ಬೆಂಗಳೂರು: ಮಿಲಿಟರಿ ನೀಡಿದ ಮಾಹಿತಿ ಮೇರೆಗೆ ಬಹುದೊಡ್ಡ ಕಾರ್ಯಾಚರಣೆ ನಡೆಸಿರುವ ಸಿಸಿಬಿ ದೇಶದ ಭದ್ರತೆಗೆ ಸವಾಲೊಡ್ಡಿದ್ದ ಇಬ್ಬರು ನಟೋರಿಯಸ್ ವ್ಯಕ್ತಿಗಳನ್ನು ಬಂಧಿಸಿದೆ.
ಇಬ್ರಾಹಿಮ್ ಮತ್ತು ಗೌತಮ್ ಬಂಧಿತ ಕೇರಳ ಮೂಲದ ಆರೋಪಿಗಳು. 30ಕ್ಕೂ ಹೆಚ್ಚು ಸಿಮ್ ಬಾಕ್ಸ್ ಗಳನ್ನು ಇಟ್ಟುಕೊಂಡು ಐಎಸ್‍ಡಿ ಳನ್ನ ಕನ್ವರ್ಟ್ ಮಾಡ್ತಿದ್ದರು. 10 ರೂಪಾಯಿ ಕಾಲ್ 10 ಪೈಸೆಗೆ ಕನ್ವರ್ಟ್ ಮಾಡಿರುವ ಬಗ್ಗೆ ಮಾಹಿತಿ ದೊರಕಿದ್ದು, ದೇಶದ ಭದ್ರತೆಗೆ ಬಹುದೊಡ್ಡ ಗಂಡಾಂತರ ತಂದಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಸಲಾಗ್ತಿದೆ.
Advertisement
Advertisement
ಕಾಲ್ ಕನ್ವರ್ಟ್ ಸಂಬಂಧ ಭಯೋತ್ಪಾದಕ ಕೃತ್ಯಗಳಿಗೆ ನೆರವಾಗುವ ಸಂಬಂಧ, ದೇಶದ ಹೊರಗಿನ ಉಗ್ರಗಾಮಿ ಗುಂಪುಗಳ ಜೊತೆ ಮಾತುಕತೆಗೆ ಸಹಕಾರಿ ಬಗ್ಗೆ ತನಿಖೆ ನಡೆಯುತ್ತಿದೆ. ಕಾಲ್ ಕನ್ವರ್ಟ್ ಬಗ್ಗೆ ಸಂಶಯ ಹೊಂದಿದ್ದ ಮಿಲಿಟರಿಯಿಂದ ಗುಪ್ತಚರ ಇಲಾಖೆಗೆ ಖಚಿತ ಮಾಹಿತಿ ಬಂದಿತ್ತು. ಇದನ್ನೂ ಓದಿ: ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ
Advertisement
ಈ ಸಂಬಂಧ ಈಗ ಇಬ್ಬರನ್ನು ಬಂಧಿಸಿದ್ದು ಮತ್ತೆ ಕೆಲವರ ಬಗ್ಗೆ ಹುಡುಕಾಟ ನಡೆಸುತ್ತಿದೆ. ಬಂಧಿತರಿಂದ 30 ಸಿಮ್ ಬಾಕ್ಸ್ ಸಾಧನ, 930 ಸಿಮ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
Advertisement
ಕಾಲ್ ಹೇಗೆ?
ದುಬೈನಿಂದ ಕಾಲ್ ಗಳನ್ನು ಕನ್ವರ್ಟ್ ಮಾಡಿ ಕನೆಕ್ಟ್ ಮಾಡಲಾಗ್ತಿತ್ತು. ದುಬೈನಲ್ಲಿ ವಾಟ್ಸಪ್ ಕಾಲ್ ನಿಷೇಧಿಸಲಾಗಿದೆ. ಹೀಗಾಗಿ ಅಕ್ರಮವಾಗಿ ವಿಪಿಎನ್( ವರ್ಚುವಲ್ ಪ್ರೈವೇಟ್ ನೆಟ್ ವರ್ಕ್) ತಂತ್ರಜ್ಞಾನ ಬಳಸಿ ಕಾಲ್ ಕನ್ವರ್ಟ್ ಮಾಡಿ ಬೇರೆ ಬೇರೆ ದೇಶದಲ್ಲಿರುವವರಿಗೆ ಕರೆ ಮಾಡುತ್ತಿದ್ದರು.
ವಿಪಿಎನ್ ಸಾಫ್ಟೇವರ್ ಅನ್ನು ಮೊಬೈಲಿನಲ್ಲಿ ಇನ್‍ಸ್ಟಾಲ್ ಮಾಡಿಕೊಂಡು ಕಾಲ್ ಮಾಡಿದಾಗ ಕಾಲ್ ಮಾಡಿದವರ ಲೋಕೆಷನ್ ಸೇರಿದಂತೆ ಯಾವುದೇ ಮಾಹಿತಿ ಸಿಗುವುದಿಲ್ಲ. ಕೆಲವು ದೇಶದಲ್ಲಿ ವಿಪಿಎನ್ ಬಳಸಲು ಅವಕಾಶವಿದೆ.ನಾವು ವಿಪಿಎನ್ ಬಳಸಿ ಕಾಲ್ ಮಾಡಿದಾಗ ಯಾವ ದೇಶದಲ್ಲಿ ಕಾನೂನು ಬದ್ಧವಿದೆ ಅಲ್ಲಿಗೆ ಕಾಲ್ ಕನೆಕ್ಟ್ ಆಗುತ್ತೆ.
ಉದಾಹರಣೆಗೆ ಸಿಂಗಾಪುರದಲ್ಲಿ ಕಾನೂನು ಬದ್ಧ ಇದೆ. ಹೀಗಾಗಿ ನಾವು ಕರೆ ಮಾಡಿದಾಗ ಸಿಂಗಾಪುರ ಸರ್ವರ್ ಗೆ ಕನೆಕ್ಟ್ ಆಗಿ ನಂತರ ನಾವು ಯಾರಿಗೆ ಕಾಲ್ ಮಾಡುತ್ತೇವೋ ಅಲ್ಲಿಗೆ ಕನೆಕ್ಟ್ ಆಗುತ್ತದೆ. ದುದು ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ವಿಡಿಯೋ ಕಾಲ್ ಬ್ಯಾನ್ ಇದೆ. ಚೀನಾ, ಇರಾಕ್, ಉತ್ತರ ಕೊರಿಯಾ, ಓಮನ್, ರಷ್ಯಾ, ಯುಎಇ ಈ ದೇಶಗಳಲ್ಲಿ ವಿಪಿಎನ್ ಬ್ಯಾನ್ ಆಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ವಿಡಿಯೋ ಕಾಲ್ ಮಾಡುವಂತಿಲ್ಲ.