ಪ್ರತಿನಿತ್ಯ ಏನು ತಿಂಡಿ ಮಾಡುವುದು ಎಂದು ಪ್ರತಿಯೊಬ್ಬರು ಯೋಚಿಸುತ್ತಾರೆ. ಒಂದೇತರದ ತಿಂಡಿ ತಿಂದು ನಿಮಗೆ ಬೇಸರವಾಗಿರುತ್ತದೆ. ಹೀಗಾಗಿ ಇಂದು ನೀವು ಮನೆಯಲ್ಲಿ ಕೊಂಚ ಡಿಫರೆಂಟ್ ಆಗಿ ಬೀಟ್‍ರೂಟ್ ದೋಸೆ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
*ಬೀಟ್‍ರೂಟ್ – 1
*ಆಲೂಗಡ್ಡೆ – 2
*ಕ್ಯಾರೆಟ್ -1
*ಈರುಳ್ಳಿ – ಒಂದು
*ಶುಂಠಿ ಪೇಸ್ಟ್ – ಅರ್ಧ ಟೀ ಸ್ಪೂನ್
*ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀ ಸ್ಪೂನ್
*ಹಸಿಮೆಣಸು – 2
*ಕೆಂಪು ಮೆಣಸಿನ ಪುಡಿ – ಅರ್ಧ ಟೀ ಸ್ಪೂನ್
*ಅರಿಶಿನ ಪುಡಿ: ಕಾಲು ಚಿಕ್ಕ ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಉದ್ದಿನ ಬೇಳೆ- ಅರ್ಧ ಟೀ ಸ್ಪೂನ್
* ಸಾಸಿವೆ-ಕಾಲು ಚಮಚ
* ಕರಿಬೇವಿನ ಎಲೆಗಳು
* ಅಡುಗೆ ಎಣ್ಣೆ – 1 ಕಪ್
Advertisement
Advertisement
ಮಾಡುವ ವಿಧಾನ:
* ಬೀಟ್‍ರೂಟ್ ಮತ್ತು ಆಲೂಗಡ್ಡೆಯನ್ನು ಅಥವಾ (ಕ್ಯಾರೆಟ್ ಇದ್ದರೆ) ಕುಕ್ಕರಿನೊಳಗೆ ಮುಳುಗುವಷ್ಟು ನೀರಿನಲ್ಲಿಟ್ಟು ಉಪ್ಪು ಹಾಕಿ ಎರಡು ಅಥವಾ ಮೂರು ಸೀಟಿ ಬರುವವರೆಗೆ ಬೇಯಿಸಿ.
Advertisement
* ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಸಾಸಿವೆ, ಉದ್ದಿನ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಈರುಳ್ಳಿ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ ಈರುಳ್ಳಿ ಬೇಯಸಿರಿ.
* ಇತ್ತ ಈರುಳ್ಳಿ ಬೇಯುತ್ತಿದ್ದಂತೆ ಅತ್ತ ಕುಕ್ಕರಿನ ಮುಚ್ಚಳವನ್ನು ತಣ್ಣಗಾಗಿದ್ದರೆ ಆಲುಗಡ್ಡೆ ಮತ್ತು ಬೀಟ್‍ರೂಟ್‍ಗಳನ್ನು ಸೌಟು ಉಪಯೋಗಿಸಿ ಚೆನ್ನಾಗಿ ಒತ್ತಿ ಮಿಶ್ರಣ ಮಾಡಿ.
* ಈರುಳ್ಳಿ ಚೆನ್ನಾಗಿ ಬೆಂದ ಬಳಿಕ ಜಜ್ಜಿದ ಆಲುಗಡ್ಡೆ ಮತ್ತು ಬೀಟ್‍ರೂಟ್, ಮೆಣಸಿನ ಪುಡಿ, ಅರಿಸಿನ ಪುಡಿ, ಕರಿಬೇವಿನ ಎಲೆ ಮತ್ತು ಕೊಂಚ ಉಪ್ಪು, ಈ ಮೊದಲೆ ಯತಾರಿಸಿದ ಮಿಶ್ರಣ ಸೇರಿಸಿ. ಸ್ವಲ್ಪ ನೀರು ಸೇರಿಸಿ ಪೂರ್ಣವಾಗಿ ನೀರು ಇಂಗುವವರೆಗೂ ಬೇಯಿಸಿ.
* ಸಿದ್ಧಪಡಿಸಿದ್ದ ದೋಸೆಹಿಟ್ಟನ್ನು ಕಾವಲಿಯ ಮೇಲೆ ತೆಳುವಾಗಿ ಹರಡಿ. ದೋಸೆ ಅರ್ಧ ಬೆಂದ ಬಳಿಕ ಕೊಂಚ ಎಣ್ಣೆಯನ್ನು ಮೇಲಿನಿಂದ ಸವರಿ ಬೇಯಿಸಿದರೆ ಬೀಟ್‍ರೂಟ್ ದೋಸೆ ಸವಿಯಲು ಸಿದ್ಧವಾಗುತ್ತದೆ.