ಇಂದೂ KSRTC, BMTC ಬಸ್ ಸಿಗಲ್ಲ – ನಾಳೆಯಿಂದ 4 ದಿನ ಸಾಲು ಸಾಲು ರಜೆ, ನೈಟ್‍ಕರ್ಫ್ಯೂ

Public TV
2 Min Read
BUS PAND

– ಊರಿಗೆ ಹೋಗುವವರಿಗೆ ಕಾದಿದೆ ಶಾಕ್

ಬೆಂಗಳೂರು: ನಾಳೆಯಿಂದ ರಾಜ್ಯ 8 ನಗರಗಳಲ್ಲಿ ನೈಟ್‍ಕರ್ಫ್ಯೂ ಹೇರಲಾಗಿದೆ. ಇತ್ತ ಶನಿವಾರದಿಂದ ಸತತ 4 ದಿನ ರಜೆ ಇರುತ್ತದೆ. ಹೀಗಾಗಿ ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಂಕಷ್ಟ ಎದುರಾಗಿದೆ.

ಇಂದು ಕೂಡ ಸಾರಿಗೆ ನೌಕರರ ಮುಷ್ಕರ ಮುಂದುವರಿದ್ದು, ಬಸ್‍ಗಳ ಓಡಾಟ ಇರಲ್ಲ. ಸಾರಿಗೆ ಮುಷ್ಕರ ಹೊತ್ತಲ್ಲೇ ಸರ್ಕಾರ ನೈಟ್‍ಕರ್ಫ್ಯೂ ಹೇರಿದೆ. ಈ ಮೂಲಕ ಜನಸಾಮಾನ್ಯರಿಗೆ ಏಕಕಾಲಕ್ಕೆ 2 ಶಾಕ್ ಕಾದಿದೆ.

BUS 1 1

ನೈಟ್‍ಕರ್ಫ್ಯೂ, ವಾರಾಂತ್ಯದ ಲಾಕ್‍ಡೌನ್ ಇಲ್ಲ ಎನ್ನುತ್ತಲೇ ವಾದಿಸುತ್ತ ಬಂದಿದ್ದ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಜನಸಾಮಾನ್ಯರಿಗೆ ಮತ್ತೆ ಆಘಾತ ನೀಡಿದೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ 11 ರಾಜ್ಯಗಳ ಸಿಎಂಗಳ ಸಭೆಯ ತರುವಾಯ ರಾಜ್ಯದಲ್ಲಿ ಮತ್ತೆ ನೈಟ್‍ಕರ್ಫ್ಯೂ ಜಾರಿಗೊಳಿಸಿ ಸಿಎಂ ಬಿಎಸ್‍ವೈ ಘೋಷಣೆ ಮಾಡಿದ್ದಾರೆ. ಏಪ್ರಿಲ್ 10ರಿಂದ ಅಂದರೆ ಶನಿವಾರದಿಂದ ಏಪ್ರಿಲ್ 20ರವರೆಗೆ ರಾಜ್ಯದ 8 ನಗರಗಳ ವ್ಯಾಪ್ತಿಯಲ್ಲಷ್ಟೇ ಸೀಮಿತಗೊಳಿಸಿ ನೈಟ್‍ಕರ್ಫ್ಯೂ ಜಾರಿಗೊಳಿಸಲಾಗಿದೆ.

BUS 2 1

ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಬೆಂಗಳೂರು ನಗರ, ಮಂಗಳೂರು, ಉಡುಪಿ, ಮಣಿಪಾಲ್, ತುಮಕೂರು, ಬೀದರ್, ಕಲಬುರಗಿ, ಮೈಸೂರು ನಗರದಲ್ಲಿ ನೈಟ್‍ಕಫ್ರ್ಯೂ ಜಾರಿಗೊಳಿಸಲಾಗಿದೆ. ರಾಜ್ಯದ 8 ನಗರಗಳಿಗೆ ಸೀಮಿತಗೊಳಿಸಿ ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೆ ನೈಟ್‍ಕರ್ಫ್ಯೂ ಹೇರಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕಫ್ರ್ಯೂ ಇರಲಿದೆ. ಬೆಂಗಳೂರು ನಗರ, ಮಂಗಳೂರು, ಉಡುಪಿ, ಮಣಿಪಾಲ್, ತುಮಕೂರು, ಬೀದರ್, ಕಲಬುರಗಿ, ಮೈಸೂರು ನಗರದಲ್ಲಿ ನೈಟ್‍ಕರ್ಫ್ಯೂ ಹೇರಲಾಗಿದೆ.

BUS 3 1

ರಾಜ್ಯದಲ್ಲಿ ಮತ್ತೆ ನೈಟ್‍ಕರ್ಫ್ಯೂ ಆಘಾತ..!
ವಾಣಿಜ್ಯ ಚಟುವಟಿಕೆಗಳ ಮೇಲೆ ಮತ್ತೆ ನೈಟ್‍ಕರ್ಫ್ಯೂ ಬರೆ ಬೀಳಲಿದ್ದು, ರಾತ್ರಿ 10 ಗಂಟೆಯಿಂದ ಎಲ್ಲ ವಾಣಿಜ್ಯ ಚಟುವಟಿಕೆಗಳು ಸ್ಥಗಿತವಾಗಲಿದೆ. 7 ಜಿಲ್ಲೆಗಳ 8 ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳಾದ ಹೋಟೆಲ್, ರೆಸ್ಟೋರೆಂಟ್, ಪಬ್‍ಗಳೂ ಬಂದ್ ಆಗಲಿದೆ. ಅಗತ್ಯ ಚಟುವಟಿಕೆಗಳಿಗಷ್ಟೇ ನೈಟ್‍ಕರ್ಫ್ಯೂ ವೇಳೆ ವಿನಾಯ್ತಿ ನೀಡಲಾಗುತ್ತದೆ. ನೈಟ್‍ಕರ್ಫ್ಯೂ ವೇಳೆ ಸಿನಿಮಾ ಪ್ರದರ್ಶನ ನಿಷೇಧ ಹಾಗೂ ಅಂತರ್ಜಿಲ್ಲೆಗಳ ಓಡಾಟಕ್ಕೆ ನಿರ್ಬಂಧ ಇಲ್ಲ. ಅಂತರ್‍ಜಿಲ್ಲೆ ಓಡಾಟ, ಬಸ್, ಸ್ವಂತ ವಾಹನಗಳಲ್ಲಿ ಓಡಾಟಕ್ಕೆ ಅನುಮತಿ ನೀಡಲಾಗುತ್ತಿದೆ.

BUS 4 1

Share This Article
Leave a Comment

Leave a Reply

Your email address will not be published. Required fields are marked *