ಸೋಂಕಿತರ ಮನೆ ಬಾಗಿಲಿಗೆ ಶುದ್ಧ, ಸ್ವಚ್ಛ, ಉಚಿತ ಆಹಾರ

Public TV
1 Min Read
FOOD copy

– ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

ಗಾಂಧಿನಗರ: ಕೊರೊನಾ ಆತಂಕ ಮತ್ತೆ ಸೃಷ್ಟಿಯಾಗಿದೆ. ವಡೋದರಾದ ವ್ಯಕ್ತಿಯೊಬ್ಬರು ಕೊರೊನಾ ಸೊಂಕಿತರ ಮನೆ ಬಾಗಿಲಿಗೆ ಶುದ್ಧ, ಸ್ವಚ್ಛ, ಉಚಿತ ಆಹಾರವನ್ನು ತಲುಪಿಸುತ್ತಿದ್ದು, ಅವರ ಈ ಮಾನವೀಯನಡೆ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

corona virus 1

ಕೊರೊನಾತಂಕದ ನಡುವೆ ನಾವು ನಿಮ್ಮ ಜೊತೆಗಿದ್ದೇವೆ. ಒಂದು ವೇಳೆ ನಿಮ್ಮ ಕುಟುಂಬ ಕೊರೊನಾದಿಂದ ನಲುಗುತ್ತಿದ್ದರೆ, ನಾವು ನಿಮಗೆ ಶುಚಿಯಾದ ಊಟ, ತಿಂಡಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ. ಕ್ವಾರಂಟೈನ್ ಇರುವವರೆಗೂ ಉಚಿತವಾಗಿ ಈ ಸೇವೆ ನೀಡುತ್ತೇವೆ ಎಂದು ವಡೋದರಾದ ಶುಭಲ್ ಶಾ ಟ್ವೀಟ್ ಮಾಡಿದ್ದಾರೆ.

ಇಂತಹ ಕಠಿಣ ಸಂದರ್ಭದಲ್ಲಿ ಶಾ ಮಾನವೀಯ ಗುಣಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಾನು, ತಮ್ಮವರೇ ಎಂದು ಯೋಚಿಸುತ್ತಿರುವ ಇಂತಹ ಸಂದರ್ಭದಲ್ಲಿ ಇಂತಹ ನಿಸ್ವಾರ್ಥ ಸೇವೆ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಶುಭಲ್ ಶಾ ಟ್ವೀಟ್ 9,800 ಕ್ಕೂ ಹೆಚ್ಚು ಲೈಕ್‍ಗಳಿಸಿದೆ. ಶಾ ಅವರ ನಿಸ್ವಾರ್ಥ ಸೇವೆಗಾಗಿ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಅನೇಕರು ಶಾ ಮತ್ತು ಅವರ ತಂಡಕ್ಕೆ ಅಗತ್ಯವಿರುವವರಿಗೆ ಆಹಾರವನ್ನು ನೀಡುವಲ್ಲಿ ಸಹಾಯ ಮಾಡಲು ಸಹಕರಿಸುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ.

Share This Article