Sunday, 24th June 2018

Recent News

1 day ago

ಸಹಾಯ ಕೇಳಿದ ಅಂಧ ಜೋಡಿಗೆ ಬೈದು ಕಳಿಸಿದ ಶಾಸಕ ರೇವಣ್ಣ!

ಹಾಸನ: ಸಹಾಯ ಯಾಚಿಸಿದ ಅಂಧ ಜೋಡಿಗೆ ಸಚಿವರೊಬ್ಬರು ಬೈದು ವಾಪಸ್ ಕಳಿಸಿದ ಘಟನೆ ಹಾಸನದ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ. ಅಂಧ ಯುವಕ ಅರಸೀಕೆರೆಯ ದೇವೀಹಳ್ಳಿ ಮೂಲಕ ದಯಾನಂದ ಮತ್ತು ಹೊಳೇನರಸೀಪುರದ ಅಂಧ ಯುವತಿ ಮದುವೆ ಆಗಲು ಇಚ್ಚಸಿದ್ದರು. ಸಚಿವ ರೇವಣ್ಣ ಬಳಿಗೆ ತಮ್ಮ ಮದುವೆಗೆ ಸಹಾಯ ಮಾಡುವಂತೆ ಮನವಿ ಮಾಡಿದರು. ಆದರೆ ಸಚಿವ ರೇವಣ್ಣ ನೀವು ಮುಖ್ಯಮಂತ್ರಿಗಳ ಬಳಿ ಹೋಗಿ ಎಂದು ಅಂಧ ಜೋಡಿಯನ್ನು ಬೈದು ಕಳಿಸಿದ್ದಾರೆ. ಜಿಲ್ಲೆಯ ಹೊಳೆನರಸೀಪುರ ತಾಲೂಕು ಪಂಚಾಯತ್ ನ ಸಭಾಂಗಣದಲ್ಲಿ ಸಭೆ […]

1 day ago

ಉನ್ನತ ಶಿಕ್ಷಣ ಖಾತೆ ಬೇಡ್ವೇ ಬೇಡ ಅಂತಿದ್ದ ಜಿಟಿಡಿ ದಿಢೀರ್ ಒಪ್ಪಿಕೊಂಡಿದ್ಯಾಕೆ?

ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಬೇಡ ಬೇಡ ಅಂತಿದ್ದ ಜಿಟಿ ದೇವೇಗೌಡ ದಿಢೀರ್ ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಯೊಂದು ಇದೀಗ ಮೂಡಿಬಂದಿದೆ. ಉನ್ನತ ಶಿಕ್ಷಣ ಸಚಿವರ ಸಲಹೆಗಾರರಾಗಿದ್ದ ಪ್ರೊ. ರಂಗಪ್ಪ ಅವರೇ ಜಿಟಿ ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವ ಸ್ಥಾನ ನಿರಾಕರಿಸಲು ಕಾರಣ ಎನ್ನಲಾಗಿದೆ. ಆದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊನೆ ಕ್ಷಣದಲ್ಲಿ ಸಲಹೆಗಾರರನ್ನಾಗಿ...

ಬೆಳ್ಳಂಬೆಳಗ್ಗೆ ದಂಪತಿಯ ಬರ್ಬರ ಹತ್ಯೆ- ಬೆಚ್ಚಿಬಿದ್ದ ಹತ್ತಿಮತ್ತೂರು ಗ್ರಾಮಸ್ಥರು!

1 day ago

ಹಾವೇರಿ: ದುಷ್ಕಮಿಗಳು ಬೆಳ್ಳಂಬೆಳಗ್ಗೆ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ನಡೆದಿದೆ. 40 ವರ್ಷದ ಮಾರ್ತಾಡಪ್ಪ ಅಂಬಿಗೇರೆ ಹಾಗೂ 26 ವರ್ಷದ ಸುಧಾ ಅಂಬಿಗೇರೆ ಕೊಲೆಯಾಗಿರುವ ದುರ್ದೈವಿಗಳು. ದುಷ್ಕರ್ಮಿಗಳು ಬೆಳಗಿನ ಜಾವ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ...

ಕರ್ನಾಟಕದಲ್ಲಿ ಹೇಳಿಕೊಂಡಿದ್ದ ಹರಕೆ ತೀರಿಸಲು ಕೈಲಾಸ ಯಾತ್ರೆಗೆ ಅನುಮತಿ ಕೇಳಿದ ರಾಹುಲ್ ಗಾಂಧಿ

1 day ago

ನವದೆಹಲಿ: ಕೈಲಾಸ ಯಾತ್ರೆ, ಮಾನಸ ಸರೋವರಕ್ಕೆ ಹೋಗಲು ನಿಗದಿಗೊಳಿಸಿದ್ದ ಅವಧಿ ಮುಗಿದಿದ್ರೂ ವಿಶೇಷ ಅನುಮತಿ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿನಂತಿಸಿಕೊಂಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣಾ ವೇಳೆ ನಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕೊಂಚ ಏರುಪೇರಾಗಿತ್ತು. ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿದರೆ...

ಅತಿಥಿಯಾಗಿ ಬಂದು ಬೆಳ್ಳಿ ಸಾಮಾನುಗಳನ್ನು ಚೀಲದಲ್ಲಿ ತುಂಬಿಸ್ತಿದ್ದಾಗ ಸಿಕ್ಕಿಬಿದ್ದ ಕಳ್ಳಿ

1 day ago

ಮೈಸೂರು: ಉಪನಯನ ಕಾರ್ಯಕ್ರಮಕ್ಕೆ ಅತಿಥಿಗಳ ವೇಷದಲ್ಲಿ ಬಂದು ಕಳ್ಳತನಕ್ಕೆ ಮುಂದಾಗಿದ್ದ ಮಹಿಳೆಯನ್ನು ಲಕ್ಷ್ಮಿಪುರಂ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಿಪುರಂ ನಗರದ ಹೊಯ್ಸಳ ಕರ್ನಾಟಕ ಸಭಾಭವನದಲ್ಲಿ ಉಪನಯನ ಕಾರ್ಯಕ್ರಮ ನಡೆಯುತ್ತಿತ್ತು. ಎಲ್ಲರು ಉಪನಯನದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಇಲ್ಲಿಗೆ ಅತಿಥಿ ರೂಪದಲ್ಲಿ ಜನರ...

ಪಾಲಿಕೆ ಅಧಿಕಾರಿಗಳ ವೇಷದಲ್ಲಿ ಬಂದು 280 ಗ್ರಾಂ ಚಿನ್ನಾಭರಣ, 8 ಸಾವಿರ ನಗದು ಕದ್ದು ಎಸ್ಕೇಪ್!

1 day ago

ಮೈಸೂರ: ಮಹಾನಗರ ಪಾಲಿಕೆಯ ಅಧಿಕಾರಿಗಳ ವೇಷದಲ್ಲಿ ಬಂದು ಮನೆಗಳ್ಳತನ ಮಾಡಿದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ನಡೆದಿದೆ. ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಬಂದ ಇಬ್ಬರು ಖದೀಮರು ಮನೆಯೊಂದರಲ್ಲಿ ಕಳ್ಳತನ ಮಾಡಿದ್ದಾರೆ. ಲೀಲಾದೇವಿ ಎಂಬವರಿಗೆ ಸೇರಿದ ಮನೆಯಲ್ಲಿ ಚಿನ್ನದ ಓಲೆ,...

ಗರ್ಭಿಣಿ ಪತ್ನಿಯನ್ನ ನದಿಗೆ ದೂಡಿ ಕೊಲೆಗೆ ಯತ್ನಿಸಿದ ಪತಿಮಹಾಶಯ!

2 days ago

ಹಾವೇರಿ: ಪತಿ ಮಹಾಶಯನೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ನದಿಗೆ ತಳ್ಳಿ ಕೊಲೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಮಹಿಳೆ ಬದುಕುಳಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಚಿಕ್ಕಕಬ್ಬಾರ ಗ್ರಾಮದ ನಿವಾಸಿ ರೂಪೇಶ್ ಗೌಡ ಕೊಲೆ ಮಾಡಲು ಮುಂದಾದ ವ್ಯಕ್ತಿ....

ಆಪ್ತನ ಕೊಲೆಯ ಬಗ್ಗೆ ಶಾಸಕ ಸಿಟಿ ರವಿ ಹೇಳಿದ್ದು ಹೀಗೆ

2 days ago

ಚಿಕ್ಕಮಗಳೂರು: ಸಮಾಜಘಾತುಕ ಶಕ್ತಿಗಳು ತಲೆ ಎತ್ತುವುದನ್ನು ತಡೆಯಲು ತಡೆಗೋಡೆಯಾಗಿದ್ದ ಬಿಜೆಪಿ ಮುಖಂಡ ಮಹಮದ್ ಅನ್ವರ್ ಅವರನ್ನು ಜೈಲಿನಲ್ಲಿ ಇದ್ದುಕೊಂಡೇ ಆಗಂತುಕರು ಸ್ಕೆಚ್ ಹಾಕಿ ಹತ್ಯೆ ಮಾಡಿಸಿದ್ದಾರೆ ಅಂತ ಶಾಸಕ ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...