– ಡೆಲ್ಲಿ ವೇಗಿಗಳ ವೇಗಕ್ಕೆ ರಾಜಸ್ಥಾನ್ ರಾಯಲ್ಸ್ ಉಡೀಸ್
ದುಬೈ: ಇಂದು ಐಪಿಎಲ್-2020ಯಲ್ಲಿ ಇಂದು ನಡೆದ 30ನೇ ಪಂದ್ಯದಲ್ಲಿ ಭರ್ಜರಿಯಾಗಿ ಬೌಲಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ರನ್‍ಗಳಿಂದ ಗೆದ್ದು ಅಂಕ ಪಟ್ಟಿಯಲ್ಲಿ 12 ಅಂಕಗಳಿಸಿ ಮೊದಲ ಸ್ಥಾನಕ್ಕೆ ಏರಿದೆ.
ಇಂದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಮತ್ತು ಶಿಖರ್ ಧವನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 162 ರನ್ ಸೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ವೇಗಿಗಳಾದ ಅನ್ರಿಚ್ ನಾಟ್ರ್ಜೆ ಮತ್ತು ಕಗಿಸೊ ರಬಡಾ ಅವರ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ 148 ರನ್ ಗಳಿಸಿತು.
Advertisement
A brilliant win here for the @DelhiCapitals as they beat #RR by 13 runs in Match 30 of #Dream11IPL.#DCvRR pic.twitter.com/jgF35MrnZR
— IndianPremierLeague (@IPL) October 14, 2020
Advertisement
ಐಪಿಎಲ್ ಇತಿಹಾಸದಲ್ಲೇ ನಾಟ್ರ್ಜೆ ಮಿಂಚು
ಇಂದು ಡೆಲ್ಲಿ ಕ್ಯಾಪಿಟಲ್ ತಂಡದ ವೇಗಿ ಅನ್ರಿಚ್ ನಾಟ್ರ್ಜೆ ಅವರು ಐಪಿಎಲ್ ಇತಿಹಾದಲ್ಲೇ ವೇಗದ ಬೌಲ್ ಎಸೆದು ದಾಖಲೆ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಗಂಟೆಗೆ 156.22 ಕಿಮೀ ವೇಗದಲ್ಲಿ ಬೌಲ್ ಮಾಡಿದ್ದಾರೆ. ಜೊತೆಗೆ ಗಂಟೆಗೆ 155.21 ಕಿಮೀ ವೇಗದಲ್ಲೇ ಐಪಿಎಲ್ ಇತಿಹಾಸದಲ್ಲೇ ಎರಡನೇ ವೇಗದ ಬಾಲ್ ಎಸೆದಿದ್ದಾರೆ. ಮೂರನೇ ವೇಗದ ಎಸೆತವು ಕೂಡ ಅನ್ರಿಚ್ ನಾಟ್ರ್ಜೆ ಅವರ ಹೆಸರಿನಲ್ಲಿದ್ದು, ಗಂಟೆಗೆ 154.74 ಕಿ.ಮೀ ವೇಗದಲ್ಲಿ ಮೂರನೇ ಬಾಲ್ ಬೌಲ್ ಮಾಡಿದ್ದಾರೆ. ಗಂಟೆಗೆ 154.40 ಕಿ.ಮೀ ವೇಗದಲ್ಲಿ ಬೌಲ್ ಮಾಡಿರುವ ವೇಗ ಡೇಲ್ ಸ್ಟೇನ್ ಅವರು ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.
Advertisement
Cometh the hour, cometh Nortje! Brilliant ball! Uthappa is clean bowled.
Live – https://t.co/5ag4o54mV7 #Dream11IPL pic.twitter.com/PZ1u0YqsTK
— IndianPremierLeague (@IPL) October 14, 2020
Advertisement
ಡೆಲ್ಲಿ ವೇಗಿಗಳ ಅಬ್ಬರ
ಇಂದು ಆರಂಭದಿಂದಲೇ ಉತ್ತಮವಾಗಿ ಬೌಲ್ ಮಾಡಿದ ಡೆಲ್ಲಿ ಬೌಲರ್ಸ್, ರಾಜಸ್ಥಾನ್ ಬ್ಯಾಟ್ಸ್ ಮ್ಯಾನ್‍ಗಳನ್ನು ಕಾಡಿದರು. ನಾಲ್ಕು ಓವರ್ ಬೌಲ್ ಮಾಡಿದ ಅನ್ರಿಚ್ ನಾಟ್ರ್ಜೆ ಅವರು ಎರಡು ವಿಕೆಟ್ ಕಿತ್ತು 33 ರನ್ ಕೊಟ್ಟರು. ಇವರಿಗೆ ಉತ್ತಮ ಸಾಥ್ ಕೊಟ್ಟ ಯುವ ವೇಗ ತುಷಾರ್ ದೇಶಪಾಂಡೆ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 37 ರನ್ ನೀಡಿದರು. ಕಗಿಸೊ ರಬಡಾ, ಆಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡರು.
Axar roars. #DC fighting back!
Samson departs for 25.
Live – https://t.co/5ag4o54mV7 #Dream11IPL pic.twitter.com/QTwFJUhSdo
— IndianPremierLeague (@IPL) October 14, 2020
ಡೆಲ್ಲಿ ಕೊಟ್ಟ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ರಾಜಸ್ಥಾನ್ ರಾಯಲ್ಸ್ ತಂಡ ಆರಂಭಿಕರಾಗಿ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಅವರು ಕಣಕ್ಕಿಳಿದರು. ಆರಂಭದಲ್ಲೇ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ತಂಡ 37 ರನ್ ಗಳಿಸಿದ್ದಾಗ ಮೂರನೇ ಓವರಿನ ಕೊನೆ ಬಾಲಿನಲ್ಲಿ ಅನ್ರಿಚ್ ನಾಟ್ರ್ಜೆ ಅವರಿಗೆ 9 ಬಾಲಿಗೆ 22 ರನ್ ಗಳಿಸಿ ಜೋಸ್ ಬಟ್ಲರ್ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ನಾಯಕ ಸ್ಟೀವ್ ಸ್ಮಿತ್ ಅವರು ರವಿಚಂದ್ರನ್ ಅಶ್ವಿನ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ಹೊರನಡೆದರು.
WATCH – Tewatia's clever ramp shot.
Pitched short by Rabada and helped away over the keeper's head for a boundary. Smart stroke by Rahul Tewatia.https://t.co/QF5ccgt8YS #Dream11IPL
— IndianPremierLeague (@IPL) October 14, 2020
ನಂತರ ಜೊತೆಯಾದ ಸ್ಟೋಕ್ಸ್ ಮತ್ತು ಸ್ಯಾಮ್ಸನ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ನಂತರ 35 ಬಾಲಿಗೆ 41 ರನ್‍ಗಳಿಸಿ ಆಡುತ್ತಿದ್ದ ಬೆನ್ ಸ್ಟೋಕ್ಸ್ ಅವರು ತುಷಾರ್ ದೇಶಪಾಂಡೆ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ 18 ಬಾಲಿಗೆ 25 ರನ್‍ಗಳಿಸಿ ತಾಳ್ಮೆಯಿಂದ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 11ನೇ ಓವರ್ 4ನೇ ಬಾಲಿನಲ್ಲಿ ಆಕ್ಸರ್ ಪಟೇಲ್ ಸ್ಪಿನ್ ಮೋಡಿಗೆ ಕ್ಲೀನ್ ಬೌಲ್ಡ್ ಆದರು.
102-metre SIX: #MSD or #Samson?
Two sixes, both 102-metres. One from MS Dhoni and the other from Sanju Samson. Who's was better? Take your pick.https://t.co/EJYv4lQsj2 #Dream11IPL
— IndianPremierLeague (@IPL) October 14, 2020
ಇಲ್ಲದ ರನ್ ಕದಿಯಲು ಹೋದ ರಿಯಾನ್ ಪರಾಗ್ ಅವರು ರನೌಟ್ ಆದರು. ನಂತರ 17ನೇ ಓವರಿನ ಮೂರನೇ ಬಾಲಿನಲ್ಲಿ 27 ಬಾಲಿಗೆ 32 ರನ್ ಸಿಡಿಸಿ ಆಡುತ್ತಿದ್ದ ರಾಬಿನ್ ಉತ್ತಪ್ಪ ಅವರು ನಾಟ್ರ್ಜೆ ಅವರ ಯಾರ್ಕರ್ ಗೆ ಬೌಲ್ಡ್ ಆದರು. ಸ್ಫೋಟಕ ಆಟಗಾರ ಜೋಫ್ರಾ ಆರ್ಚರ್ ಅವರು ಇಂದು ರಾಜಸ್ಥಾನ್ ರಾಯಲ್ಸ್ ಪರವಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ ನಾಲ್ಕು ಬಾಲಿಗೆ ಕೇವಲ ಒಂದು ರನ್ ಸಿಡಿಸಿ ಔಟ್ ಆದರು.
What a wicket to get on debut! Deshpande gets the dangerous Stokes and #DelhiCapitals needed that.
Live – https://t.co/5ag4o54mV7 #Dream11IPL pic.twitter.com/uwF1cQaihd
— IndianPremierLeague (@IPL) October 14, 2020
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನಿಂಗ್ಸ್ ನ ಮೊದಲ ಬಾಲಿನಲ್ಲೇ ಇನ್ ಫಾರ್ಮ್ ಆಟಗಾರ ಪೃಥ್ವಿ ಶಾ ಅವರ ಔಟ್ ಆದರು. ಆದರೆ ನಂತರ ಜೊತೆಯಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ಅನುಭವಿ ಆಟಗಾರ ಶಿಖರ್ ಧವನ್ ಅವರು, ಇಬ್ಬರು ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. 33 ಬಾಲಿನಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿ ಸಮೇತ ಧವನ್ 27 ರನ್ ಸಿಡಿಸಿದರೆ, ಶ್ರೇಯಸ್ ಐಯ್ಯರ್ ಅವರು, 43 ಬಾಲಿಗೆ ಎರಡು ಸಿಕ್ಸರ್ ಮತ್ತು ಮೂರು ಫೋರ್ ಸಮೇತ 53 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ್ ತಂಡಕ್ಕೆ 163 ರನ್‍ಗಳ ಟಾರ್ಗೆಟ್ ನೀಡಿದ್ದರು.