ನಿತ್ಯವೂ ಒಂದೇ ಬಗೆಯ ಆಹಾರವನ್ನು ನಾವು ಸೇವಿಸಲಾರೆವು ಮತ್ತು ಬೇರೆ ಬೇರೆ ರುಚಿಗಳನ್ನು ನಾಲಗೆಗೆ ಬಯಸುತ್ತದೆ. ಮಾಂಸಾಹಾರವೇ ಆಗಿರಲಿ ಸಸ್ಯಾಹಾರವೇ ಆಗಿರಲಿ ನಾವಂತೂ ಬಾಯಲ್ಲಿ ನೀರೂರಿಸುವ ಖಾದ್ಯಗಳ ರುಚಿ ಸವಿಯಲು ಯಾವಾಗಲೂ ತಯಾರಾಗಿರುತ್ತೇವೆ. ಹೀಗಾಗಿ ಇಲ್ಲಿ ಸುಲಭವಾಗಿ ಆಲೂ ಪರೋಟ ಮಾಡುವ ವಿಧಾನವನ್ನು ತಿಳಿಸಲಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಆಲೂಗಡ್ಡೆ- 4
* ಹಸಿಮೆಣಸು – 4 ರಿಂದ 5
* ಮೆಣಸಿನ ಹುಡಿ – 2 ಟೀ ಸ್ಪೂನ್
* ಅಮೆಚೂರ್ ಹುಡಿ 2 ರಿಂದ 3 ಟೀ ಸ್ಪೂನ್
* ಕೊತ್ತಂಬರಿ ಸೊಪ್ಪು
* ಉಪ್ಪು ರುಚಿಗೆ ತಕ್ಕಷ್ಟು
* ಎಣ್ಣೆ ಅಥವಾ ತುಪ್ಪ
* ಗೋಧಿ ಹಿಟ್ಟು- 2ಕಪ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದಿಟ್ಟುಕೊಳ್ಳಿ. ನಂತರ ಅದನ್ನು ಚೆನ್ನಾಗಿ ಹಿಸುಕಿ ಹಸನಾಗಿಸಿಕೊಳ್ಳಬೇಕು.
Advertisement
* ಇದೀಗ ಸಣ್ಣಗೆ ಹೆಚ್ಚಿದ ಹಸಿಮೆಣಸನ್ನು, ಗರಂ ಮಸಾಲಾ ಪೌಡರ್, ಮೆಣಸಿನ ಹುಡಿ, ಅಮೆಚೂರ್ ಹುಡಿ ಮತ್ತು ಉಪ್ಪನ್ನು ಆಲೂ ಪಲ್ಯಕ್ಕೆ ಸೇರಿಸಿ, ಬೇಕಾದಲ್ಲಿ ಕರಿಬೇವು ಮತ್ತು ಸಣ್ಣಗೆ ಹೆಚ್ಚಿನ ಈರುಳ್ಳಿಯನ್ನು ಆಲೂ ಜೊತೆಗೆ ಮಿಶ್ರ ಮಾಡಿಕೊಳ್ಳಿ.
* ನಂತರ ಮತ್ತೊಂದು ಪಾತ್ರೆಯಲ್ಲಿ, ಗೋಧಿ ಹಿಟ್ಟನ್ನು ತೆಗೆದುಕೊಂಡು ಉಪ್ಪು ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಸ್ವಲ್ಪ ಸಮಯ ಕಲಸಿದ ಹಿಟ್ಟನ್ನು ಹಾಗೆಯೇ ತೆಗೆದಿಡಿ.
* ಮೊದಲಿಗೆ ನಾದಿದ ಚಪಾತಿ ಹಿಟ್ಟನ್ನು ಪೂರಿ ಗಾತ್ರಕ್ಕೆ ಲಟ್ಟಿಸಿಕೊಳ್ಳಿ.
* ನಂತರ ಮಧ್ಯಭಾಗಕ್ಕೆ ಆಲೂ ಪಲ್ಯವನ್ನಿಟ್ಟು ನಾಲ್ಕೂ ಭಾಗ ಮಡಚಿಕೊಳ್ಳಿ. 2. ಸ್ವಲ್ಪ ಗೋಧಿ ಹಿಟ್ಟನ್ನು ತೆಗೆದುಕೊಂಡು ಕಲಸಿದ ಉಂಡೆಯನ್ನು ಲಟ್ಟಿಸಿಕೊಳ್ಳಿ ಆದಷ್ಟು ಮೃದುವಾಗಿ ಲಟ್ಟಿಸಿ. ಬಿರುಸಾಗಿ ಲಟ್ಟಿಸಿದಲ್ಲಿ ಪಲ್ಯ ಹೊರಕ್ಕೆ ಬರಬಹುದು.
* ಗ್ಯಾಸ್‍ನಲ್ಲಿ ಮೇಲೆ ತವಾ ಇಟ್ಟುಕೊಂಡು ಸ್ವಲ್ಪ ಎಣ್ಣೆ ಹಾಕಿ. ತವಾ ಕಾಯುತ್ತಿದ್ದಂತೆ ನಿಧಾನವಾಗಿ ಲಟ್ಟಿಸಿದ ಪರೋಟಾವನ್ನು ತವಾದಲ್ಲಿರಿಸಿ. ಬೇಕಾದಷ್ಟು ಎಣ್ಣೆಯನ್ನು ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಪರೋಟ ಸವಿಯಲು ಸಿದ್ಧವಾಗುತ್ತದೆ.