Wednesday, 23rd May 2018

Recent News

`ಪೈಲ್ವಾನ್’ ಆಗಲು ಮೊದಲ ಬಾರಿಗೆ ಜಿಮ್ ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್

ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರವನ್ನು ಮುಗಿಸಿದ  ಕಿಚ್ಚ ಸುದೀಪ್  ಸದ್ಯಕ್ಕೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಹೆಬ್ಬುಲಿಯ ಸಕ್ಸಸ್ ನಂತರ ಕಿಚ್ಚ ಸುದೀಪ್ ಅದೇ ತಂಡದ ಜೊತೆಯಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿ ಅನೇಕ ದಿನಗಳು ಕಳೆದಿವೆ. `ಪೈಲ್ವಾನ್’ ಸಿನಿಮಾ ಮೂಲಕ ಕಿಚ್ಚ ಮತ್ತು ಗಜಕೇಸರಿ ಕೃಷ್ಣ ಒಂದಾಗುತ್ತಿದ್ದಾರೆ. ಆದ್ದರಿಂದ ಸುದೀಪ್ ತಮ್ಮ ಮುಂದಿನ ಸಿನಿಮಾದ ಪಾತ್ರಕ್ಕಾಗಿ ವರ್ಕ್ ಔಟ್ ಶುರು ಮಾಡಿದ್ದಾರೆ.

ಸುದೀಪ್ ಚುನಾವಣೆಗೆ ಮುಂಚೆ ಯುವಕರಿಗೆ ಸಂದೇಶ ನೀಡಿದ್ದಾರೆ. ಅವರೆ ತಿಳಿಸಿರುವಂತೆ ಈ ವರ್ಷ ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಅದರಲ್ಲಿ ಮೊದಲಿಗೆ ಪೈಲ್ವಾನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾಗೆ ಸಖತ್ ತಯಾರಿ ಶುರು ಮಾಡಿದ್ದು, ಇದೇ ಮೊದಲ ಬಾರಿಗೆ ಜಿಮ್ ಗೆ ಹೋಗಿ ಪ್ರತಿ ನಿತ್ಯ ದೇಹವನ್ನ ದಂಡಿಸುತ್ತಿದ್ದಾರೆ.

ಸುದೀಪ್ ಈ ಬಾರಿ ಪ್ರೇಕ್ಷಕರ ಮುಂದೆ ಬೇರೆಯದ್ದೇ ಸ್ಟೈಲ್ ನಲ್ಲಿ ಬರಲಿದ್ದಾರೆ. ಪೈಲ್ವಾನ್ ಹೆಸರಿಗೆ ತಕ್ಕಂತೆ ಬಾಡಿ ಬಿಲ್ಡ್ ಮಾಡುತ್ತಿದ್ದಾರೆ. ಜೆಪಿ ನಗರದ ಖಾಸಗಿ ಜಿಮ್ ನಲ್ಲಿ ಕಿಚ್ಚ ವರ್ಕ್ ಮಾಡುತ್ತಿದ್ದು, ವಿಕ್ರಂ ಎನ್ನುವವರು ಟ್ರೈನಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ನಟ ಅರುಣ್ ಗೌಡ ಕೂಡ ಸುದೀಪ್ ಹೋಗುವ ಜಿಮ್ ನಲ್ಲಿ ಪ್ರತಿ ನಿತ್ಯ ವರ್ಕ್ ಔಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸುದೀಪ್ ಅವರನ್ನ ಭೇಟಿ ಮಾಡಿರುವ ಅರುಣ್  ಸುದೀಪ್ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.

ಬಿಗ್ ಬಾಸ್ ಶೋ ಮುಗಿಸಿಕೊಂಡು ಬಂದಿರುವ ಸುದೀಪ್ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ನಂತರ `ಪೈಲ್ವಾನ್’ ಸಿನಿಮಾದ ಚಿತ್ರೀಕರಣವನ್ನು ಶರು ಮಾಡುತ್ತಾರೆ.

Leave a Reply

Your email address will not be published. Required fields are marked *