ಬಿಗ್‍ಬಾಸ್ ಮನೆಯಲ್ಲಿ ಕಳೆದ ವಾರ ನೀಡಿದ್ದ ಚಂಡೇಶ್ವರ ಟಾಸ್ಕ್ ಮನೆ ಮಂದಿಗೆ ಊಟದ ಪ್ರಾಮುಖ್ಯತೆ ಕಲಿಸಿದೆ ಎಂದು ರಾಜೀವ್ ಹೇಳಿದ್ದಾರೆ. ಭಾನುವಾರ ನಡೆದ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಚಂಡೇಶ್ವರ ಟಾಸ್ಕ್ ಬಗ್ಗೆ ಸುದೀಪ್ ರಾಜೀವ್ ಅಭಿಪ್ರಾಯ ಕೇಳುತ್ತಾರೆ.
Advertisement
ಈ ವೇಳೆ ರಾಜೀವ್ ಅಯ್ಯಪ್ಪಾ.. ಚೆಂಡೇಶ್ವರ ಟಾಸ್ಕ್ ಆರಂಭವಾಗುವ ಮುನ್ನ ಮ್ಯೂಸಿಕ್ ಒಂದು ಬರುತ್ತದೆ. ಅದನ್ನು ಕೇಳಿ ಎಲ್ಲೆ ಇದ್ದರೂ ಮನೆಯ ಸದಸ್ಯರೆಲ್ಲ ಓಡಿ ಬರುತ್ತಾರೆ. ಇಂದೊಂದು ಟಾಸ್ಕ್ ಮನೆಯ ಎಲ್ಲ ಸದಸ್ಯರನ್ನು ಪ್ರತಿ ನಿಮಿಷ ಆಕ್ಟೀವ್ ಆಗಿರಿಸುತ್ತಿತ್ತು. ಈ ಟಾಸ್ಕ್ ಮುಗಿದ ಬಳಿಕ ಎಲ್ಲರೂ ಒಂದು ದೊಡ್ಡ ಸಾಷ್ಟಾಂಗ ನಮಸ್ಕಾರವನ್ನೇ ಮಾಡಿದೆವು ಎಂದು ಹೇಳುತ್ತಾರೆ.
Advertisement
Advertisement
ನಂತರ ಚೆಂಡೇಶ್ವರ ಟಾಸ್ಕ್ ಎಷ್ಟು ಹಾಸ್ಯಮಯವಾಗಿದೆ ಎನ್ನುವುದಕ್ಕಿಂತ, ಈ ಟಾಸ್ಕ್ ಊಟದ ಬಗೆಗಿನ ಪ್ರಾಮುಖ್ಯತೆ ತಿಳಿಸಿದೆ. ಹೊರಗಡೆ ಯಾರಾದರೂ ಏನಗ ತಿಂತೀಯಾ ಅಂತ ಕೇಳಲು ಇರುತ್ತಿದ್ದರು. ಮನೆಯಲ್ಲಿ ಯಾರೋ ಒಬ್ಬರು ದುಡಿಯುತ್ತಿದ್ದರು, ಎಲ್ಲರೂ ತಿನ್ನುತ್ತಿದ್ದೆವು. ಆದ್ರೆ ಇಲ್ಲಿ ನೀನು ಏನ್ ದುಡಿತೀಯಾ, ನಿನ್ನ ಜೊತೆ ಇರುವವರು ಏನು ದುಡಿಯುತ್ತಾರೆ, ಎಷ್ಟು ದುಡಿಯುತ್ತಾರೆ ಎಂಬುದು ಬಹಳ ಮುಖ್ಯವಾಗಿದೆ. ಜೊತೆಗೆ ಸಿಕ್ಕಿದ್ದನ್ನು ಎಲ್ಲರೂ ಹಂಚಿಕೊಂಡು ತಿನ್ನಬೇಕು ಎಂಬ ಪಾಠ ಕಲಿಸುತ್ತದೆ.
Advertisement
ನನಗೆ ಊಟದ ಬಗ್ಗೆ ಬಹಳ ವ್ಯಾಲ್ಯೂ ತಿಳಿಸಿದೆ. ಹೀಗಾಗಿ ನಾನು ಮನೆಯಿಂದ ಹೊರಗೆ ಹೋದ ನಂತರ ಏನೇ ಕೊಟ್ಟರು ಬಾಯಿ ಮುಚ್ಚಿಕೊಂಡು ತಿನ್ನಬೇಕು ಎಂಬ ವಿಷಯ ಮನಸ್ಸಿಗೆ ಬಂದಿದೆ ಎಂದು ಹೇಳಿದರು.
ಒಟ್ಟಾರೆ ಹೊರಗಡೆ ತಾವು ಇಷ್ಟಪಡುವ ಆಹಾರವನ್ನು ಮಾತ್ರ ಸೇವಿಸುತ್ತಿದ್ದ ದೊಡ್ಮನೆ ಸದಸ್ಯರು, ಬಿಗ್‍ಬಾಸ್ ಮನೆಯಲ್ಲಿ ಎಲ್ಲ ರೀತಿಯ ಆಹಾರ ಪದಾರ್ಥ ಮುಖ್ಯ ಎಂಬ ವಿಚಾರವನ್ನು ಕಂಡು ಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.