– ಮಹಿಳಾ ಪಟ್ಟಿಯಲ್ಲಿ ಮಿಥಾಲಿ ರಾಜ್, ಜುಲಾನ್ ಗೋಸ್ವಾಮಿಗೆ ಸ್ಥಾನ
– ಐಸಿಸಿಯಿಂದ ಟಾಪ್ ಆಟಗಾರರ ಪಟ್ಟಿ ಬಿಡುಗಡೆ
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೂರು ಮಾದರಿಯ ಕ್ರಿಕೆಟ್‍ನಲ್ಲಿ ದಶಕದ ಆಟಗಾರ ಪ್ರಶಸ್ತಿಗೆ ನಾಮಿನೇಟ್ ಆದವರ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ.
ಐಸಿಸಿಐ ಮಂಗಳವಾರ ಟೆಸ್ಟ್, ಏಕದಿನ ಮತ್ತು ಟಿ-20 ಸೇರಿದಂತೆ ಮೂರು ಮಾದರಿಯ ಮಹಿಳಾ ಮತ್ತು ಪುರುಷರ ನಾಮಿನೇಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮೂರು ಮಾದರಿಯ ಆಟದಲ್ಲೂ ಕೊಹ್ಲಿ ನಾಮಿನೇಟ್ ಆಗಿ, ಮೂರು ಮಾದರಿಯ ಲಿಸ್ಟ್ ನಲ್ಲಿ ಆಯ್ಕೆಯಾದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಕೊಹ್ಲಿಯವರನ್ನು ಬಿಟ್ಟರೆ ಬೇರೆ ಯಾವುದೇ ಆಟಗಾರ ಈ ಮೂರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
Advertisement
Advertisement
ಕಳೆದ ಒಂದು ದಶಕದಲ್ಲಿ ಮೂರು ಮಾದರಿಯ ಕ್ರಿಕೆಟಿನಲ್ಲಿ ಸಾಧನೆ ಮಾಡಿದ ಆಟಗಾರಿಗೆ ಈ ಪ್ರಶಸ್ತಿಯನ್ನು ಐಸಿಸಿ ನೀಡುತ್ತದೆ. ಕಳೆದ ಒಂದು ದಶಕದಿಂದ ಮೂರು ಮಾದರಿಯ ಕ್ರಿಕೆಟ್‍ನಲ್ಲಿ ರನ್ ಹೊಳೆಯನ್ನು ಹರಿಸುತ್ತಿರುವ ಕೊಹ್ಲಿಯವರು ರನ್ ಮಷಿನ್ ಎಂಬ ಹೆಸರು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಮೂರು ಮಾದರಿಯ ಕ್ರಿಕೆಟ್‍ನಲ್ಲಿ ಕಳೆದ ಒಂದು ದಶಕದಿಂದ ಕೊಹ್ಲಿ ಉತ್ತಮವಾಗಿ ಆಡುವ ಮೂಲಕ ಸ್ಥಾನ ಪಡೆದಿದ್ದಾರೆ.
Advertisement
Advertisement
ಕೊಹ್ಲಿಯವರ ಜೊತೆಯಲ್ಲಿ ಭಾರತದಿಂದ ಮಾಜಿ ನಾಯಕ ಎಂಎಸ್ ಧೋನಿ, ಉಪನಾಯಕ ರೋಹಿತ್ ಶರ್ಮಾ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಕಾಣಿಸಿಕೊಂಡಿದ್ದಾರೆ. ಪುರಷರ ಜೊತೆಯಲ್ಲಿ ಮಹಿಳೆಯರ ದಶಕದ ಆಟಗಾರ್ತಿಯರ ಪ್ರಶಸ್ತಿಗೆ ನಾಮಿನೇಟ್ ಆದ ಪಟ್ಟಿಯನ್ನು ಐಸಿಸಿ ಘೋಷಣೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದಿಂದ ಮಾಜಿ ನಾಯಕಿ ಮಿಥಾಲಿ ರಾಜ್ ಮತ್ತು ಅನುಭವಿ ಬೌಲರ್ ಜುಲಾನ್ ಗೋಸ್ವಾಮಿ ಕಾಣಿಸಿಕೊಂಡಿದ್ದಾರೆ.
ನಾಮಿನೇಟ್ ಆದವರ ಪಟ್ಟಿ
ದಶಕದ ಪುರುಷ ಆಟಗಾರ ಪ್ರಶಸ್ತಿ: ವಿರಾಟ್ ಕೊಹ್ಲಿ (ಭಾರತ), ರವಿಚಂದ್ರನ್ ಅಶ್ವಿನ್ (ಭಾರತ), ಜೋ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) ಮತ್ತು ಕುಮಾರ ಸಂಗಕ್ಕಾರ (ಶ್ರೀಲಂಕಾ)
ಪುರುಷರ ದಶಕದ ಏಕದಿನ ಆಟಗಾರ ಪ್ರಶಸ್ತಿ: ವಿರಾಟ್ ಕೊಹ್ಲಿ (ಭಾರತ), ಲಸಿತ್ ಮಾಲಿಂಗ (ಶ್ರೀಲಂಕಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ರೋಹಿತ್ ಶರ್ಮಾ (ಭಾರತ), ಎಂಎಸ್ ಧೋನಿ (ಭಾರತ) ಮತ್ತು ಕುಮಾರ ಸಂಗಕ್ಕಾರ (ಶ್ರೀಲಂಕಾ)
ಪುರುಷರ ದಶಕದ ಟೆಸ್ಟ್ ಆಟಗಾರ ಪ್ರಶಸ್ತಿ: ವಿರಾಟ್ ಕೊಹ್ಲಿ (ಭಾರತ), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ), ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್), ರಂಗನಾ ಹೆರಾತ್ (ಶ್ರೀಲಂಕಾ) ಮತ್ತು ಯಾಸಿರ್ ಷಾ (ಪಾಕಿಸ್ತಾನ)
ಪುರುಷರ ದಶಕದ ಟಿ-20 ಆಟಗಾರ ಪ್ರಶಸ್ತಿ: ರಶೀದ್ ಖಾನ್ (ಅಫ್ಘಾನಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ), ಆರೋನ್ ಫಿಂಚ್ (ಆಸ್ಟ್ರೇಲಿಯಾ), ಲಸಿತ್ ಮಾಲಿಂಗ (ಶ್ರೀಲಂಕಾ), ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) ಮತ್ತು ರೋಹಿತ್ ಶರ್ಮಾ (ಭಾರತ)
ಮಹಿಳೆಯರ ದಶಕದ ಏಕದಿನ ಆಟಗಾರ್ತಿ ಪ್ರಶಸ್ತಿ: ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ), ಎಲಿಸ್ ಪೆರ್ರಿ (ಆಸ್ಟ್ರೇಲಿಯಾ), ಮಿಥಾಲಿ ರಾಜ್ (ಭಾರತ), ಸುಜಿ ಬೇಟ್ಸ್ (ನ್ಯೂಜಿಲೆಂಡ್), ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್) ಮತ್ತು ಜುಲಾನ್ ಗೋಸ್ವಾಮಿ (ಭಾರತ)
ಮಹಿಳೆಯರ ದಶಕದ ಆಟಗಾರ್ತಿ ಪ್ರಶಸ್ತಿ: ಎಲಿಸ್ ಪೆರ್ರಿ (ಆಸ್ಟ್ರೇಲಿಯಾ), ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ), ಸುಜಿ ಬೇಟ್ಸ್ (ನ್ಯೂಜಿಲೆಂಡ್), ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್), ಮಿಥಾಲಿ ರಾಜ್ (ಭಾರತ), ಸಾರಾ ಟೇಲರ್ (ಇಂಗ್ಲೆಂಡ್)