ಚೆನ್ನೈ: ಲಾಕ್‍ಡೌನ್‍ನಲ್ಲಿ ಮನೆಯಲ್ಲಿ ಕೂತು ಬೇಸರವಾಗಿರುವ ಬಾಲಕನೊಬ್ಬ ತನ್ನದೇ ಅಗಿರುವ ವಿಶಿಷ್ಟ ಶೈಲಿಯಲ್ಲಿ ಕಲೆಯನ್ನು ಪ್ರದರ್ಶನ ಮಾಡುವ ಮೂಲಕವಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಇದನ್ನೂ ಓದಿ: ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಬ್ರೆಸ್ಲೆಟ್‍ಗಳು
Advertisement
ಸಂಜಯ್ ಭಿತ್ತಿ ಚಿತ್ರದಂತೆ ಈತ ಮೊಟ್ಟೆಯ ಮೇಲೆ ವರ್ಣರಂಜಿತವಾದ ಬಣ್ಣಗಳನ್ನು ಬಳಸಿಕೊಂಡು ಚಿತ್ರವನ್ನು ಬಿಡಿಸುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾನೆ. ತಮಿಳುನಾಡಿನ ಕೊಯಮತ್ತೂರಿನ ಸಂಜಯ್ ಕಲೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
Advertisement
Tamil Nadu | Coimbatore based class 11 student utilizes free time & draws cartoon characters on egg shells.
Due to the lockdown I was bored at home. I ate eggs & did not throw away shells; thought of drawing cartoon images on them. I have drawn more than 100 characters: Sanjay pic.twitter.com/XAsEc1JdH8
— ANI (@ANI) July 3, 2021
Advertisement
ಮೊಟ್ಟೆಯನ್ನು ಬಳಸಿದ ಬಳಿಕ ಅದರ ಚಿಪ್ಪನ್ನು ಎಸೆಯದೇ ಸಂಗ್ರಹಿಸಿಟ್ಟು ಅದರ ಮೇಲೆ ಕಾರ್ಟೂನ್ ಮತ್ತಿತರ ಕಲಾಕೃತಿಗಳನ್ನು ಬಿಡಿಸಿದ್ದಾನೆ. ತಮಿಳುನಾಡಿನ ಕೊಯಮತ್ತೂರಿನ ಬಾಲಕನ ಈ ಕಾಲಕೃತಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂಜಯ್ ಲಾಕ್‍ಡೌನ್ ಸಂದರ್ಭದಲ್ಲಿ ಬಿಡುವಿನ ಸಮಯವನ್ನು ಹೀಗೆ ಚಿತ್ರವನ್ನು ಬಿಡಿಸುತ್ತ ಕಾಲಕಳೆದಿದ್ದಾನೆ. ಇದನ್ನೂ ಓದಿ: ನರ್ಸ್ ಬದಲು ತಾನೇ ಲಸಿಕೆ ಕೊಟ್ಟ ಕೌನ್ಸಿಲರ್
Advertisement
ನೂರಾರು ಮೊಟ್ಟೆಗಳನ್ನು ಬಳಸಿಕೊಂಡು ಚಿತ್ರವನ್ನು ಬಿಡಿಸಿದ್ದೇನೆ. ಕೊರೊನ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತು ಬೇಸರವಾಗುತ್ತಿತ್ತು. ಅದನ್ನು ಹೋಗಲಡಿಸಲೇಂದು ಇವನ್ನೆಲ್ಲ ಮಾಡಿದೆ. ನಾನು ಮೊಟ್ಟೆಯನ್ನು ತಿನ್ನುತ್ತಿದ್ದೇನು. ಆದರೆ ಅದ ಚಿಪ್ಪನ್ನು ಎಸೆಯುತ್ತಿರಲಿಲ್ಲ. ಅವುಗಳನ್ನು ಸಂಗ್ರಹಿಸಿಟ್ಟು ಚಿತ್ರವನ್ನು ಬಿಡಿಸಿದ್ದೇನೆ. ಹೀಗೆ ನೂರಕ್ಕೂ ಅಧಿಕ ಮೊಟ್ಟೆ ಚಿಪ್ಪುಗಳ ಮೇಲೆ ಚಿತ್ರ ಬಿಡಿಸಿದ್ದೇನೆ ಎಂದು ಸಂಜಯ್ ಹೇಳಿದ್ದಾನೆ.