ಬೆಂಗಳೂರು: ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಕ್ಕೆ ಅವರ ಅಣ್ಣ ಸುಧೀಂದ್ರ ಅವರು ಉಪೇಂದ್ರ ಅವರ ಜೊತೆಗೆ ಕೈ ಜೋಡಿಸಿದ್ದಾರೆ.
ಉಪೇಂದ್ರ ಅವರ ಅಣ್ಣ ಸುಧೀಂದ್ರ ಹಾಗೂ ಅತ್ತಿಗೆ ವೀಣಾ ಅವರು ಇಂದು 26ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಆಟೋ ಚಾಲಕರಿಗೆ ದಿನಸಿ ಕಿಟ್ಗಳನ್ನು ನೀಡುವ ಸಲುವಾಗಿ ಈ ದಿನ ಮೂರು ಲಕ್ಷ ರೂಪಾಯಿಗಳನ್ನು ಉಪೇಂದ್ರ ಅವರ ಕೈಗೆ ನೀಡಿದ್ದಾರೆ. ವಿವಾಹ ವಾರ್ಷೀಕೋತ್ಸವ ಅಂಗವಾಗಿ ಆರ್ಥಿಕ ನೆರವನ್ನು ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಣ್ಣ ಸುಧೀಂದ್ರ ಮತ್ತ ಅತ್ತಿಗೆ ವೀಣಾ ಅವರ 26 ನೇ ಮದುವೆ ವಾರ್ಷಿಕೋತ್ಸವ ಸಲುವಾಗಿ ಮೂರು ಲಕ್ಷ ರೂಗಳನ್ನು ಆಟೋ ಚಾಲಕರಿಗೆ ಕಿಟ್ ವಿತರಿಸಲು ನೀಡಿದ್ದಾರೆ. ಧನ್ಯವಾದಗಳು ???? pic.twitter.com/IheVJ7Cgar
— Upendra (@nimmaupendra) May 24, 2021
ಈ ಬಗ್ಗೆ ಉಪೇಂದ್ರ ಅವರು ಬಹಳ ಖುಷಿ ಹಾಗೂ ಹೆಮ್ಮೆಯಿಂದಲೇ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದು, ಅಣ್ಣ ಸುಧೀಂದ್ರ ಮತ್ತು ಅತ್ತಿಗೆ ವೀಣಾ ಅವರ 26 ನೇ ಮದುವೆ ವಾರ್ಷಿಕೋತ್ಸವ ಸಲುವಾಗಿ ಮೂರು ಲಕ್ಷ ರೂಗಳನ್ನು ಆಟೋ ಚಾಲಕರಿಗೆ ಕಿಟ್ ವಿತರಿಸಲು ನೀಡಿದ್ದಾರೆ. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಉಪೇಂದ್ರ ಅವರು, ಹಿರಿಯ ಕಲಾವಿದರು, ಬಡವರು , ಆಟೋಚಾಲಕರು ಹೀಗೆ ಹಲವು ಮಂದಿಗೆ ದಿನಸಿ ಕಿಟ್ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉಪೆಂದ್ರ ಅವರ ಸಾಮಾಜಿಕ ಕಾರ್ಯಕ್ಕೆ ಹಲವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.