಮೇಲೆ ತೋರಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರ ಬಿಟ್ಟು ಪಕ್ಷದ ಕೆಲಸಕ್ಕೆ ಹೋಗಿದ್ದೇನೆ. ಅಧಿಕಾರದ ಸ್ವಾರ್ಥ ಇದ್ದಿದ್ದರೆ ಮಂತ್ರಿಯಾಗಿಯೇ ಇರುತ್ತಿದ್ದೆ. ಅವರು ಅನುದಾನ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಅನುದಾನವನ್ನು ಮುಖ್ಯಮಂತ್ರಿ ಬಳಿ ಕೇಳಲಿ. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಕೇಳಲಿ. ಆದರೆ ಅವರು ನನ್ನ ಹೆಸರನ್ನು ಏಕೆ ಬಳಸುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ ಎಂದಿದ್ದಾರೆ.
Advertisement
Advertisement
ಅವರ ಗೆಲುವಿಗೆ ನಮ್ಮ ಶ್ರಮವೂ ಸ್ವಲ್ಪ ಇದೆ. ನನ್ನ ಕುಟುಂಬದ ವೋಟು ಇರುವುದು ಮೂಡಿಗೆರೆ ಕ್ಷೇತ್ರದಲ್ಲಿಯೇ. ನಾವು ಬಿಜೆಪಿ ಬಿಟ್ಟು ಬೇರೆಯವರಿಗೆ ವೋಟು ಹಾಕಿಲ್ಲ. ಅವರು ಅಂಕಿ-ಅಂಶ ತೆಗೆಸಿ ನೋಡಲಿ. ನಾವು ಮತ್ರಿಯಾಗಿದ್ದಾಗ ಅತೀ ಹೆಚ್ಚು ಅತಿವೃಷ್ಠಿಯ ಅನುದಾನ ಅವರಿಗೆ ನೀಡಿದ್ದು. ನಾನೇ ಅಂಕಿ-ಅಂಶ ತೆಗೆಸಿ ಕೊಡಿಸುತ್ತೇನೆ. ಅತೀ ಹೆಚ್ಚು ಅನುದಾನ ಮೂಡಿಗೆರೆ ಹಾಗೂ ಶೃಂಗೇರಿಗೆ ನೀಡಲಾಗಿದ್ದು, ನಂತರ ಚಿಕ್ಕಮಗಳೂರಿಗೆ ನೀಡಲಾಗಿದೆ. ನಾನು ಹೇಳಿದ್ದು ಸುಳ್ಳಾದರೆ ಆಮೇಲೆ ಪ್ರಶ್ನೆ ಮಾಡಲಿ. ಇತ್ತೀಚೆಗೆ ಆರ್.ಡಿ.ಪಿ.ಆರ್.ನಲ್ಲೂ ಅತೀ ಹೆಚ್ಚು ಗ್ರ್ಯಾಂಟ್ ಕೊಟ್ಟಿದ್ದು ಮೂಡಿಗೆರೆಗೆ. ಅದು ಅಧಿಕೃತವಾಗಿರುವ ಅಂಶ. ಅವರು ಮನಸಲ್ಲಿ ಬೇರೆ ಏನೋ ಇಟ್ಟುಕೊಂಡು ಈಗ ಇಲ್ಲಿ ಏನೋ ಮಾತನಾಡುತ್ತಿದ್ದಾರೆ ಎಂದು ಅನ್ನಿಸುತ್ತಿದೆ ಎಂದು ಹೇಳಿದ್ದಾರೆ.
Advertisement
Advertisement
ಚಿಕ್ಕಮಗಳೂರಿಗಿಂತ ಹೆಚ್ಚು ಫ್ಲಡ್, ಆರ್.ಡಿ.ಪಿ.ಆರ್. ಹಾಗೂ ಲೋಕೋಪಯೋಗಿಯಲ್ಲಿ ಹೆಚ್ಚು ಫಂಡ್ ಹೋಗಿದ್ದರೆ ಅವರು ಎಂಎಲ್‍ಎ ಗಿರಿಗೆ ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಾರೆ. ನನಗೆ ಸಣ್ಣತನದ ರಾಜಕಾರಣ ಮಾಡಿ ಗೊತ್ತಿಲ್ಲ. ಅವರಿಗೆ ಕ್ಷೇತ್ರದ ವ್ಯಾಪ್ತಿಯೇ ಗೊತ್ತಿಲ್ಲ. ತಿಳಿದುಕೊಳ್ಳಲಿ. ನನಗಿದ್ದ ಸಣ್ಣ ಖಾತೆಯಲ್ಲಿ ನನ್ನ ಶಕ್ತಿ ಮೀರಿ ಅವರಿಗೆ ಎಲ್ಲಾ ಕಡೆ ಕೊಡುವ ಕೆಲಸ ಮಾಡಿದ್ದೇನೆ. ಅತಿವೃಷ್ಟಿ ಮೂಡಿಗೆರೆ ಕ್ಷೇತ್ರಕ್ಕೆ ಹೆಚ್ಚು ಹೋಗದಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ. ಹೋಗಿದರೆ ಅವರು ನೀಡುತ್ತಾರಾ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ:ಹೊಟ್ಟೆಗೆ ಊಟವಿಲ್ಲದೆ ಗಂಟೆಗಟ್ಲೆ ಶಾಸಕರ ಮನೆ ಬಳಿ ಕಾದ್ವಿ – ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಟ್ವಿಸ್ಟ್