– ಅತ್ತೆಗೆ ವ್ಯಕ್ತಿಯೊಡನೆ ಅಕ್ರಮ ಸಂಬಂಧವಿದೆ
– ಹೊಡೆದು ಮನೆಯಿಂದ ಹೊರ ಹಾಕಿದ್ದರು
ಅಹಮದಾಬಾದ್: ಅತ್ತೆಯ ಅಕ್ರಮ ಸಂಬಂಧದಿಂದ ನನ್ನ ಪತಿಯ ಜನನವಾಗಿದೆ ಎಂದು ಸೊಸೆಯೊಬ್ಬಳು ಅಹಮದಾಬಾದ್‍ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
2018ರ ಜನವರಿಯಲ್ಲಿ ವಿವಾಹವಾಗಿ ಸೊಸೆ ಮನೆಗೆ ಬಂದಿದ್ದಾಗ, ತನ್ನ ಮಗ ಅಕ್ರಮ ಸಂಬಂಧದಿಂದ ಹುಟ್ಟಿದ್ದಾನೆ ಎಂದು ಸ್ವತಃ ಅತ್ತೆಯೇ ಸೊಸೆಗೆ ತಿಳಿಸಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಅತ್ತೆಗೆ ಓರ್ವ ವ್ಯಕ್ತಿಯೊಡನೆ ಅಕ್ರಮ ಸಂಬಂಧ ಇದೆ. ನಾನು ಮದುವೆಗೆ ಮುಂಚೆಯೇ ಅವರ ಮನೆಗೆ ಆಗಾಗ ಹೋಗುತ್ತಿದ್ದೆ. ಅತ್ತೆ ಮತ್ತು ಅವಳ ಪ್ರೇಮಿ ಮದ್ಯಪಾನ ಮಾಡುತ್ತಿದ್ದರು. ಮನೆಯಲ್ಲಿಯೇ ಪಾರ್ಟಿಗಳನ್ನು ನಡೆಸುತ್ತಿದ್ದರು. ನಾನು ಮದುವೆಯಾಗಿ ಅವರ ಮನೆಗೆ ಹೋದ ಕೆಲವು ದಿನಗಳ ನಂತರ ಸಮಸ್ಯೆಗಳು ಪ್ರಾರಂಭವಾದವು. ವರದಕ್ಷಿಣೆ ತಂದಿಲ್ಲ ಎಂದು ಅತ್ತಿಗೆ ಹೀಯಾಳಿಸುತ್ತಿದ್ದರೆ, ಇತ್ತ ಪತಿ ಮನೆಯ ಜವಾಬ್ದಾರಿಯನ್ನು ಕೊಡಲು ಹೇಳು ಎಂದು ನನ್ನ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
Advertisement
ಪತಿ ಮತ್ತು ಮಗಳು ಅತ್ತೆ ಏರ್ಪಡಿಸಿದ್ದ ಪಾರ್ಟಿಗೆ ಒಮ್ಮೆ ಹೋಗಿದ್ದರು. ವಾಪಸ್ ಮನೆಗೆ ಬಂದಾಗ ನನ್ನ ಮಗಳು ಸಿಗರೇಟ್ ಮತ್ತು ಮದ್ಯದ ವಾಸನೆ ಬರುತ್ತಿದ್ದಳು. ಈ ಬಗ್ಗೆ ನನ್ನ ಪತಿಯನ್ನು ಪ್ರಶ್ನಿಸಿದರೆ ನನಗೆ ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ನನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದೇನೆ ಎಂದು ಪತಿ ಮತ್ತು ಅತ್ತೆಯ ವಿರುದ್ಧ ಸೊಸೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
Advertisement
ಮಹಿಳೆ ಗರ್ಭಿಣಿಯಾಗಿದ್ದಾಗ ಲಿಂಗ ಪರೀಕ್ಷೆ ಮಾಡಿಸುವಂತೆ ಒತ್ತಾಯಿಸಿದ್ದಾರೆ. ಒಪ್ಪದೆ ಇದ್ದಾಗ ಮಹಿಳೆಗೆ ಹೊಡೆದು ಕಿರುಕುಳ ಕೊಟ್ಟಿದ್ದಾರೆ. ನಂತರ ಕೆಲವು ದಿನಗಳ ನಂತರ ಹೆಣ್ಣು ಮಗುವಿಗೆ ಮಹಿಳೆ ಜನ್ಮ ನೀಡಿದ್ದಾಳೆ. ಈ ಕಾರಣಕ್ಕಾಗಿ ಅತ್ತೆ ಮತ್ತು ಆಕೆಯ ಪ್ರೇಮಿ ವರದಕ್ಷಿಣೆ ಕೊಟ್ಟಿಲ್ಲ ಹಾಗಾಗಿ ಇವಳ ಕುಟುಂಬದೊಂದಿಗೆ ನಮಗೆ ಸಂಬಂಧ ಬೇಡ ಎಂದು ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 498 (ಎ) (ಆಸ್ತಿಗಾಗಿ ಯಾವುದೇ ಕಾನೂನುಬಾಹಿರ ಬೇಡಿಕೆಯನ್ನು ಪೂರೈಸಲು ಯಾವುದೇ ವ್ಯಕ್ತಿಯನ್ನು ಒತ್ತಾಯಿಸುವುದು ಅಥವಾ ಮಹಿಳೆಯ ಕಿರುಕುಳ ನೀಡುವುದು) 294 (ಬಿ) 323, ಮತ್ತು 114ರ ಅಡಿಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ.