– 24 ಗಂಟೆಯಲ್ಲಿ 1,133 ಬಲಿ
ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ಮುಂದುವರಿದಿದ್ದು, ಒಂದೇ ದಿನ 92,605 ಹೊಸ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ಏರಿಕೆಯಾಗಿದೆ.
24 ಗಂಟೆಯಲ್ಲಿ 92,605 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 54,00,620ಕ್ಕೆ ಏರಿಕೆಯಾಗಿದೆ. ಇನ್ನೂ ಒಂದೇ ದಿನ ಕೊರೊನಾಗೆ 1,133 ಮಂದಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
India's #COVID19 case tally crosses 54-lakh mark with a spike of 92,605 new cases & 1,133 deaths in last 24 hours.
The total case tally stands at 54,00,620 including 10,10,824 active cases, 43,03,044 cured/discharged/migrated & 86,752 deaths: Ministry of Health & Family Welfare pic.twitter.com/03PoM35kdm
— ANI (@ANI) September 20, 2020
54,00,620ರ ಪೈಕಿ 10,10,824 ಸಕ್ರಿಯ ಪ್ರಕರಣಗಳಿದ್ದು, 43,03,044 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 24 ಗಂಟೆಯಲ್ಲಿ 1,133 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಕೊರೊನಾಗೆ 86,752 ಮಂದಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಚೇತರಿಕೆ ಸಂಖ್ಯೆಯಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಈ ವಿಚಾರದಲ್ಲಿ ಅಮೆರಿಕಾವನ್ನು ಮೀರಿಸಿ ನಿಂತು ಭಾರತ ನಂಬರ್ ಒನ್ ಆಗಿದೆ. 43 ಲಕ್ಷಕ್ಕೂ ಹೆಚ್ಚು ಮಂದಿ ನಮ್ಮಲ್ಲಿ ಚೇತರಿಸಿಕೊಂಡಿದ್ದರೆ, ಅಮೆರಿಕಾದಲ್ಲಿ ಇದರ ಪ್ರಮಾಣ 41.91 ಲಕ್ಷ ಇದೆ. ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ನಡುವೆ ವಿಶ್ವಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 3 ಕೋಟಿ ದಾಟಿದೆ.
6,36,61,060 samples tested up to 19th September for #COVID19. Of these, 12,06,806 samples were tested yesterday: Indian Council of Medical Research (ICMR) pic.twitter.com/lMQnsiZVRH
— ANI (@ANI) September 20, 2020
ಶನಿವಾರ 12,06,806 ಮಂದಿಯ ಮಾದರಿಯನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಇದುವರೆಗೂ ದೇಶದಲ್ಲಿ 6,36,61,060 ಜನರಿಗೆ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.