– ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಇಬ್ಬರು ಬುಕ್ಕಿಗಳನ್ನು ಬಂಧಿಸಿದೆ.
ಹೊಯ್ಸಳ ಗೌಡ (48), ನರಸಿಂಹ ಮೂರ್ತಿ (38) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 13.5 ಲಕ್ಷ ನಗದು 2 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಲ್ಲೇಶ್ವರಂ ನ.11ನೇ ಕ್ರಾಸ್ ರಸ್ತೆ ಬಳಿ ಆರೋಪಿಗಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳು, ವೆಬ್‍ಸೈಟ್ ಮೂಲಕ ರೇಶ್ಯೂ ನಿರ್ಧಾರ ಮಾಡುತ್ತಿದ್ದರು. ಮೊಬೈಲ್ ಮೂಲಕ ಹಣವನ್ನು ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.
Karnataka: City Crime Branch, Bengaluru arrested two people for their alleged involvement in illegal betting during Kolkata Knightriders & Rajasthan Royals IPL-2020 match. Rs 13.5 lakhs cash & & two cell phones were seized from the accused. pic.twitter.com/dHfkUf5aJZ
— ANI (@ANI) October 27, 2020
ಕಳೆದ ವಾರದ ಇದೇ ರೀತಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಒಬ್ಬ ಬುಕ್ಕಿಯನ್ನು ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದರು. ಆರೋಪಿಯಿಂದ 30.5 ಲಕ್ಷ ರೂ. ನಗದು ಹಾಗೂ ಎರಡು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿತ್ತು.